ಕೊಲ್ಲಿ ನಾಡಿನ ಭಕ್ತ ಜನಸಾಗರದ ನಡುವೆ ದುಬಾಯಿಯಲ್ಲಿ ಮನಸೆಳೆದ ವಿಜೃಂಬಣೆಯ ವರಮಾಹಾಲಕ್ಷ್ಮೀ ಪೂಜಾ ವೈಭವ

Spread the love

ಯು.ಎ.ಇ: ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಕರ್ನಾಟಕದ ಸುಮಂಗಲೆಯರು ಸಂಘಟಿತರಾಗಿರುವ ಶ್ರೀ ವರ ಮಹಾ ಲಕ್ಷ್ಮೀ ಸಮಿತಿಯ ಆಶ್ರಯದಲ್ಲಿ ದುಬಾಯಿ ಅಲ್ ಗಿಸೆಸ್ ನಲ್ಲಿರುವ ಇಂಡಿಯಾ ಅಕಾಡೆಮಿಕ್ ಸ್ಕೂಲ್ ಸಭಾಂಗಣದಲ್ಲಿ 2015 ಅಗಸ್ಟ್ 28ನೇ ತಾರೀಕು ಶುಕ್ರವಾರದ ಶುಭ ಸಂಜೆ 3.00 ಗಂಟೆಯಿಂದ ಸುಮಂಗಲೆಯರ ನೇತ್ರತ್ವದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜಾ ಆಚರಿಸಲಾಯಿತು.  ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದ ಎಲ್ಲಾ ಭಕ್ತಾಧಿಗಳು ಪೂಜಾ ವಿಧಿವಿಧಾನಗಳಲ್ಲಿ ಭಕ್ತಿ ಶೃದ್ಧೆಯಿಂದ ಪಾಲ್ಗೊಂಡು ಮಹಾಪ್ರಸಾದವನ್ನು ಸ್ವೀಕರಿಸಿ ಪುನೀತರಾದರು.

ಸುಮಂಗಲೆಯರ ಭಕ್ತಿ ಶ್ರದ್ಧೆ, ಶಿಸ್ತಿನ ಪೂಜೆಗೆ ಸಾಕ್ಷಿಯಾದ ಸಭಾಂಗಣ

ಸುಮಂಗಲೆಯರು ರಚಿಸಿದ ಅಕರ್ಷಕ ಪುಷ್ಪಾಲಂಕೃತ ರಂಗವಲ್ಲಿ ವಿನ್ಯಾಸದ ತುಳಸಿ ವೃಂದಾವನಕ್ಕೆ ಹಣತೆಯನ್ನು ಹಚ್ಚಿ ನಮಸ್ಕರಿಸಿದ ನಂತರ ಪೂಜಾ ಸಂಕಲ್ಪದಲ್ಲಿ ಸಮಿತಿಯ ಸದಸ್ಯ ಸುಮಂಗಲೆಯರು ಭಾಗಿಗಳಾಗಿ ಪೂಜಾ ಕಲಶದಲ್ಲಿ ಪ್ರತಿಷ್ಠಾಪಿಸಲಾದ ದೇವರಿಗೆ ಜ್ಯೋತಿಯನ್ನು ಬೆಳಗಿಸಿ ಮಹಾಲಕ್ಷ್ಮೀಯನ್ನು ಸ್ತುತಿಸುತ್ತಾ, ಮಹಾಲಕ್ಷ್ಮೀ ಅಷ್ಟಕಂ, ಹಯಗಿರಿ ನಂದಿನಿ, ವರಮಹಾ ಲಕ್ಷ್ಮೀ ಅಷ್ಟೋತ್ತರ ಪಠಿಸಿದರು.

ಶ್ರೀ ವಾಸುದೇವ ಭಟ್ ರವರಿಂದ ನಡೆದ ಪೊಜಾ ಕೈಂಕರ್ಯ

ಅಕರ್ಷಕ ಪುಷ್ಪಾಲಂಕಾರದ ಭವ್ಯ ವೇದಿಕೆ ಶ್ರೀ ರಾಜೇಶ್ ಕುತ್ತಾರ್ ತಂಡದವರಿಂದ ನಿರ್ಮಿಸಲ್ಪಟ್ಟಿದ್ದು 9ನೇ ವರ್ಷದ ಪೂಜಾ ವಿದಿವಿಧಾನಗಳನ್ನು ಉಡುಪಿ ಜಿಲ್ಲೆಯ ಹಿರಿಯಡ್ಕ ದಿಂದ ಆಗಮಿಸಿದ ಶ್ರೀ ವಾಸುದೇವ ಭಟ್, ಶ್ರೀ ವರಮಾಹಾಲಕ್ಷ್ಮೀ ಪೂಜಾ ವಿದಿವಿಧಾನಗಳನ್ನು ನೆರವೇರಿಸಿಕೊಟ್ಟರು ಪೂಜೆಯ ನೇತ್ರತ್ವವನ್ನು ಶ್ರೀ ರಘುಭಟ್ ವಹಿಸಿಕೊಂಡಿದ್ದು ಸಹಾಯಕರಾಗಿ ಶ್ರೀ ಲಕ್ಷ್ಮೀಶ ಭಟ್ ಸಹಕರಿಸಿದ್ದರು. ಪೂಜೆಯಲ್ಲಿ ಸರ್ವರ ಪರವಾಗಿ ಶ್ರೀಮತಿ ಸ್ಮಿತಾ ಉದಯ ಕುಮಾರ್ ಮತ್ತು ಶ್ರೀ ಉದಯಕುಮಾರ್ ಕಟೀಲ್ ದಂಪತಿಗಳು ಪೂಜೆಯಲ್ಲಿ ಭಾಗಿಗಳಗಿದ್ದರು.

ಡಾ| ಹರ್ಷಕುಮಾರ್ ರೈ ಮಾಡವು ರವರ ಅಷ್ಟಕ್ಷೇತ್ರ ಗಾನವೈಭವ ಸಿ.ಡಿ. ಬಿಡುಗಡೆ

ದಕ್ಷಿಣ ಭಾರತದ ಎಂಟು ಪ್ರಸಿದ್ದ ದೇವಾಲಯಗಳಾದ ಶ್ರೀ ಕ್ಷೇತ್ರ ತಿರುಪತಿ, ಶ್ರೀ ಕ್ಷೇತ್ರ ಪೊಳಲಿ, ಶ್ರೀ ಕ್ಷೇತ್ರ ಸುಬ್ರಹ್ಮಣ್ಯ, ಶ್ರೀ ಕ್ಷೇತ್ರ ಶಬರಿಮಲೆ, ಶ್ರೀ ಕ್ಷೇತ್ರ ಕೊಲ್ಲೂರು, ಶ್ರೀ ಕ್ಷೇತ್ರ ಕಟೀಲು, ಶ್ರೀ ಕ್ಷೇತ್ರ ಧರ್ಮಸ್ಥಳ, ಶ್ರೀ ಕ್ಷೇತ್ರ ಪುತ್ತೂರು ದೇವಾಲಯದ ಬಗ್ಗೆ ಪುತ್ತೂರು ಉಮೇಶ್ ನಾಯಕ್ ಸಾಹಿತ್ಯ ರಚನೆ, ಶ್ರೀ ಪುತ್ತೂರು ನರಸಿಂಹನಾಯಕ್, ಶ್ರೀಮತಿ ಸುರೇಕಾ ಕೆ. ಎಸ್. ಕಂಠಸಿರಿಯಲ್ಲಿ ಮೂಡಿಬಂದಿರುವ  ಭಕ್ತಿಗೀತೆಗಳ ಸಿ.ಡಿ. ಯನ್ನು ಶ್ರೀ ವರಮಹಾಲಕ್ಷ್ಮೀ ಪೂಜಾ ವೇದಿಕೆಯಲ್ಲಿ ದೇವರ ಸನ್ನಿದಿಯಲ್ಲಿ ಪುರೋಹಿತರಾದ ಶ್ರೀ ವಾಸುದೇವ ಭಟ್ ಹಿರಿಯಡ್ಕ ರವರು ಆಶಿರ್ವಾದೊಂದಿಗೆ ಬಿಡುಗಡೆ ಗೊಳಿಸಿದರು. ವೇದಿಕೆಯಲ್ಲಿ ಶ್ರೀ ವರಮಹಾಲಕ್ಷ್ಮೀ ಸಮಿತಿಯ ಮುಖ್ಯಸ್ಥರಾದ ಶ್ರೀಮತಿ ಸುವರ್ಣ ಸತೀಶ್ ರವರು ಬಿಡುಗಡೆಯಾದ ಸಿ.ಡಿ.ಯನ್ನು ಸ್ವೀಕರಿಸಿ ಶ್ರೀ ಸರ್ವೋತ್ತಮ ಶೆಟ್ಟಿ ಮತ್ತು ಸತೀಶ್ ಪೂಜಾರಿಯವರಿಗೆ ನೀಡುವುದರ ಮೂಲಕ ಲೋಕಾರ್ಪಣೆ ಮಾಡಿದರು. ಸಿ.ಡಿ.ಯ ನಿರ್ಮಾಣದಲ್ಲಿ ಪೂರ್ಣ ಬೆಂಬಲ ಸಹಕಾರ ನೀಡಿದ ಶ್ರೀ ಮಿತ್ರಂಪಾಡಿ ಜಯರಾಂ ರೈಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮ ನಿರ್ವಹಣೆಯನ್ನು ಶ್ರೀ ಬಿ. ಕೆ. ಗಣೇಶ್ ರೈ ನೆರವೇರಿಸಿಕೊಟ್ಟರು.

ವಿಜೃಂಬಣೆಯ ಪೂಜಾ ಯಶಸ್ಸಿನ ಹಿಂದಿನ ಗುಟ್ಟು

ಪೂಜಾ ಪ್ರಾರಂಭದ ಹಂತದಿಂದ ಮುಕ್ತಾಯದ ಹಂತದವರೆಗೆ ಸುಮಂಗಲೆಯರು ತಮಗೆ ವಹಿಸಿಕೊಟ್ಟಿದ್ದ ಜವಬ್ಧಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದ್ದು, ಎಲ್ಲ ಸುಂಗಲೆಯರು ಒಂದೇ ಕಡು ಸಿಂಧೂರ ವರ್ಣದ ಜರಿ ಸೀರೆಯನ್ನುಟ್ಟು ಅಭರಣಗಳೊಂದಿಗೆ ಪತಿವೃತಾ ಧರ್ಮದ ಲಕ್ಷಣಗಳನ್ನು ಸಮರ್ಪಕವಾಗಿ ಉಳಿಸಿಕೊಂಡ್ಡಿದ್ದರು. ಮಾಂಗಲ್ಯಧಾರಿಣಿಗಳಾದ ಸುಮಂಗಲೆಯರಲ್ಲಿ ಮೂಡಿಬಂದಿದ್ದ ಭಕ್ತಿ, ಶಿಸ್ತು, ಸಂಯಮ, ಕಾರ್ಯ ಚಟುವಟಿಕೆಗಳಲ್ಲಿ ಇದ್ದ ಶೃದ್ಧೆ, ನಗುಮೊಗದ ಅತಿಥಿ ಸತ್ಕಾರ, ಇವೆಲ್ಲವೂ ಮಹಿಳೆಯರೇ ಅತ್ಯುತ್ತಮವಾಗಿ ಆಚರಿಸಿದ ಕಾರ್ಯಕ್ರಮದ ಯಶಸ್ಸಿನ ಹಿಂದಿನ ಗುಟ್ಟು.

ಭಕ್ತಿಸಂಗೀತದಲ್ಲಿ ಭಾಗವಹಿಸಿದ ಎಲ್ಲಾ ಗಾಯಕರು, ಸಂಗೀತಗಾರರಿಗೆ ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶ್ರೀಮತಿ ರೇಶ್ಮಾ ಶೆಟ್ಟಿ ಯವರು ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಕಾರ್ಯಕಾರಿ ಸಮಿತಿಯ ಶ್ರೀಮತಿ ಸುವರ್ಣ ಸತೀಶ್ ಪೂಜಾರಿ ಯವರ ನೇತ್ರತ್ವದಲ್ಲಿ ಕಾರ್ಯಕಾರಿ ಸಮಿತಿಯ ಇನ್ನಿತರ ಸದಸ್ಯರು  ಶ್ರೀಮತಿಯರಾದ ಜಯಶ್ರೀ ಸುಧಾಕರ್ ಪೂಜಾರಿ, ಶ್ಯಾಮಲ ಕೃಷ್ಣ ಪೂಜಾರಿ, ಅರುಣಾ ಜಗದೀಶ್, ಶ್ರೀಯುತರುಗಳಾದ ಉದಯ ಕುಮಾರ್ ಕಟೀಲ್, ಜಗನ್ನಾಥ್ ಬೆಳ್ಳಾರೆ, ರಮಾನಂದ್ ಬೆಳಪು, ಸತೀಶ್ ಉಳ್ಳಾಲ್, ಸುಧಾಕರ್ ಪೂಜಾರಿ, ರಾಜೇಶ್ ಕುತ್ತಾರ್, ಬಾಲಕೃಷ್ಣ ಸಾಲಿಯಾನ್, ಪ್ರಕಾಶ್ ಪಕ್ಕಳ ಹಾಗೂ ಹಲವಾರು ಸ್ನೇಹಿತಮಿತ್ರರು ತಮ್ಮ ಹೆಚ್ಚಿನ ಸೇವೆ ಸಲ್ಲಿಸಿದರು.  ಮಾಧ್ಯಮ ಪ್ರತಿನಿದಿಗಳ ಸೇವೆಯೂ ಸಹ ಸ್ಮರಣೀಯವಾಗಿದೆ.

ಯು.ಎ.ಇ. ವಿವಿಧ ಭಾಗಗಳಿಂದ ಆಗಮಿಸಿದ ಹಲವಾರು ಗಣ್ಯರು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯಲ್ಲಿ ಅಹ್ವಾನಿತ ಭಕ್ತಬಂಧುಗಳು ಅನಂದಪರವಶರಾದರು. ಕೊನೆಯಲ್ಲಿ ತೀರ್ಥಪ್ರಸಾದ, ಸುಮಂಗಲೆಯರು, ಬಾಗಿನ, ಸರ್ವರು ಮಹಾಪ್ರಸಾದವನ್ನು ಸೀಕರಿಸಿದರು.

“ಸರ್ವೇ ಜನಾ: ಸುಖಿನೋ ಭವಂತು”

Photo Album


Spread the love