ಕೊಲ್ಲಿ ರಾಷ್ಟ್ರದಲ್ಲಿ ಕೊಡಗು-ದ.ಕ ಗೌಡ ಒಕ್ಕೂಟದ ಕ್ರಿಕೆಟ್ ಪಂದ್ಯಾಟ

ಫ್ರೆ .22 ದುಬೈ ಸಮೀಪದ ಅಜ್ಮಾನ್ ನಲ್ಲಿರುವ ಹೆಲಿಯೋ ಕ್ರಿಕೆಟ್ ಮೈದಾನದಲ್ಲಿ ಕೊಡಗು-ದ.ಕ ಗೌಡ ಯುವಕರಿಗೆ ಒಕ್ಕೂಟದ ವತಿಯಿಂದ ಸೀಮಿತ ಓವರುಗಳ ಕ್ರಿಕೆಟ್ ಪಂದ್ಯವನ್ನು ಆಯೋಜಿಸಲಾಗಿತ್ತು .ಪಂದ್ಯಾಟದಲ್ಲಿ ದುಬೈ ಡೇರ್ ಡೆವಿಲ್ಸ್, ದುಬೈ ರಾಯಲ್ಸ್, ಶಾರ್ಜಾ ಶೇಕರ್ಸ್, ರಾಯಲ್ಸ್ ಬುಲ್ಸ್ ಅಬುಧಾಬಿ ಹೆಸರಿನ ನಾಲ್ಕು ತಂಡಗಳು ಭಾಗವಹಿಸಿದ್ದವು. ದುಬೈ ಡೇರ್ ಡೆವಿಲ್ಸ್ ತಂಡದ ನಾಯಕನಾಗಿ ಪವನ್ ಪೋರೆಯನ, ದುಬೈ ರಾಯಲ್ಸ್ ಪರವಾಗಿ ರೋಶನ್ ಕಂಪ, ಶಾರ್ಜಾ ಶೇಕರ್ಸ್ ಗೆ ಕಾರ್ತಿಕ್ ಪಳಂಗಾಯ ,ರಾಯಲ್ಸ್ ಬುಲ್ಸ್ ಅಬುಧಾಬಿ ತಂಡಕ್ಕೆ ಯಶ್ ಪುತ್ತೂರು ನಾಯಕತ್ವ ವಹಿದ್ದರು.

ಕೊಲ್ಲಿ ಮರುಭೂಮಿಯಲ್ಲಿ ಮಿಂಚಿದ ನಮ್ಮ ಗ್ರಾಮೀಣ ಪ್ರತಿಭೆಗಳು

ನಾಲ್ಕು ತಂಡಗಳು ಉತ್ತಮ ಸ್ಪರ್ಧೆಯನ್ನು ನೀಡಿದ್ದು .ಕೊನೆಗೂ ಚಾಂಪಿಯನ್ ಕಿರೀಟವನ್ನು ರಾಯಲ್ ಬುಲ್ಸ್ ಅಬುಧಾಬಿ ತನ್ನದಾಗಿಸಿಕೊಂಡಿದೆ. ರನ್ನರ್ ಆಫ್ ಟ್ರೋಫಿಯನ್ನು ದುಬೈ ರಾಯಲ್ಸ್ ಪಡೆದುಕೊಂಡಿದೆ. ಪಂದ್ಯಾಟದ “ಪಂದ್ಯ ಶ್ರೇಷ್ಠ “ನಾಗಿ ಚೊಕ್ಕಾಡಿ ಶರತ್ ಕುಶಾಲಪ್ಪ “ಶರಣಿ ಶ್ರೇಷ್ಠ” ಮತ್ತು ಉತ್ತಮ ದಾಂಡಿಗನಾಗಿ ರೋಶನ್ ಕಂಪ, “ಉತ್ತಮ ಎಸೆತಗಾರ” ನಾಗಿ ರಾಕೇಶ್ ಕುದ್ವ ಪ್ರಶಸ್ತಿಗಳನ್ನು ಪಡೆದುಕೊಂಡರು. ಸುನಿಲ್ M.V, ಹರೀಶ್ ಕೋಡಿ, ವಿಶ್ವನಾಥ ದೋಳ್ಪಾಡಿ ಗಣೇಶ ಅಚ್ಚಂದಿರ ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ಮನೋಜ್ ಮತ್ತು ಗೋವಿಂದ್ ಎಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು. ದಿನೇಶ್ ಕುಶಾಲಪ್ಪ ಅತ್ಯುತ್ತಮ ಆಟಗಾರರ ಪ್ರಶಸ್ತಿಯ ಪ್ರಾಯೋಜಕರಾಗಿದ್ದರು. ಭಾಗವಹಿಸಿದ ಎಲ್ಲಾ ಆಟಗಾರರಿಗೆ ಕರಣೆಯನ ಸುನಿಲ್ ರವರು ಗೌರವ ಪೂರ್ವಕ ಸ್ಮರಣಿಕೆಗಳನ್ನು ನೀಡಿದರು. “ಸ್ಟಾರ್ ಡ್ರಿಂಕ್ಸ್ “ನೀರು ಹಾಗೂ ತಂಪು ಪಾನೀಯದ ವ್ಯವಸ್ಥೆ ಮಾಡಿತ್ತು. ನೂರಕ್ಕೂ ಅಧಿಕ ಗೌಡ ಸಮಾಜದ ಕ್ರಿಕೆಟ್ ಅಭಿಮಾನಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply