ಖಡಕ್ ಎಸ್ಪಿಗೆ ಅಭಿಮಾನಿಯಿಂದ ಸಿಂಗಂ..ಸಿಂಗಂ..ಸಿಂಗಂ.. ಅಣ್ಣಾಮಲೈ… ಸ್ಪೆಷಲ್ ಸಾಂಗ್!

120
Spread the love

ಖಡಕ್ ಎಸ್ಪಿಗೆ ಅಭಿಮಾನಿಯಿಂದ ಸಿಂಗಂ..ಸಿಂಗಂ..ಸಿಂಗಂ.. ಅಣ್ಣಾಮಲೈ… ಸ್ಪೆಷಲ್ ಸಾಂಗ್!

ಚಿಕ್ಕಮಗಳೂರು: ಇವರ ಹೆಸರು ಕೇಳಿದರೆ ಅಪರಾಧಿಗಳು ಬೆಚ್ಚಿ ಬಿದ್ದರೆ, ವಿದ್ಯಾರ್ಥಿ ಸಮುದಾಯ ತಮ್ಮ ರಿಯಲ್ ಹೀರೊ, ಸಿಂಗಮ್ ಎನ್ನುವ ಅಭಿಮಾನ ತೋರಿಸುತ್ತಾರೆ. ತಮ್ಮ ಕರ್ತವ್ಯ ನಿಷ್ಠೆ, ಖಡಕ್ ಮಾತುಗಾರಿಕೆ ಮೂಲಕ ಚಿಕ್ಕಮಗಳೂರಿನಲ್ಲೇ ಅಲ್ಲದೆ, ಕರ್ನಾಟಕದಾದ್ಯಂತ ಇವರು ಸಖತ್ ಫೇಮಸ್. ಅವರು ಬೇರೆ ಯಾರು ಅಲ್ಲ ಚಿಕ್ಕಮಗಳೂರಿನ ಕಡಕ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಅವರು.

ಉಡುಪಿ ಜಿಲ್ಲೆಯಲ್ಲಿ ಜನಪರ ಕೆಲಸಗಳನ್ನು ಮಾಡಿ ಅಲ್ಲಿಯೇ ಮನೆಮಾತಾಗಿದ್ದ ಎಸ್ಪಿ ಅಣ್ಣಾಮಲೈ ಚಿಕ್ಕಮಗಳೂರಿಗೆ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಅಣ್ಣಾಮಲೈ ಅವರು ಮಾಡಿರುವ ಜನಪರ ಕೆಲಸಗಳು ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿವೆ. ಎಸ್ಪಿ ಅಣ್ಣಾಮಲೈ ಬಂದ್ರೆ ಸಾಕು ಕ್ಷಣಾರ್ಧದಲ್ಲಿ ನೂರಾರು ಮಂದಿ ಅಲ್ಲಿ ಸೇರ್ತಾರೆ. ಸೆಲ್ಫಿ ತೆಗೆದುಕೊಳ್ಳಲು ಮುಗಿ ಬೀಳ್ತಾರೆ. ಇವರಿಗೆ ಲಕ್ಷಾಂತರ ಫ್ಯಾನ್ ಫಾಲೋಯರ್ಸ್ ಇದ್ದಾರೆ.

ಇದಕ್ಕೆ ಉದಾಹರಣೆ ಎಂಬಂತೆ ಅವರ ಅಭಿಮಾನಿಯೊಬ್ಬ ಇವರ ಕಾರ್ಯವೈಖರಿ ಮತ್ತು ಪೋಲಿಸ್ ಇಲಾಖೆಯಲ್ಲಿ ಸಲ್ಲಿಸಿರುವ ಗಣನೀಯ ಸೇವೆಯನ್ನು ಮೆಚ್ಚಿ ಅವರಿಗಾಗಿಯೇ ಒಂದು ಹಾಡು ಬರೆದಿದ್ದಾನೆ.

ಹೌದು, ಅಣ್ಣಾಮಲೈ ಕುರಿತು ಈ ಅಭಿಮಾನಿ ಬರೆದು, ಹಾಡಿರುವ ಹಾಡು ಕೇಳಲು ಇಂಪಾಗಿದೆ. ಅಣ್ಣಾಮಲೈ ಅವರನ್ನು ನಿಜವಾದ ಹೀರೋ ಅಂದುಕೊಂಡಿರುವ ಜನರಿಗೆಲ್ಲಾ ಈ ಹಾಡು ಇಷ್ಟವಾಗುತ್ತದೆ. ಅವರ ವ್ಯಕ್ತಿತ್ವ, ಕಾರ್ಯವೈಖರಿ, ಜನಸೇವೆಯನ್ನು ಹಾಡಿನಲ್ಲಿ ಪ್ರತಿಫಲಿಸಲಾಗಿದೆ.

ಖಡಕ್ ಎಸ್ಪಿಗೆ ಅಭಿಮಾನಿಯಿಂದ ಸಿಂಗಂ..ಸಿಂಗಂ..ಸಿಂಗಂ.. ಅಣ್ಣಾಮಲೈ… ಸ್ಪೆಷಲ್ ಸಾಂಗ್!

ಖಡಕ್ ಎಸ್ಪಿಗೆ ಅಭಿಮಾನಿಯಿಂದ ಸಿಂಗಂ..ಸಿಂಗಂ..ಸಿಂಗಂ.. ಅಣ್ಣಾಮಲೈ… ಸ್ಪೆಷಲ್ ಸಾಂಗ್!

Mangalorean.com यांनी वर पोस्ट केले गुरुवार, ११ ऑक्टोबर, २०१८

ಸಿಂಗಂ..ಸಿಂಗಂ..ಸಿಂಗಂ.. ಅಣ್ಣಾಮಲೈ… ಹಿ ಈಸ್ ರಿಯಲಿ ಸಿಂಗಂ ಅಣ್ಣಾಮಲೈ… ಎಂದು ಆರಂಭವಾಗುವ ಈ ಹಾಡು ಎಸ್ಪಿ ಅಣ್ಣಾಮಲೈ ಅವರಂತೆಯೇ ಖಡಕ್ ಆಗಿದ್ದು, ಕೇಳಲು ತುಂಬಾ ಚೆನ್ನಾಗಿದೆ. ಆದರೆ ಶ್ರಮವಹಿಸಿ ಹಾಡು ಬರೆದು, ಹಾಡಿ ಅಣ್ಣಾಮಲೈರನ್ನು ಕೊಂಡಾಡಿರುವ ಅಭಿಮಾನಿ ತನ್ನ ಹೆಸರು ತಿಳಿಯಬಾರದು ಎಂದೂ ಮನವಿ ಮಾಡಿದ್ದಾನೆ. ರಿಯಲ್ ಹೀರೋ ಅಣ್ಣಾಮಲೈರ ಕುರಿತಾದ ಈ ಹಾಡು ಈಗ ಎಲ್ಲೆಡೆ ಸಾಕಷ್ಟು ಸದ್ದು ಮಾಡುತ್ತಿದೆ.


Spread the love