ಗೆದ್ದ ಬಳಿಕ ನಿರಂತರ ಮತದಾರರ ಸುಖ ದುಖಗಳಿಗೆ ಸ್ಪಂದಿಸುತ್ತೇನೆ – ಅಮೃತ್ ಶೆಣೈ

100
Spread the love

ಗೆದ್ದ ಬಳಿಕ ನಿರಂತರ ಮತದಾರರ ಸುಖ ದುಖಗಳಿಗೆ ಸ್ಪಂದಿಸುತ್ತೇನೆ – ಅಮೃತ್ ಶೆಣೈ

ಚಿಕ್ಕಮಗಳೂರು : ಚುನಾವಣೆಯಲ್ಲಿ ತಾನು ಗೆದ್ದರೆ ನಿರಂತರವಾಗಿ ಮತದಾರರ ಸುಖ ದುಃಖಗಳಿಗೆ ಸ್ಪಂದಿಸುವುದಾಗಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅಮೃತ್ ಶೆಣೈ ಹೇಳಿದರು.

ಅವರು ಸೋಮವಾರ ಶ್ರಂಗೇರಿ ಬಳಿಯ ಬಾಳೆಹೊನ್ನೂರಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಈಗಿನ ವಾತಾವರಣದಲ್ಲಿ ಇತರ ಅಭ್ಯರ್ಥಿಗಳು ಕೇವಲ ಪರಸ್ಪರ ಕೆಸರೆರೆಚಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಅಭಿವೃದ್ಧಿಯ ಬಗ್ಗೆ ಮಾತನಾಡದೆ ಕೇವಲ ಟೀಕೆ ಮಾಡುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ. ತಾನು ಕಾಂಗ್ರೆಸ್ ಪಕ್ಷದಲ್ಲಿ ಒಂದು ದಶಕಕ್ಕೂ ಮಿಕ್ಕಿ ನಿಸ್ವಾರ್ಥದಿಂದ ದುಡಿದು ಕಳೆದ 5 ವರ್ಷದಲ್ಲಿ ಸಿಕ್ಕ ಎಲ್ಲಾ ಅವಕಾಶಗಳಲ್ಲಿ ಪ್ರಸ್ತುತ ಸಂಸದೆ ಶೋಭಾ ಕರಂದ್ಲಾಜೆ ಅವರ ನಿಷ್ಕ್ರೀಯತೆಯನ್ನು ಅದೇ ರೀತಿ ಕೇಂದ್ರ ಸರಕಾರದ ವೈಫಲ್ಯಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಿಕೊಂಡು ಬಂದಿರುತ್ತೇನೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವ ವಾತಾವರಣವಿದ್ದರೂ ಸಹ ಕ್ಷೇತ್ರವನ್ನು ಜೆಡಿಎಸ್ ನವರಿಗೆ ಕೊಟ್ಟಿರುವುದುನ್ನು ವಿರೋಧಿಸಿ, ಜೆಡಿಎಸ್ ನವರು ತನ್ನ ಬಳಿ ಯಾರೇ ಅಭ್ಯರ್ಥಿ ಇಲ್ಲದೆ ಕಾಂಗ್ರೆಸ್ ಪಕ್ಷದ ಪ್ರಮೋದ್ ಮಧ್ವರಾಜ್ ಅವರಿಗೆ ಟಿಕೇಟ್ ನೀಡಿರುವುದನ್ನು ವಿರೋಧೀಸಿ ಸ್ವತಂತ್ರವಾಗಿ ವಜ್ರದ ಚಿಹ್ನೆಯ ಅಡಿಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದರು.

ವಜ್ರದಂತೆ ಪರಿಶುದ್ದನಾಗಿ ಕ್ಷೇತ್ರದ ಅಭಿವೃದ್ಧಿಗೋಸ್ಕರ ರೈತರ, ಕಾರ್ಮಿಕರ, ವಿದ್ಯಾರ್ಥಿಗಳ ಶ್ರೇಯಸ್ಸಿಗೋಸ್ಕರ ದುಡಿಯಲು ಸಿದ್ದನಿದ್ದು, ವಜ್ರದಂತೆ ಕಠಿಣವಾಗಿ ಸಾಮಾಜಿಕ ಸಾಮರಸ್ಯ ಕದಡುವ ಶಕ್ತಿಗಳ ವಿರುದ್ದ ಕೂಡ ಹೋರಾಡಲಿದ್ದೇನೆ ಎಂದರು.

ಈ ವೇಳೆ ಮನೋಶಾಸ್ತ್ರಜ್ಞೆ ಜಯಶ್ರೀ ಭಟ್, ಇರ್ಫಾನ್, ರಾಜೇಶ್, ದಿನೇಶ್, ಸಫಾನ್ ಉಪಸ್ಥಿತರಿದ್ದರು.


Spread the love