ಕ್ರೖೆಸ್ತ ಅಭಿವ್ರದ್ದಿ ನಿಗಮದ ಸ್ಥಾಪನೆಯ ರೂವಾರಿ   ಐವನ್ ಡಿಸೋಜಾರವರಿಗೆ  ಸನ್ಮಾನ

ಕ್ರೖೆಸ್ತ ಅಭಿವ್ರದ್ದಿ ನಿಗಮದ ಸ್ಥಾಪನೆಯ ರೂವಾರಿ   ಐವನ್ ಡಿಸೋಜಾರವರಿಗೆ  ಸನ್ಮಾನ

ಮಂಗಳೂರು: ಸೈಂಟ್ ರೀಟಾ ಕಾಶಿಯಾ ಚಚ್೯ನ ಸಭಾಭವನದಲ್ಲಿ ಕನಾ೯ಟಕ ಕ್ರೈಸ್ತ ನಿಗಮದ ಅಭಿವ್ರಧ್ದಿಗಾಗಿ ಹೋರಾಟ ನಡೆಸಿ 200 ಕೋಟಿ ರೂಪಾಯಿಗಳ ಅನುದಾನವನ್ನು ಮೀಸಲಿಡುವಂತೆ ಸಹಕರಿಸಿ ಕ್ರೈಸ್ತ ಸಮುದಾಯಕ್ಕೆ ದೊಡ್ಡ ಕೊಡುಗೆಯನ್ನು ನೀಡಿದ ವಿಧಾನ ಪರಿಷತ್ ಶಾಸಕ ಮುಖ್ಯಮಂತ್ರಿಯ ಸಂಸದೀಯ ಕಾಯ೯ದಶಿ೯ಗಳಾದ   ಐವನ್ ಡಿಸೋಜಾರವರನ್ನು ಕಾಶಿಯಾ ಚಚ್೯ ಸಭಾಭವನದಲ್ಲಿ ಕಾಶಿಯಾ ಚಚ್೯ ಸಮುದಾಯದಿಂದ ಸನ್ಮಾನವನ್ನು ಮಾಡಿ ಅಭಿನಂದಿಸಲಾಯ್ತು.

ಈ ಸಂದಭ೯ದಲ್ಲಿ   ಐವನ್ ಡಿಸೋಜಾರವರು ಮಾತನಾಡಿ ರಾಜ್ಯ ಸಕಾ೯ರ ಕ್ರೈಸ್ತ ಸಮುದಾಯಕ್ಕಾಗಿ ಅನೇಕ ಕೊಡುಗೆಯನ್ನು ನೀಡಿದ್ದು ಸಮಾಜದ ಅಭಿವ್ರದ್ದಿಗಾಗಿ ವಿಧಾನ ಪರಿಷತ್ ಶಾಸಕನಾಗಿ ನನ್ನ ಪಯತ್ನವನ್ನು ಮಾಡಿದ್ದೆನೆ ಮುಂದಿನ ದಿನಗಳಲ್ಲಿ ನಮ್ಮ ಸಮುದಾಯದವರು IAS IPS ಅಧಿಕಾರಿಗಳಾಗಿ ಸಮಾಜದ ಏಲ್ಲಾ ವಗ೯ದ ಜನರ ಸೇವೆ ಮಾಡಲು ಮುಂದೆ ಬರಬೇಕೆಂದರು.

ಈ ಸಮಾರಂಭದ ಅಧ್ಯಕ್ಷತೆಯನ್ನು ರೆ| ಫಾದರ್ ಹೆರಾಲ್ಡ್ ಮಸ್ಕರೇನಸ್,ಫಾದರ್ ರೂಪೇಶ್ ಮಾಡ್ತಾ ಆಡಳಿತ ಮಂಡಳಿಯ ಉಪಾಧ್ಯಕ್ಷರು ಸಮಾಜದ ಏಲ್ಲಾ ವಗ೯ದ ಪ್ರತಿನಿಧಿಗಳು ಭಾಗವಹಿಸಿದ್ದರು.