ಗಣಿ ಇಲಾಖೆಯಿಂದ 1300 ಲೋಡ್ ಅಕ್ರಮವಾಗಿ ದಾಸ್ತಾನಿಟ್ಟ ಮರಳು ವಶ

Spread the love

ಗಣಿ ಇಲಾಖೆಯಿಂದ 1300 ಲೋಡ್ ಅಕ್ರಮವಾಗಿ ದಾಸ್ತಾನಿಟ್ಟ ಮರಳು ವಶ

ಮಂಗಳೂರು: ಮಂಗಳೂರು ಹೊರವಲಯ ಅದ್ಯಪಾಡಿ ಡ್ಯಾಮ್ ಬಳಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಅಕ್ರಮ ಮರಳನ್ನು ಗಣಿ ಇಲಾಖೆಯ ಅಧಿಕಾರಿಗಳು ಗುರುವಾರ ವಶಪಡಿಸಿಕೊಂಡಿದ್ದಾರೆ.

ಬಜ್ಪೆ ಪೋಲಿಸರು ಮತ್ತು ಗಣಿ ಇಲಾಖೆಯ ಅಧಿಕಾರಿಗಳು ಖಚಿತ ಮಾಹಿತಿಯ ಮೇರೆಗೆ ಈ ಧಾಳಿ ನಡೆಸಿದ್ದು ಸುಮಾರು 1300 ಲೋಡ್ ಅಕ್ರಮ ಮರಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಧಾಳಿಯ ಸಂದರ್ಭದಲ್ಲಿ ತಪ್ಪಿಸಿಕೊಂಡಿದ್ದು, ಪೋಲಿಸರು ಶೋಧ ಮುಂದುವರೆಸಿದ್ದಾರೆ.


Spread the love