ಕೋಟ ಆಶ್ರಿತ್ ಕಾಲೇಜಿನಿಂದ ಪಿಯು ವಿಜ್ಞಾನ, ವಾಣಿಜ್ಯ ಶಿಕ್ಷಣ ಆರಂಭ

Spread the love

ಉಡುಪಿ: ಸಮಾಜದ ಎಲ್ಲಾ ವರ್ಗದವರಿಗೂ ಬಡವ-ಬಲ್ಲಿದ ಎಂಬ ಭೇದವಿಲ್ಲದೆ ಅತ್ಯುತ್ತಮ ಶಿಕ್ಷಣ ದೊರೆಯಬೇಕೆಂಬ ಧ್ಯೇಯವನ್ನು ಇರಿಸಿಕೊಂಡ ಆಶ್ರಿತ ಟ್ರಸ್ಟ್ ಪ್ರಸ್ತುತ ಸಾಲಿನಲ್ಲಿ ಪಿಯುಸಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗವನ್ನು ಆರಂಭಿಸಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಶೆಟ್ಟಿ ಹೇಳಿದರು.

ashrit-college-kota-press meet

ಅವರು ಉಡುಪಿ ಪ್ರೆಸ್ ಕ್ಲಬ್ಬಿನಲ್ಲಿ ಸುದ್ದಿಗೋಷ್ಟೀಯನ್ನು ಉದ್ದೇಶಿಸಿ ಮಾತನಾಡಿ 2009 ರಲ್ಲಿ ಉದ್ಯಮಿ ರತ್ನಾಕರ ಹೆಗ್ಡೆ ಇವರಿಂದ ಆರಂಭಗೊಂಡ ಆಶ್ರಿತಾ ಟ್ರಸ್ಟ್ ನರ್ಸಿಂಗ್ ಕಾಲೇಜಿಗೆ ಚಾಲನೆ ನೀಡಿತು. ಆಡಳಿತ ಮಂಡಳಿಯ ದೂರದರ್ಶಿತ್ವದ ಯೋಜನೆ ಹಾಗೂ ಅರ್ಪಣಾ ಮನೋಭಾವದ ಭೋಧಕ ಮತ್ತು ಭೋಧಕೇತರ ಬಳಗದವರ ಸತತ ಪರಿಶ್ರಮ, ಶಿಸ್ತುಬದ್ಧ ವಿದ್ಯಾರ್ಥಿಗಳ ಅಧ್ಯಯನ ಶೀಲತೆಯಿಂದಾಗಿ ಅತ್ಯುತ್ತಮ ಫಲಿತಾಂಶ ದಾಖಲಾಗಿದೆ. ಇದರಿಂದಾಗಿ ಆಶ್ರಿತ್ ನರ್ಸಿಂಗ್ ಕಾಲೇಜು ಜಿಲ್ಲೆಯ ಪ್ರತಿಷ್ಟಿತ ನರ್ಸಿಂಗ್ ಕಾಲೇಜುಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.
ಪ್ರಸ್ತುತ ವರುಷದಿಂದ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣಕ್ಕೆ ಅವಕಾಶವನ್ನು ಕಲ್ಪಿಸಿದ್ದು, ಈಗಾಗಲೇ ದಾಖಲಾತಿ ಆರಂಭಗೊಂಡಿದರ. ಪಿಯುಸಿ ಶಿಕ್ಷಣಕ್ಕೆ ಹಲವಾರು ಕಾಲೇಜುಗಳೀದ್ದರೂ ಸಹ ವಿದ್ಯಾರ್ಥಿ ಇಷ್ಟಪಟ್ಟ ಆಯ್ಕೆಯ ಶಿಕ್ಷಣ ಪಡೆಯುವುದು ಕಷ್ಟವಾಗುತ್ತಿದೆ. ವಿದ್ಯಾರ್ಥಿಗಳ ಆಯ್ಕೆಯ ಶಿಕ್ಷಣ ನೀಡಲು ಹಲವು ಇತಿಮಿತಿಗಳಿದ್ದು, ಇದರಿಂದಾಗಿ ವಿದ್ಯಾರ್ಥಿಗಳು ಹತಾಶೆಗೊಂಡು ಇಷ್ಟವಿಲ್ಲದ ವಿಷಯದಲ್ಲಿ ಅಧ್ಯಯನ ಮಾಡಬೇಕಾದ ಪರಿಸ್ಥಿತಿ ಇದೆ. ಒಂದು ವೇಳೆ ಅವಕಾಶ ಸಿಕ್ಕಿದರೂ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಶಿಕ್ಷಣವಿಲ್ಲದೆ, ಔಪಚಾರಿಕ ಶಿಕ್ಷಣಕ್ಕಷ್ಟೇ ಸೀಮಿತಗೊಳ್ಳುವ ಅಪಾಯವೂ ಇದೆ. ಈ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿ ವಿದ್ಯಾರ್ಥಿಗಳ ಸರ್ವತೋಮು ವಿಕಾಸ ಮಾಡುವ ನಿಟ್ಟಿನಲ್ಲಿ ರೂಪಿತವಾದ ವಿದ್ಯಾರ್ಥಿ ಸ್ನೇಹಿ ಸಂಸ್ಥೆ ಇದಾಗಲಿದೆ.
ಆಶ್ರಿತ್ ಪದವಿಪೂರ್ವ ಕಾಲೇಜು ಕೋಟದ ರಾಹೆ 66 ತಾಗಿಕೊಂಡಿರುವ ಆಶ್ರಿತ್ ಟ್ರಸ್ಟ್ ವಠಾರದಲ್ಲಿ ಸ್ವತಂತ್ರವಾದ ನಾಲ್ಕು ಅಂತಸ್ತಿನ ಸುಂದರ ಕಟ್ಟಡವನ್ನು ಹೊಂದಿದೆ. ಇದರಲ್ಲಿ ವಿಶಾಲವಾದ ತರಗತಿ ಕೋಣೆಗಳು, ಜ್ನಾನದಾಹವನ್ನು ತಣಿಸುವ ಸುಸಜ್ಜಿತ ಗ್ರಂಥಾಲಯ, ವಾಚನಾಲಯ, ನವೀನ ಮಾದರಿಯ ಪ್ರಯೋಗಾಲಯಗಳು, ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡ ಆಡಿಯೋ-ವೀಡಿಯೋ ಉಪಕರಣಗಳು, ಅಂತರ್ಜಾಲ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳಿಗೆ ವೈಯುಕ್ತಿಕ ಕೌನ್ಸೆಲಿಂಗ್ ಸೌಲಭ್ಯಗಳು, ಬಾಲಕಿಯರಿಗೆ ಪ್ರತ್ಯೇಕವಾದ ವಿರಾಮ ಕೊಠಡಿ, ಆಧುನಿಕ ಯಂತ್ರೋಪಕರಣಗಳು, ಸಾಧನ ಸಲಕರಣೆಗಳು, ಸಭಾಂಗಣ, ಶುದ್ಧಿಕರಿಸಿದ ಕುಡಿಯುವ ನೀರಿನ ವ್ಯವಸ್ಥೆ ಇವಲ್ಲದೆ ಬಾಲಕ ಬಾಲಕಿಯರಿಗೆ ಪ್ರತ್ಯೇಕವಾದ ವಸತಿ ನಿಲಯಗಳಿವೆ.
ಶಿಕ್ಷಣ ಕೇವಲ ಭೌತಿಕ ಪರಿಕರಗಳ ಒಗ್ಗೋಡಿಸುವಿಕೆ ಅಲ್ಲ, ಬೌದ್ಧಿಕ ಮಟ್ಟವನ್ನು, ಭಾವನಾತ್ಮಕ ಪ್ರೌಢಿಮೆಯನ್ನು ಹೆಚ್ಚಿಸುವಲ್ಲಿ ಪೂರಕ ಸಲಕರಣೆಗಳು ಅವು. ಆ ಹಿನ್ನಲೆಯಲ್ಲಿ ಅಪಾರ ಭೋಧನಾನುಭವ ಮತ್ತು ಆಡಳಿತಾನುಭವವುಳ್ಳ ಪ್ರಾಚಾರ್ಯರ ನಿರ್ದೇಶನವಿದೆ. ಸುಮಾರು 30 ವರ್ಷಗಳಿಗೂ ಅಧಿಕ ಭೋಧನ ಅನುಭವ ಹೊಂದಿ ವಿದ್ಯಾರ್ಥಿಗಳ ನೆಚ್ಚಿನ ಪ್ರಾಧ್ಯಾಪರಕಾರಾಗಿ ಇತಿಹಾಸ ನಿರ್ಮಿಸಿರುವ ನಿವೃತ್ತ ಪ್ರಾಧ್ಯಾಪಕ ಬಳಗದವರ ಮಾರ್ಗದರ್ಶನ ಇದೆ. ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವ, ಆಧುನಿಕ ಭೋಧನ ವಿಧಾನವನ್ನು ಅರಿತಿರುವ 5 ವರ್ಷಕ್ಕೂ ಮೇಲ್ಪಟ್ಟ ಭೋಧನ ಅನುಭವ ಇರುವ ಯುವ ಭೋಧನ ವರ್ಗವನ್ನು ಹೊಂದಿದೆ. ವಿದ್ಯಾರ್ಥಿಗಳ ಅನುಕೂಲತೆಗೆ ತಕ್ಕಂತೆ ಸ್ಪಂದಿಸುವ ಭೋಧಕೇತರ ಸಿಬಂದಿಗಳು, ಕಾಳಜಿಯಿಂದ ನೋಡಿಕೊಳ್ಳಲು ಅನುಭವಿ ವಾರ್ಡನ್ ಸಂಸ್ಥೆಯಲ್ಲಿರುತ್ತಾರೆ.
ವಿದ್ಯಾರ್ಥಿಗಳಿಗೆ ಗುಣಮಟ್ಟದ ಭೋಧನೆಯೊಂದಿಗೆ ಸಿಇಟಿ, ಏಐಈಈಈ ತರಬೇತಿ, ಸಿಎಸಿಪಿಟಿ ತರಬೇತಿಗಳ ಜೊತೆ ಜೊತೆಗೆ ನಾಯಕತ್ವ ಗುಣ, ಭಾಷಣ ಕಲೆ, ಜೀವನ ಕೌಶಲ್ಯ ಮುಂತಾದವುಗಳನ್ನು ಬೆಳೆಸುವುದು, ಕಲೆ ಸಾಹಿತ್ಯ ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ತೊಡಗಿಸಿ ಸೃಜನಶೀಲ ಪ್ರತಿಭೆಯನ್ನು ಅರಳಿಸಲು ಪ್ರಯತ್ನಿಸುವುದು ಸಂಸ್ಥೆಯ ಗುರಿಯಾಗಿದೆ.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಎಸ್ ಎಸ್ ಎಲ್ ಸಿ ಯಲ್ಲಿ ಶೇ 90 ರಷ್ಟು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪಿಯುಸಿಗೆ ಉಚಿತವಾಗಿ ಪ್ರವೇಶ ನೀಡಲಾಗುವುದು ಎಂದರು
ಸುದ್ದಿಗೋಷ್ಟಿಯಲ್ಲಿ ಟ್ರಸ್ಟಿನ ಕಾರ್ಯದರ್ಶಿ ಡಾ ವಿದ್ಯಾಧರ ಶೆಟ್ಟಿ, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಕೊಟ್ರೇಶ್ ಉಪಸ್ಥಿತರಿದ್ದರು.


Spread the love