ಕೋಟೆಕಾರ್‍ನಲ್ಲಿ ಸ್ವಚ್ಛತಾ ಅಭಿಯಾನ

ಕೋಟೆಕಾರ್‍ನಲ್ಲಿ ಸ್ವಚ್ಛತಾ ಅಭಿಯಾನ 

ಮಂಗಳೂರು: ಜನನಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೋಟೆಕಾರು 12ನೇ ವಾರ್ಡ್ ಜನಹಿತ ನಾಗರಿಕ ವೇದಿಕೆ ಸಹಯೋಗದಲ್ಲಿ ಸಂಪೂರ್ಣ ವಾರ್ಡ್ ಸ್ವಚ್ಛತಾ ಕಾರ್ಯಕ್ರಮ ನಡೆಸಿ ಗಾಂಧಿ ಜಯಂತಿ ಆಚರಿಸಲಾಯಿತು.
ಸ್ವಚ್ಛತಾ ಅಭಿಯಾನ ಅಂಗವಾಗಿ ಹಲವು ತಂಡಗಳಲ್ಲಿ 12ನೇ ವಾರ್ಡಿನ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛ ಮಾಡುವ ಮೂಲಕ ಗಾಂಧಿ ಜಯಂತಿಯನ್ನು ವಿಭಿನ್ನವಾಗಿ ಆಚರಿಸಲಾಯಿತು.

01

ಜನನಿ ಟ್ರಸ್ಟಿನ ಗೌರವಾಧ್ಯಕ್ಷ ಮತ್ತು ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷರಾದ ಹೈದರ್ ಪರ್ತಿಪಾಡಿ, ಇವರು ಕಾರ್ಯಕ್ರಮ ಚಾಲನೆ ನೀಡಿದರು. ವಿದ್ಯಾರತ್ನ ಸಮೂಹ ಸಂಸ್ಥೆ ಅಧ್ಯಕ್ಷ ರವೀಂದ್ರ ಶೆಟ್ಟಿ, ಸ್ವಚ್ಛ ಭಾರತ ಅಭಿಯಾನದ ಮಹತ್ವವನ್ನು ಜನರಿಗೆ ವಿವವರಿಸಿದರು.
ಜನನಿ ಟ್ರಸ್ಟ್‍ನ (ರಿ) ಅಧ್ಯಕ್ಷೆ ಶ್ರೀಮತಿ ಗೀತಾ ಕೆ. ಉಚ್ಚಿಲ್, ಸುಮತಿ ಹೆಗ್ಡೆ, ಜಾನೆಟ್ ಡಿ.ಸೋಜ, ಶರ್ಮಿಳಾ ದಿಲೀಪ್, ಲ್ಯಾನ್ಸಿ ಡಿ’ಸೋಜ, ಡಿ.ಎಂ. ಮೊಹಮ್ಮದ್, ಇಸ್ಮಾಯಿಲ್, ವಾಲ್ಟಿನ್ ಡಿ’ಸೋಜ, ಅಮೀರ್ ತುಂಬೆ, ಅಬ್ದುಲ್ ಮಜೀದ್, ಅಬೂಬಕ್ಕರ್, ಹಮೀದ್, ಅಬು, ಅಮೀರ್ ಹುಸೇನ್, ಇಸ್ಮಾಯಿಲ್ ಹಾಗೂ 125 ಮಂದಿ ಸದಸ್ಯರು ಭಾರತ ಸ್ವಚ್ಛ ಅಂದೋಲನದ ಪರವಾಗಿ ಪ್ರತೀ ಭಾನುವಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Leave a Reply