ಗೂಂಡಾ ಕಾಯ್ದೆಯಡಿ ಮೂವರ ಬಂಧನ

ಗೂಂಡಾ ಕಾಯ್ದೆಯಡಿ ಮೂವರ ಬಂಧನ

ಮಂಗಳೂರು: ನಗರ ಪೊಲೀಸರು ಗೂಂಡಾ ಕಾಯ್ದೆಯಡಿ ಜೊಕಟ್ಟೆಯ ತೋಕೂರಿನ ವಿಶ್ವನಾಥ ಪೂಜಾರಿ ಯಾನೆ ಕೊಡಿಕೆರೆ ವಿಶ್ವ ಯಾನೆ ವಿಶ್ವ (33), ಬಜ್ಪೆ ಹೊಸನಗರದ ಹನೀಫ್ ಯಾನೆ ಹನೀಫ್ ಅದ್ಯಪಾಡಿ (37), ಕಾವೂರು ಶಾಂತಿ ನಗರದ ಮುಸ್ತಫಾ (30) ಎಂಬವರನ್ನು ಬಂಧಿಸಿ ದ್ದಾರೆ.

ಜೊಕಟ್ಟೆಯ ತೋಕೂರಿನ ವಿಶ್ವನಾಥ ಪೂಜಾರಿಯ ವಿರುದ್ದ ಕೊಲೆ, ಕೊಲೆಗೆ ಯತ್ನ, ದರೋಡೆಗೆ ಸಂಚು, ಹಲ್ಲೆ, ದೊಂಬಿ, ಅಪರಾಧಕ್ಕೆ ಒಳಸಂಚು ಮತ್ತು ಕೊಲೆ ಬೆದರಿಕೆ ಸೇರಿದಂತೆ ಮಂಗಳೂರು ನಗರ, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯಾದ್ಯಂತ ವಿವಿಧ ಠಾಣೆಗಳಲ್ಲಿ 9 ಪ್ರಕರಣಗಳು ದಾಖಲಾಗಿತ್ತು. ಈತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿರುವ ಪೊಲೀಸರು ವಿಜಯಪುರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದಾರೆ.

 ಹನೀಫ್ ಅದ್ಯಪಾಡಿಯ ವಿರುದ್ದ ಕೊಲೆ, ಕೊಲೆಗೆ ಯತ್ನ ಮತ್ತು ಹಲ್ಲೆ ಸೇರಿದಂತೆ ಮಂಗಳೂರು ನಗರದಾದ್ಯಂತ ವಿವಿಧ ಠಾಣೆಗಳಲ್ಲಿ 6 ಪ್ರಕರಣಗಳು ದಾಖಲಾಗಿತ್ತು. ಈತನನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಿ ಬೆಳಗಾವಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಮುಸ್ತಫ‌ನ ಮೇಲೆ ಕೊಲೆ ಮತ್ತು ಕೊಲೆಗೆ ಯತ್ನ ಸೇರಿದಂತೆ ಮಂಗಳೂರು ನಗರದಾದ್ಯಂತ ವಿವಿಧ ಠಾಣೆಗಳಲ್ಲಿ 4 ಪ್ರಕರಣಗಳು ದಾಖಲಾಗಿತ್ತು. ಈತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಮೈಸೂರು ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಮಂಗಳೂರು ಪೊಲೀಸ್‌ ಕಮಿಷನರ್‌ ಚಂದ್ರ ಶೇಖರ್‌ ಗೂಂಡಾ ಕಾಯ್ದೆಯಡಿ ಈ ಮೂವರು ಆರೋಪಿಗಳ ಬಂಧನಕ್ಕೆ ಆಜ್ಞೆ ಹೊರಡಿಸಿದ್ದರು

Leave a Reply

Please enter your comment!
Please enter your name here