ಗೂಂಡಾ ಕಾಯ್ದೆಯಡಿ ವ್ಯಕ್ತಿಯ ಬಂಧನ

ಗೂಂಡಾ ಕಾಯ್ದೆಯಡಿ ವ್ಯಕ್ತಿಯ ಬಂಧನ

ಮಂಗಳೂರು: ಕೊಲೆ, ಸುಲಿಗೆ, ಕೊಲೆಯತ್ನ, ದೊಂಬಿ, ಹಲ್ಲೆ ಮುಂತಾದ ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ಪೋಲಿಸರು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಿದ್ದಾರೆ.
ಬಂಧಿತನನ್ನು ಬಜಲಕೇರಿ ನಿವಾಸಿ ಶೈಲೇಶ್ ಗಾಣಿಗ (25) ಎಂದು ಗುರುತಿಸಲಾಗಿದೆ.

Bajilakere-Shailu-Arrested-Under-Goonda-Act-01

ಪೋಲಿಸ್ ಮಾಹಿತಿಗಳ ಪ್ರಕಾರ ಬಂಧಿತ ಶೈಲೇಶ್ ಕೊಲೆ, ಸುಲಿಗೆ, ಕೊಲೆಯತ್ನ, ದೊಂಬಿ, ಹಲ್ಲೆ ಮುಂತಾದ ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಈತನ ಮೇಲೆ ಮಂಗಳೂರು ನಗರದಾದ್ಯಂತ ವಿವಿದ ಠಾಣೆಗಳಲ್ಲಿ ಸುಮಾರು 12 ಪ್ರಕರಣಗಳು ದಾಖಲಾಗಿದ್ದು ಈತನನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಿ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ,
ಈತನ ಅಪರಾಧ ಕೃತ್ಯವನ್ನು ನಿಯಂತ್ರಿಸಲು ಉತ್ತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶಾಂತಾರಾಮ್ ರವರು ಮಾನ್ಯ ಪೊಲೀಸ್ ಆಯುಕ್ತರಿಗೆ ವರದಿ ನಿವೇದಿಸಿಕೊಡಿದ್ದು ,ವರದಿಯ ಆಧಾರದ ಮೇರೆಗೆ ಪೊಲೀಸ್ ಆಯುಕ್ತರು ಮಂಗಳೂರು ನಗರ ಇವರು ಗೂಂಡಾ ಕಾಯ್ದೆಯಡಿಯಲ್ಲಿ ಬಂಧನದ ಆಜ್ಞೆಯನ್ನು ಹೊರಡಿಸಿರುತ್ತಾರೆ.

Leave a Reply

Please enter your comment!
Please enter your name here