ಗುಡ್ ಫ್ರೈಡೆ- ವೆನ್ಲಾಕ್ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ

185

ಗುಡ್ ಫ್ರೈಡೆ- ವೆನ್ಲಾಕ್ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ

ಮಂಗಳೂರು : ಗುಡ್ ಫ್ರೈಡೆ ಪ್ರಯುಕ್ತ ಮರಿಯಮ್ಮ ಮಾತೆ ಸೊಡಲಿಟಿ ಮಂಗಳೂರು. ಇವರ ವತಿಯಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ಮಕ್ಕಳ ಹಾಗೂ ಇತರ ವಾರ್ಡುಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಮಂಗಳೂರು ಧರ್ಮಪ್ರಾಂತ್ಯದ ಹಿಂದಿನ ಅತೀ ಶ್ರೇಷ್ಠ ಧರ್ಮಗುರುಗಳಾದ ಮೊನ್ಸಿಂಜರ್ ಡೆನಿಸ್ ಮೊರಾಸ್ ಪ್ರಭು ಮಾತನಾಡಿ ಎರಡು ಸಾವಿರ ವರ್ಷಗಳ ಹಿಂದೆ ಮಾನವವನ್ನು ಪಾಪದಿಂದ ವಿಮೋಚನೆಗೊಳಿಸಲು ಶಿಲುಬೆಗೆ ಶಿಲುಬೆಗೆ ಪ್ರಾಣವನ್ನು ಸಮರ್ಪಿಸಿದರು. ಈ ದಿನವನ್ನು ಪವಿತ್ರ ದಿನವಾಗಿ ಪವಿತ್ರ ದಿನವಾಗಿ ಜಗತ್ತಿನಾದ್ಯಂತ ಸಮುದಾಯದವರು ಉಪವಾಸ ,ಭಕ್ತಿ, ಶ್ರದ್ಧೆ ಹಾಗೂ ದಾನ ಧರ್ಮಗಳ ಮೂಲಕ ಆಚರಿಸುತ್ತಾರೆ. ಈ ಸಂಸ್ಥೆಯ ಇವತ್ತಿನ ಈ ಕಾರ್ಯಕ್ರಮ ಶ್ಲಾಘನೀಯ ಎಂದು ಹೇಳಿದರು.

ಇನ್ನೋರ್ವ ಅತಿಥಿಗಳಾದ ಅಲೋಶಿಯಸ್ ಕಾಲೇಜಿನ ರೆಕ್ಟರ್ ಅತೀ ವಂದನೀಯ ಡೈನಿಶಿಯಸ್ ವಾಸ್ ರವರು ಮಾತನಾಡಿ ಏಸು ಕ್ರಿಸ್ತರಿಗೆ ಚಿಕ್ಕ ಮಕ್ಕಳು ಎಂದರೆ ಬಹಳ ಪ್ರೀತಿ ಅವರನ್ನು ಅವರು ಬಹಳ ಪ್ರೀತಿಸುತ್ತಿದ್ದರು. ಈ ಒಂದು ಸಂಕೇತವಾಗಿ ಮಕ್ಕಳ ವಾರ್ಡಿನಲ್ಲಿ ಹಣ್ಣು ಹಂಪಲುಗಳನ್ನು ವಿತರಿಸುತಿರುವುದು ಸಂತೋಷ ತಂದಿದೆ ಎಂದು ಹೇಳಿದರು.

ಆಸ್ಪತ್ರೆಯ ನಿವಾಸಿ ವೈದ್ಯಾದಿಕಾರಿ ಡಾ. ಜುಲಿಯಾನ್ ಸಲ್ಡಾನ ಶುಭಾರೈಸಿದರು.ಸಂಸ್ಥೆಯ ಅಧ್ಯಕ್ಷರಾದ ವಿವಿಯನ್ ಸಿಕ್ವೇರ ಸ್ವಾಗತಿಸಿ ಕಾರ್ಯದರ್ಶಿ ಲಿಗೊರಿ ಫೆರ್ನಾಂಡಿಸ್ ಧನ್ಯವಾದಗೈದರು.

ಕಾರ್ಯಕ್ರಮದ ಸಂಚಾಲಕರಾದ ಸುಶೀಲ್ ನೊರೊನ್ಹ ನಿರೂಪಿಸಿದರು.ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಲಾರೆನ್ಸ್ ಪಿಂಟೊ, ರುಡಾಲ್ಫ್ ಡಿಸಿಲ್ವಾ, ಫೆಲಿಕ್ಸ್ ಪಿಂಟೊ, ಪೀಟರ್ ಪಿಂಟೊ, ವಲೇರಿಯನ್ ಸಿಕ್ವೆರ , ಸುನಿಲ್ ವಾಸ್ ,ನರ್ಸಿಂಗ್ ಸುಪರಿಂಟೆಂಡೆಂಟ್ ಹರಿಣಿ ಉಪಸ್ಥಿತರಿದ್ದರು.