ಗಣಪತಿ ಆರಾಧನೆಯಿಂದ ಅಂತಃಶಕ್ತಿ ವೃದ್ಧಿ: ಸಂಧ್ಯಾ ಎಸ್. ಪೈ

ಮಂಗಳೂರು: ಗಣಪತಿ ಒಂದು ಸ್ತರದ ಶಕ್ತಿ. ಈ ಶಕ್ತಿಯನ್ನು ಆರಾಧಿಸುವುದರಿಂದ ನಮ್ಮೊಳಗಿನ ಅಂತಃಶಕ್ತಿ ಹೆಚ್ಚುತ್ತದೆ ಎಂದು ತರಂಗ ವಾರ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಎಸ್. ಪೈ ಹೇಳಿದರು. ಅವರು ಶುಕ್ರವಾರ ಇಲ್ಲಿನ ಬಂಟ್ಸ್ ಹಾಸ್ಟೆಲ್ ಸಭಾಂಗಣದಲ್ಲಿ ಶ್ರೀ ಸಿದ್ಧಿ ವಿನಾಯಕ ಪ್ರತಿಷ್ಠಾನ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ನಡೆಯುತ್ತಿರುವ 12ನೇ ವರ್ಷದ ಗಣೇಶೋತ್ಸವದ 2ನೇ ದಿನದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿದ್ದರು. ಗಣಪನ ಸೃಷ್ಟಿಯಲ್ಲಿ ಆದಿಯಿಂದ ಅಂತ್ಯದವರೆಗೆ ವಿಜ್ಞಾನದ ರಹಸ್ಯ ಅಡಗಿದೆ. ಗಣಪತಿ ದೇವರ ಶಕ್ತಿ ಭೂಮಂಡಲದ ಮೇಲೆ ಹೆಚ್ಚಿದ್ದು, ವಿಘ್ನ ನಿವಾರಕನಾದ ಗಣಪತಿಯ ಆರಾಧನೆಯಿಂದ ದೇವರ ಅನುಗ್ರಹ ಪ್ರಾಪ್ತವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

1

ಮೇಯರ್ ಜೆಸಿಂತಾ ವಿಜಯಾ ಆಲ್ಪ್ರ್‍ಡ್ ಮಾತನಾಡಿ, ಗಣೇಶೋತ್ಸವ ಆಚರಣೆ ಜಾತಿ, ಮತ, ಬೇಧ ಮರೆತು

ಎಲ್ಲರೂ ಸಹೋದರ ಭಾವದೊಂದಿಗೆ ಮಾನವೀಯ ನೆಲೆಗಟ್ಟಿನಲ್ಲಿ ಬದುಕಲು ಪ್ರೇರಣೆ ಒದಗಿಸಲಿ ಎಂದು ಆಶಿಸಿದರು. ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸಿಎ ಶಾಂತಾರಾಮ ಶೆಟ್ಟಿ ಸ್ವಾಗತಿಸಿ ಸಭೆಯ ಅಧ್ಯಕ್ಷತೆವಹಿಸಿದ್ದರು.

ಸಮ್ಮಾನ: ವಿವಿಧ ಕ್ಷೇತ್ರಗಳ ಸಾಧಕರಾದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ವಿಜಯ ಕುಮಾರ್, ಚರ್ಮರೋಗ ತಜ್ಞ ಡಾ| ನರಹರಿ, ಸಿಂಡಿಕೇಟ್ ಬ್ಯಾಂಕಿನ ಜನರಲ್ ಮ್ಯಾನೇಜರ್ ಕೆ.ಟಿ. ರೈ, ಹಿರಿಯ ವಿಜ್ಞಾನಿ ಡಾ| ರಂಜನ್ ಮೂಡಿತ್ತಾಯ, ಮಂಗಳೂರು ವಿ.ವಿ. ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ| ಚಿನ್ನಪ್ಪ ಗೌಡ, ಮುಂಬಯಿಯ ವಿ.ಕೆ. ಗ್ರೂಪ್ ಆಫ್ ಇಂಡಸ್ಟ್ರೀಸ್‍ನ ಸಿಎಂಡಿ ಕೆ.ಎಂ. ಶೆಟ್ಟಿ, ಏರ್ ಇಂಡಿಯಾ ಸಂಸ್ಥೆಯ ಮ್ಯಾನೇಜರ್ ನಾಗೇಶ್ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.

ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ವೇದಿಕೆಯಲ್ಲಿದ್ದರು. ಮಂಜುಳಾ ಶೆಟ್ಟಿ ಮತ್ತು ಪ್ರಕಾಶ್ ಮೆಲಾಂಟ ಕಾರ್ಯಕ್ರಮ ನಿರ್ವಹಿಸಿದರು.

Leave a Reply