ಜನ ಜಾಗೃತಿಯಿಂದ ಗೋ ರಕ್ಷಣೆ ಸಾಧ್ಯ : ಸಿದ್ದಾರ್ಥ ಗೋಯೆಂಕಾ

Spread the love

ಜನ ಜಾಗೃತಿಯಿಂದ ಗೋ ರಕ್ಷಣೆ ಸಾಧ್ಯ : ಸಿದ್ದಾರ್ಥ ಗೋಯೆಂಕಾ

ಉಡುಪಿ : ಗೋವಿನೊಂದಿಗಿರುವ ಭಾವನಾತ್ಮಕ ಸಂಬಂಧದ ಜೊತೆಗೆ, ಗೋವಿನಿಂದ ಸಿಗುವ ವಾಣಿಜ್ಯ ಆಧಾಯ ಹಾಗೂ ಔಷಧಿಯುಕ್ತ ವಸ್ತುಗಳ ಮಹತ್ವವನ್ನು ಮನೆ ಮನೆಗೆ ಮುಟ್ಟಿಸಿ ಜನಜಾಗೃತಿ ಮಾಡುವುದರಿಂದ ಗೋರಕ್ಷಣೆ ಸಾಧ್ಯ ಎಂದು ಬಿಜೆಪಿ ಗೋ ಸಂರಕ್ಷಣಾ ಪ್ರಕೋಷ್ಠದ ರಾಜ್ಯ ಸಂಚಾಲಕರಾದ ಸಿದ್ಧಾರ್ಥ ಗೋಯೆಂಕಾ ಹೇಳಿದರು.

bjp-go-raksha

ಅವರು ಉಡುಪಿ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಜರುಗಿದ ಗೋಸಂರಕ್ಷಣಾ ಪ್ರಕೋಷ್ಠದ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಕೃಷಿಕರು ಗೋವುಗಳನ್ನು ಕಸಾಯಿಕಾನೆಗೆ ಮಾರಾಟ ಮಾಡದೆ ಅದರ ಅಂತ್ಯ ಕಾಲದವರೆಗೆ ಪೋಷಿಸುವ ಮಾನಸಿಕತೆ ಬೆಳೆಸಿಕೊಳ್ಳಬೇಕು ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಅಕ್ರಮ ಗೋ ಸಾಗಾಟ ಮತ್ತು ಗೋ ಹತ್ಯೆಯನ್ನು ನಿಯಂತ್ರಿಸಬೇಕೆಂದು ಎಚ್ಚರಿಸಿದರು.

ಸಭೆಯ ಅಧ್ಯಕ್ಷತೆಯನ್ನು ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ ಶೆಟ್ಟಿ, ಗೋ ಸಂರಕ್ಷಣಾ ಪ್ರಕೋಷ್ಠದ ರಾಜ್ಯ ಸಹ ಸಂಚಾಲಕರಾದ ಸುಂದರ್‍ರಾಜ್, ನೀಲಾವರ ಗೋ ಶಾಲೆಯ ಪ್ರಮುಖ್ ರಾಘವೇಂದ್ರ ಆಚಾರ್ಯ, ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ನಳಿನಿ ಪ್ರದೀಪ್ ರಾವ್, ಸಂಧ್ಯಾ ರಮೇಶ, ಜಿಲ್ಲಾ ಉಪಾಧ್ಯಕ್ಷ ಸುರೇಶ ಶೆಟ್ಟಿ ಗುರ್ಮೆ, ಉಡುಪಿ ನಗರ ಅಧ್ಯಕ್ಷ ಪ್ರಭಾಕರ ಪೂಜಾರಿ, ಪ್ರಧಾನ ಕಾರ್ಯದರ್ಶಿ ಜಗದೀಶ ಆಚಾರ್ಯ, ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ರಜನಿ ಹೆಬ್ಬಾರ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸತೀಶ್ ಶೆಟ್ಟಿ ಮುಟ್ಲುಪಾಡಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಉಪ್ಪೂರು, ಶ್ರೀನಿವಾಸ ಶರ್ಮ ಮೊದಲಾದವರು ಉಪಸ್ಥಿತರಿದ್ದರು. ರಾಜ್ಯ ಕಾರ್ಯಕಾರಿಣಿ ಸದಸ್ಯೆ ಶ್ಯಾಮಲಾ ಎಸ್. ಕುಂದರ್ ಸ್ವಾಗತಿಸಿ, ಜಿಲ್ಲಾ ಗೋಸಂರಕ್ಷಣಾ ಸಂಚಾಲಕ ರಾಧಕೃಷ್ಣ ಮೆಂಡನ್ ಮಲ್ಪೆ ವಂದಿಸಿದರು.


Spread the love