‘ಜನಸಾಮಾನ್ಯರಿಗೆ ಕಾನೂನು’ ಸರಣಿ ಕಾರ್ಯಕ್ರಮದ ಅಂಗವಾಗಿ ಉಪನ್ಯಾಸ

ಮಂಗಳೂರು: ಬೆಸೆಂಟ್ ಮಹಿಳಾ ಕಾಲೇಜು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಶಿಕ್ಷಣ ಇಲಾಖೆ, ಇವರುಗಳ ಸಂಯುಕ್ತ ಆಶ್ರಯದಲ್ಲಿ ‘ಜನಸಾಮಾನ್ಯರಿಗೆ ಕಾನೂನು’ ಮಾಹಿತಿಗಾಗಿ ಮಂಗಳೂರು ನಗರ ಮತ್ತು ತಾಲೂಕಿನಾದ್ಯಂತ ‘ಕಾನೂನು ಸಾಕ್ಷರತಾ ರಥ’ ಹಾಗೂ ‘ಸಂಚಾರಿ ಜನತಾ ನ್ಯಾಯಾಲಯದ ಅಭಿಯಾನ’ ದಡಿ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ತಾ.31 ಆಗಸ್ಟ್‍ರಂದು ‘ಮಹಿಳೆ ಮತ್ತು ಕಾನೂನು’ ಎಂಬ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

SONY DSC

ಮುಖ್ಯ ಅತಿಥಿಗಳಾದ ಶ್ರೀಮತಿ ಎನ್. ವಿ. ಭವಾನಿ ನೇರಳೆ ಮಾತನಾಡುತ್ತಾ ದಂಡ ಸಂಹಿತೆಯಲ್ಲಿ ತಿಳಿಸಲಾದ ದೌರ್ಜನ್ಯಕ್ಕೊಳಗಾದ ಮಹಿಳೆಯ ಗೌರವ ಕಾಪಾಡುವ ಕಾನೂನುಗಳ ಮಾಹಿತಿ ನೀಡಿದರು. ಪೋಸ್ಕೊ ನಿಯಮದ ಬಗ್ಗೆ ಹೇಳುತ್ತಾ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಗುವನ್ನು ಮದುವೆಯಾದ ವ್ಯಕ್ತಿ ಅಪರಾಧಿ ಎನಿಸಿಕೊಳ್ಳುತ್ತಾನೆ ಎಂದರು. ಗೃಹ ದೌರ್ಜನ್ಯ ಹಾಗೂ ಹಿಂದು ಉತ್ತರಾಧಿಕಾರದ ಬಗ್ಗೆ ಇರುವ ಕಾನೂನುಗಳನ್ನು ಸಹ ತಿಳಿಸಿದರು.

ಎಸ್.ಪಿ. ಚಂಗಪ್ಪ, ಅಧ್ಯಕ್ಷರು, ಮಂಗಳೂರು ವಕೀಲರ ಸಂಘ, ಮಂಗಳೂರು, ಮಾತನಾಡಿ ಭಾರತದಲ್ಲಿ ಸಂವಿಧಾನ ಪೂರಕವಾಗಿ ಮೂರು ಸಾವಿರಕ್ಕೂ ಹೆಚ್ಚು ಕಾನೂನುಗಳಿವೆ, ಅಗತ್ಯವಾದ ಕಾನೂನಗಳ ಅರಿವು ಇದ್ದಾಗ ವ್ಯಕ್ತಿ ಸಮಾಜದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಾನೆ ಎಂದರು. ಹುಟ್ಟಿನಿಂದ ಸಾವಿನವರೆಗೆ ನಾವೆಲ್ಲರೂ ವಿವಿಧ ಕಾನೂನುಗಳಿಂದ ರಕ್ಷಿಸಲ್ಪಟ್ಟಿದ್ದೇವೆ ಎಂದು ಮುಖ್ಯವಾದ ಕಾನೂನುಗಳ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ಗಣೇಶ್ ಬಿ, ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಮಾನ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದಕ್ಷಿಣ ಕನ್ನಡ, ಮಂಗಳೂರು, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಮಂಗಳೂರು ವಕೀಲರ ಸಂಘದ ಹಿರಿಯ ನ್ಯಾಯವಾದಿಗಳಾದ ಶ್ರೀಮತಿ ಗೌರಿ ಕೆ.ಎಸ್., ಇವರು ಮಹಿಳೆ ಮತ್ತು ಕಾನೂನು ಎಂಬ ವಿಷಯದ ಬಗ್ಗೆ ವಿಸೃತ ಉಪನ್ಯಾಸ ನೀಡಿದರು.  ಮಹಿಳೆಯರು ತಮ್ಮನ್ನು ಪ್ರತಿನಿಧಿಸುವ ಸ್ವತಂತ್ರ ಮನೋಭಾವ, ಕಾನೂನಿನ ಅರಿವು ಮತ್ತು ತಾನು ಎಲ್ಲರಿಗೂ ಸಮಾನಳು ಎನ್ನುವ ಆತ್ಮವಿಶ್ವಾಸವಿದ್ದಲ್ಲಿ ಕಾನೂನಿನ ಪೂರ್ಣ ಪ್ರಯೋಜನ ಪಡೆಯಬಹುದಾಗಿದೆ ಎಂದರು. ಕಾಲೇಜಿನ ಪ್ರಾಂಶುಪಾಲೆ ಡಾ.ಸುಧಾ ಕೆ ಮೊದಲಿಗೆ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ದೀಪ್ತಿ ನಿರೂಪಿಸಿದರು ಹಾಗೂ ಸಿದ್ದಮ್ಮ ವಂದಿಸಿದರು.  ಕಾನೂನು ಸಾಕ್ಷರತಾ ರಥದ ಮೂಲಕ ನ್ಯಾಯಾಲಯದ ಮಾದರಿಯನ್ನು ವಿದ್ಯಾರ್ಥಿಗಳಿಗೆ ತೋರಿಸಲಾಯಿತು.

Leave a Reply