ಗಣಪತಿ ಆತ್ಮಹತ್ಯೆ ಪ್ರಕರಣ ಅವರ ಸಾವಿನೊಂದಿಗೆ ಸಮಾಧಿ: ಚೆಂಗಪ್ಪ

ಗಣಫತಿ ಆತ್ಮಹತ್ಯೆ ಪ್ರಕರಣ ಅವರ ಸಾವಿನೊಂದಿಗೆ ಸಮಾಧಿ: ಚೆಂಗಪ್ಪ

ಮಂಗಳೂರು: ರಾಜ್ಯ ಸರಕಾರ ಡಿವೈಎಸ್ಪಿ ಗಣಫತಿ ಆತ್ಮಹತ್ಯೆ ಪ್ರಕರಣವನ್ನು ಅವರ ಸಾವಿನೊಂದಿಗೆ ಸಮಾಧಿ ಮಾಡಲು ಹೊರಟಿದೆ ಎಂದು ಮಂಗಳೂರು ಬಾರ್ ಎಶೋಸಿಯೇಶನ್ ಅಧ್ಯಕ್ಷ ಚೆಂಗಪ್ಪ ಹೇಳಿದರು.

image005bar-association-pressmeet-20160714-005 image004bar-association-pressmeet-20160714-004

ಅವರು ನಗರದಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ರಾಜ್ಯದ ಪ್ರತಿಯೊಬ್ಬರೂ ಗಣಪತಿಯ ಸಾವಿನ ಪ್ರತಿಯೊಂದು ಆಯಾಮಗಳನ್ನು ಬಲ್ಲವರಾಗಿದ್ದು, ಡಿವೈಎಸ್ಪಿ ಗಣಪತಿ ಸಾಯುವ ಮುನ್ನ ಸ್ಥಳೀಯ ಚಾನೆಲೊಂದಕ್ಕೆ ಸಂದರ್ಶನ ನೀಡಿದ್ದು, ತನಗೆ ಮಾಜಿ ಗೃಹ ಸಚಿವ ಹಾಗೂ ಇಬ್ಬರು ಪೋಲಿಸ್ ಅಧಿಕಾರಿಗಳಿಂದ ನಡೆಯುವ ಕಿರುಕುಳದ ಕುರಿತು ಪ್ರಸ್ತಾಪಿಸಿದ್ದರು. ಬಳಿಕ ಻ವರು ವಿನಾಯಕ ಲಾಡ್ಜಿಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಒರ್ವ ವ್ಯಕ್ತಿಯ ಡೈಯಿಂಗ್ ಡಿಕ್ಲರೇಶನ್ ಕಾನೂನು ಪ್ರಕಾರ ಸೆಕ್ಷನ್ 32 (1) ರ ಅಡಿಯಲ್ಲಿ ಬರಲಿದ್ದು, ಬಹು ಮುಖ್ಯದ ಸಾಕ್ಷಿಯಾಗುತ್ತದೆ. ಅದರ ಅಡಿಯಲ್ಲಿ ಪೋಲಿಸರು ಎಫ್ ಐ ಆರ್ ದಾಖಲಿಸಲು ಅವಕಾಶವಿದೆ ಎಂದರು.

ಇದರೊಂದಿಗೆ ಮೃತ ಸ್ಥಳದಲ್ಲಿ ಎರಡು ಡೆತ್ ನೋಟ್ ಹಾಗೂ ಒಂದು ಪೆನ್ ಡ್ರೈವ್ ಕೂಡ ಪತ್ತೆಯಾಗಿದ್ದು, ಈಗ ಅವು ನಾಪತ್ತೆಯಾಗಿವೆ ಎನ್ನಲಾಗಿದೆ ಆದ್ದರಿಂದ ಡಿವೈಎಸ್ಪಿ ಸಾವಿನ ಮೇಲೆ ಹಲವಾರು ರೀತಿಯ ಸಂಶಯಗಳು ಎದ್ದಿವೆ ಎಂದರು.

ಡಿವೈಎಸ್ಪಿ ಗಣಪತಿ ಅವರ ಕೇಸನ್ನು ಸರಕಾರ ಸಿಐಡಿಗೆ ವಹಿಸಿದ್ದು, ಇದರಿಂದ ಸತ್ಯ ಹೊರಬರಲು ಅಸಾಧ್ಯವಾಗಲಿದೆ ಆದ್ದರಿಂದ ಕೇಸನ್ನು ಸಿಬಿಐ ವಹಿಸುವಂತೆ ಆಗ್ರಹಿಸಿದರು.

Leave a Reply