ಕೋಮು ಪ್ರಚೋದನಕಾರಿ ಸಂದೇಶ “ಶಾಂತಿ ಮತ್ತು ಮಾನವೀಯತೆ” ಅಭಿಯಾನ ಸಮಿತಿ ಖಂಡನೆ

ಕೋಮು ಪ್ರಚೋದನಕಾರಿ ಸಂದೇಶ “ಶಾಂತಿ ಮತ್ತು ಮಾನವೀಯತೆ” ಅಭಿಯಾನ ಸಮಿತಿ ಖಂಡನೆ

ಮಂಗಳೂರು: ಇತ್ತೀಚೆಗೆ ಹಿಂದೂ ದೇವತೆಗಳನ್ನು ಅಶ್ಲೀಲ ಮತ್ತು ಅವಹೇಳನಕಾರಿಯಾಗಿ ಫೇಸ್‍ಬುಕ್‍ನಲ್ಲಿ ಹಾಕಲಾಗಿರುವ ಹೀನಾಯ ಕೃತ್ಯವನ್ನು “ಶಾಂತಿ ಮತ್ತು ಮಾನವೀಯತೆ” ರಾಷ್ಟ್ರೀಯ ಅಭಿಯಾನದ ದ.ಕ. ಜಿಲ್ಲಾ ಸ್ವಾಗತ ಸಮಿತಿ ತೀವ್ರವಾಗಿ ಖಂಡಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಬೇನಾಮಿ ಹೆಸರಲ್ಲಿ ಖಾತೆ ಮತ್ತು ಪುಟಗಳನ್ನು ತೆರೆದು, ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮತ್ತು ಕೋಮು ಸಂಘರ್ಷಗಳಿಗೆ ಪ್ರಚೋದನೆ ನೀಡುವ ಕೀಳ್ಮಟ್ಟದ ಸಂದೇಶ ಮತ್ತು ಚಿತ್ರಗಳು ವ್ಯಾಪಕವಾಗಿ ಹರಿದಾಡುತ್ತಿವೆ. ಸುಳ್ಳು ಸುದ್ಧಿ ಮತ್ತು ವದಂತಿಗಳನ್ನು ವಿವಿಧ ಗ್ರೂಪ್‍ಗಳಿಗೆ ರವಾನಿಸಲಾಗುತ್ತಿದೆ. ಇಂತಹಾ ಸಂದೇಶಗಳನ್ನು ಯಾವುದೇ ಪರಿಶೀಲನೆ ನಡೆಸದೆ ನೇರವಾಗಿ ಇತರ ಗುಂಪು ಮತ್ತು ವ್ಯಕ್ತಿಗಳಿಗೆ ಕಳುಹಿಸುವ ಮತ್ತು ಅವುಗಳಿಗೆ ಅಸಭ್ಯ ರೀತಿಯಲ್ಲಿ ಪ್ರತಿಕ್ರಿಯೆ ನೀಡುವ ಜನರೂ ನಮ್ಮಲ್ಲಿದ್ದಾರೆ.

ಪೊಲೀಸ್ ಇಲಾಖೆಯು ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಕೂಲಂಕುಶ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದರ ಮೂಲಕ ಸಮಾಜದಲ್ಲಿ ಶಾಂತಿ ಮತ್ತು ಮಾನವೀಯ ಮೌಲ್ಯಗಳನ್ನು ಕಾಪಾಡುವಲ್ಲಿ ಸಹಕರಿಸಬೇಕು ಎಂದು “ಶಾಂತಿ ಮತ್ತು ಮಾನವೀಯತೆ” ರಾಷ್ಟ್ರೀಯ ಅಭಿಯಾನದ ದ.ಕ. ಜಿಲ್ಲಾ ಸ್ವಾಗತ ಸಮಿತಿಯ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply