ಕೋಟತಟ್ಟು ನಗದು ರಹಿತ ಗ್ರಾಮ ಪಂಚಾಯಿತಿ: ಜನವರಿ 15 ಕ್ಕೆ ಸಚಿವ ರಮೇಶ್ ಕುಮಾರ್‍ರಿಂದ ಚಾಲನೆ

ಕೋಟತಟ್ಟು ameshಗ್ರಾಮ ಪಂಚಾಯಿತಿ: ಜನವರಿ 15 ಕ್ಕೆ ಸಚಿವ ರಮೇಶ್ ಕುಮಾರ್‍ರಿಂದ ಚಾಲನೆ 

ಕೋಟ: ದೇಶದಾದ್ಯಂತ ನಗದು ರಹಿತ ಆಡಳಿತಾತ್ಮಕ ವ್ಯವಸ್ಥೆ ಜಾರಿಗೆ ಬರುತ್ತಿದ್ದಂತೆ ಉಡುಪಿ ತಾಲೂಕಿನ ಕೋಟತಟ್ಟು ಗ್ರಾಮ ಪಂಚಾಯಿತಿ, ಕರವಸೂಲಿ ಮತ್ತು ಪರವಾನಿಗೆ ಶುಲ್ಕ, ನೀರಿನ ತೆರಿಗೆ ವಸೂಲಿ ಮುಂತಾದ ಗ್ರಾಮ ಪಂಚಾಯಿತಿ ಆಡಳಿತಾತ್ಮಕ ಆರ್ಥಿಕ ವ್ಯವಸ್ಥೆಯನ್ನು ನಗದು ರಹಿತಗೊಳಿಸಲು ನಿರ್ಧರಿಸಿದ್ದು, ಜನವರಿ 15ನೇ ತಾರೀಕು ಪೂರ್ವಾಹ್ನ 11.30ಕ್ಕೆ ಪಂಚಾಯತ್‍ರಾಜ್ ವ್ಯವಸ್ಥೆಯ ಸಬಲೀಕರಣಕ್ಕಾಗಿ ದುಡಿದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ರಮೇಶ್ ಕುಮಾರ್ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.

ಸಭಾ ಕಾರ್ಯಕ್ರಮವು ಕೋಟದ ಡಾ. ಶಿವರಾಮ ಕಾರಂತ ಥೀಂ ಪಾರ್ಕ್‍ನಲ್ಲಿ ನಡೆಯಲಿದ್ದು, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಜಿ.ಪಂ. ಅಧ್ಯಕ್ಷ ದಿನಕರ್ ಬಾಬು, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್‍ಚಂದ್ರ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ. ಜನವರಿ 15 ರ ನಂತರ ಗ್ರಾಮ ಪಂಚಾಯಿತಿ 1032 ಕುಟುಂಬಗಳು ಪ್ರತಿಯೊಂದು ಪಾವತಿಯನ್ನು ನಗದಿನ ಬದಲು ಡೆಬಿಟ್ ಕಾರ್ಡ್‍ನ ಮೂಲಕ ವ್ಯವಹರಿಸಲು ಯೋಜನೆಯನ್ನು ರೂಪಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪಂಚಾಯತ್‍ರಾಜ್‍ನ ಹಿರಿಯ ಮುತ್ಸದ್ಧಿ ಜನಾರ್ಧನ್ ಮರವಂತೆ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಕೋಟತಟ್ಟು ಪಂಚಾಯಿತಿ ಅಧ್ಯಕ್ಷ ಎಚ್.ಪ್ರಮೋದ್ ಹಂದೆ ತಿಳಿಸಿದ್ದಾರೆ.

Leave a Reply

Please enter your comment!
Please enter your name here