ಖೇಲೊ ಇಂಡಿಯಾ ರಾಷ್ಟ್ರೀಯ ವಾಲಿಬಾಲ್ ಪ್ರತಿಭೆಗೆ ಪ್ರಜ್ಞಾ ಕೊಡವೂರುಗೆ ಅಭಿನಂದನೆ

ಖೇಲೊ ಇಂಡಿಯಾ ರಾಷ್ಟ್ರೀಯ ವಾಲಿಬಾಲ್ ಪ್ರತಿಭೆಗೆ ಪ್ರಜ್ಞಾ ಕೊಡವೂರುಗೆ ಅಭಿನಂದನೆ

ಉಡುಪಿ : ಉಡುಪಿ ಮಣಿಪಾಲ ರೋಟರಿಗೆ ರೋಟರಿ ಜಿಲ್ಲಾ ಗವರ್ನರ್ ರೊ.ಡಿ.ಎಸ್.ರವಿಯವರ ಅಧಿಕೃತ ಭೇಟಿಯ ಸಂದರ್ಭದಲ್ಲಿ ಖೇಲೋ ಇಂಡಿಯಾ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರೀಯ ಮಟ್ಟದಲ್ಲಿ ರಜತ ಪದಕವನ್ನು ಪಡೆದ ಆನೆಟ್ ಪ್ರಜ್ಞಾ ಕೊಡವೂರು ಇವರನ್ನು ರೋಟರಿ ಜಿಲ್ಲಾ ಗವರ್ನರ್ ರೊ.ಡಿ.ಎಸ್.ರವಿಯವರು ಅಭಿನಂದಿಸಿದರು.

ಉಡುಪಿ ಮಣಿಪಾಲ ರೋಟರಿ ಅಧ್ಯಕ್ಷ ರೊ.ಶ್ರೀಕಾಂತ್ ಪ್ರಭು, ಕಾರ್ಯದರ್ಶಿ ರೊ‌.ಬಾಲಕೃಷ್ಣ ಮಡ್ಡೋಡಿ, ಸಹಾಯಕ ಗವರ್ನರ್ ರೊ.ಸುಬ್ರಹ್ಮಣ್ಯ ಬಾಸ್ರಿ, ವಲಯ ಸೇನಾನಿ ರೊ.ಸುರೇಶ್ ಬೀಡು, ರೊ.ಪ್ರಸನ್ನ, ರೊ.ಡಾ.ಗೌರಿ, ರೊ.ಜನಾರ್ದನ್ ಕೊಡವೂರು ಹಾಗು ರೊ.ಪೂರ್ಣಿಮಾ ಜನಾರ್ದನ್ ಉಪಸ್ಥಿತರಿದ್ದರು.