ಗ್ಯಾಸ್ ಮತ್ತು ಪಡಿತರ ಬಳಕೆದಾರರ ಸಭೆ

ಗ್ಯಾಸ್ ಮತ್ತು ಪಡಿತರ ಬಳಕೆದಾರರ ಸಭೆ
ಮಂಗಳೂರು: ಗ್ಯಾಸ್ ಮತ್ತು ಪಡಿತರ ಬಳಕೆದಾರರ ಸಭೆಯು ಇತ್ತೀಚೆಗೆ ವಿಶ್ವನಾಥ್ ಕೆ.ಬಿ.ಯವರ ಅಧ್ಯಕ್ಷತೆಯಲ್ಲಿ ಜರಗಿತು. ಅಡುಗೆ ಅನಿಲಕ್ಕೆ ಸಂಬಂಧಿಸಿದ ಹಲವು ದೂರುಗಳು ಈಗಲೂ ಗ್ರಾಹಕರಿಂದ ಬರುತ್ತಿದ್ದು ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ನಿಯೋಗ ಭೇಟಿ ಮಾಡಿ ಪರಿಹಾರ ಕಂಡುಕೊಳ್ಳಬೇಕೆಂದೂ, ಗ್ಯಾಸ್ ಏಜೆನ್ಸಿಗಳು ನಿಕಟಪೂರ್ವ ಜಿಲ್ಲಾಧಿಕಾರಿಯವರು ನಿರ್ದೇಶಿಸಿರುವ ಜನ ಸಂಪರ್ಕ ಸಭೆಯನ್ನು ಪುನಃ ಸಂಘಟಿಸುವಂತೆ ನೂತನ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಬೇಕೆಂದು ಸಲಹಾ ಸಮಿತಿ ಸಭೆಯು ತೀರ್ಮಾನಿಸಿತು.

ಅದೂ ಅಲ್ಲದೆ ಪಡಿತರ ಸಮಸ್ಯೆ ಜಟಿಲವಾಗುತ್ತಿದ್ದು ನೂತನ ಕೂಪನ್ ಸಿಸ್ಟಮ್‍ನಿಂದಾಗಿ ರೋಗಿಗಳಿಗೆ, ವೃದ್ಧರಿಗೆ ಕಷ್ಟವಾಗುತ್ತಿದ್ದು ಬಳಕದಾರರಿಗೆ ಯಾವುದೇ ಸಮಸ್ಯೆಯಿಲ್ಲದೆ ಪಡಿತರ ದೊರಕುವಂತಾಗಲು ಅದಕ್ಕೆ ಪರ್ಯಾಯವಾಗಿ ಬೇರೆ ವಿಧಾನವನ್ನು ಪಡಿತರ ಅಧಿಕಾರಿಗಳೊಂದಿಗೆ ಹಾಗೂ ಮಾನ್ಯ ಸಚಿವರೊಂದಿಗೆ ಚರ್ಚಿಸಬೇಕೆಂದು ವೇದಿಕೆ ತೀರ್ಮಾನಿಸಿತು.

ಸಭೆಯಲ್ಲಿ ಗೌರವಾಧ್ಯಕ್ಷ ಧರ್ಮೇಂದ್ರ ಕೆ., ಉಪಾಧ್ಯಕ್ಷರುಗಳಾದ ರೇಖಾ ಬಾಳಿಗಾ, ವಿಷ್ಣು ಪ್ರಸಾದ್, ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಜಕ್ರಿಬೆಟ್ಟು, ಸಂಘಟನಾ ಕಾರ್ಯದರ್ಶಿ ಅಬ್ದುಸ್ಸಲಾಮ್ ಸಿ.ಎಚ್., ಕೇಶವ ಉಜ್ಜೋಡಿ, ಜತೆ ಕಾರ್ಯದರ್ಶಿ ಶ್ರೀಕಾಂತ್ ಸಾಲ್ಯಾನ್, ಪತ್ರಿಕಾ ಕಾರ್ಯದರ್ಶಿ ಮುಹಮ್ಮದ್ ಮುಹ್ಸಿನ್, ಪದ್ಮನಾಬ್ ಉಳ್ಳಾಲ, ಅಬ್ದುರ್ರಹ್ಮಾನ್ ಬೀರಿ, ಸದಾನಂದ ಉಪಸ್ಥಿತರಿದ್ದರು.

Leave a Reply