ಜಿಗಿಯುವ ಜೇಡಕ್ಕೆ ಅಂತಾರಾಷ್ಟ್ರೀಯ ಮನ್ನಣೆ – ಕೊಂಕಣ ಕರಾವಳಿಯಲ್ಲಿ ಮಹತ್ವ ಅಧ್ಯಯನ

80

ಜಿಗಿಯುವ ಜೇಡಕ್ಕೆ ಅಂತಾರಾಷ್ಟ್ರೀಯ ಮನ್ನಣೆ – ಕೊಂಕಣ ಕರಾವಳಿಯಲ್ಲಿ ಮಹತ್ವ ಅಧ್ಯಯನ

ಮಂಗಳೂರುಃ ದಕ್ಷಿಣ ಭಾರತದ ಎರಡು ಪಟ್ಟಿಯ ಜಿಗಿಯುವ ಜೇಡ ಟೆಲಮೋನಿಯಡಿಮಿಡಿಯಾಟಾ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಅನನ್ಯ ವನ್ಯಜೀವಿ ಸಂಸೋಧನೆಯಲ್ಲಿ ತೊಡಗಿರುವ ಸಂಶೋಧಕ ಜಾವೇದ್ ಅಹ್ಮದ್ ನೇತೃತ್ವದಲ್ಲಿ ಮೂಡಬಿದ್ರಿ ಮೂಲದ ಪರಿಸರವಾದಿ, ಶಸ್ತ್ರಚಿಕಿತ್ಸಕ ಮತ್ತು ವನ್ಯಜೀವಿ ಉತ್ಸಾಹಿ ಕೃಷ್ಣ ಮೋಹನ್, ನೈಸರ್ಗಿಕವಾದಿ, ಬಿರ್ಡೆರ್, ಲ್ಯಾಂಡ್ರೇಸ್ ಡಾಗ್ ಎಕ್ಸ್ಪರ್ಟ್ ಮತ್ತು ಅಮೆಚೂರ್ ಅರೆಕ್ನಾಲಾಜಿಸ್ಟ್ ರಾಜಶ್ರೀ ಖಲಾಪ್, ನೈಸರ್ಗಿಕ ಮತ್ತು ಮ್ಯಾಕ್ರೊ ವನ್ಯಜೀವಿ ಛಾಯಾಗ್ರಹಣ ಉತ್ಸಾಹಿ ಸೋಮನಾಥ್ ಕುಂಬಾರ್ ಅವರು ಸಿದ್ಧಪಡಿಸಿದ ಸಂಶೋಧನ ಲೇಖನ ಇದೀಗ ಅಂತರರಾಷ್ಟ್ರೀಯವಾಗಿ ಪ್ರಭಾವ ಹೊಂದಿರುವ ವೈಜ್ಞಾನಿಕ ಜರ್ನಲ್ ‘ಪೆಕ್ಹ್ಯಾಮಿಯಾ’ನಲ್ಲಿ ಪ್ರಕಟವಾಗಿದೆ.

ಭಾರತೀಯ ಜೇಡಗಳ ಅಧ್ಯಯನದಲ್ಲಿ ಆಸಕ್ತರಾಗಿರುವ ಶ್ರೀಮತಿ ರಾಜಶ್ರೀ ಖಲಾಪ್ ಅವರು ಕೊಂಕಣ ಕರಾವಳಿಯುದ್ದಕ್ಕೂ ತನ್ನ ರಜೆಯ ಮನೆಯ ಸುತ್ತಮುತ್ತಲಿರುವ ಉದ್ಯಾನದಲ್ಲಿ ಎರಡು-ಪಟ್ಟೆಯ ಜಿಗಿಯುವ ಜೇಡ ಸೂಕ್ಷ್ಮವಾಗಿ ಹಿಮ್ಮೆಟ್ಟುವಿಕೆಯನ್ನು ಚಿತ್ರೀಕರಿಸಿದ್ದರು. ನಮ್ಮ ಜೇಡಗಳ ಜೀವನ ಬಗ್ಗೆ ಸಾಮಾನ್ಯ ತಿಳುವಳಿಕೆ ಮತ್ತು ಅಧ್ಯಯನ ಕೊರತೆ ಇದೆ ಎಂದು ಗೊತ್ತಾದ ಮೇಲೆ ಖಲಾಪ್ ಅವರು ರಜೆಯಲ್ಲಿ ಕೊಂಕಣ ಕರಾವಳಿಯ ಅವರ ರಜೆಯ ಮನೆಗೆ ಹೋದಾಗ ಅತ್ಯಂತ ಶ್ರದ್ಧೆಯಿಂದ ಮೂರು ವಿಭಿನ್ನ ಹೆಣ್ಣು ಎರಡು-ಪಟ್ಟೆಗಳ ಜಿಗಿತಗಾರರ ಹಿಮ್ಮೆಟ್ಟುವಿಕೆಯ ಛಾಯಾಗ್ರಹಣ ಮತ್ತು ರೆಕಾರ್ಡಿಂಗ್ ನಡೆಸಿದರು.

ಎರಡು ಪಟ್ಟಿಯ ಜಿಗಿ ಜೇಡ ಮತ್ತೊಂದು ಜೇಡ ಪ್ರಭೇದವನ್ನು ತಿನ್ನುವ ದೃಶ್ಯಗಳನ್ನು ಅತ್ಯಂತ ಕ್ಲಿಷ್ಟಕರ ಸನ್ನಿವೇಶದಲ್ಲಿ ತಮ್ಮ ದುಬಾರಿಯಲ್ಲದ ಸ್ಮಾರ್ಟ್ ಫೆÇೀನ್ ಕ್ಯಾಮೆರಾವನ್ನು ಬಳಸಿ ಸೋಮನಾಥ್ ಬಿ.ಕುಂಬಾರ್ ಚಿತ್ರೀಕರಿಸಿದರು. ಈ ತಂಡವು ಜಂಪಿಂಗ್ ಜೇಡಗಳ ಮೇಲೆ ಜಾಗತಿಕ ಮಟ್ಟದಲ್ಲಿ ಸಂಶೋಧನೆ ಮಾಡುತ್ತಿರುವ ಡಾ. ಡೇವಿಡ್ ಇ. ಹಿಲ್ ಮತ್ತು ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ ಸಹಯೋಗದಲ್ಲಿ ಕೆಲಸ ಮಾಡುವ ತಜ್ಞರಾದ ಡಾ. ರಿಚರ್ಡ್ ಜೆ. ಪಿಯರ್ಸ್ ಎಂಬ ಪ್ರಮುಖ ಬ್ರಿಟಿಷ್ ಸ್ಪೈಡರ್ ತಜ್ಞರ ಸಹಯೋಗ ಪಡೆದುಕೊಂಡಿತ್ತು.

ಜಂಪಿಂಗ್ ಜೇಡಗಳು ಸ್ಪೈಡರ್ ಕುಟುಂಬದ ಸಾಲ್ಟಿಡಿಡೆಗೆ ಸೇರಿರುತ್ತವೆ. 6115 ದಾಖಲಾದ ಪ್ರಬೇಧಗಳು ಮತ್ತು 636 ಜಾತಿಗಳೊಂದಿಗೆ ಜೇಡ ಕುಟುಂಬಗಳ ವರ್ಗೀಕರಣ ಬಹುದೊಡ್ಡದಾಗಿದೆ. ಬೇಟೆಯಾಡುವಾಗ, ಬೆದರಿಕೆಗಳಿಗೆ ಪ್ರತಿಕ್ರಿಯಿಸುತ್ತಾ ಅಥವಾ ದೀರ್ಘ ಅಂತರವನ್ನು ಹಾರುವಾಗ ಅವುಗಳು ಅತ್ಯಂತ ಗಡಿಬಿಡಿಯ ಜಿಗಿತಕ್ಕೆ ಹೆಸರುವಾಸಿಯಾಗಿದೆ, ಎರಡು-ಪಟ್ಟಿಯ ಜಂಪರ್ಸ್ ಸುಂದರವಾದ ಜೇಡ. ಸುಲಭವಾಗಿ ಗುರುತಿಸಲ್ಪಟ್ಟಿರುವ ಮತ್ತು ಸಾಮಾನ್ಯವಾಗಿ ಕಂಡುಬಂದಿದ್ದರೂ, ಭಾರತದಲ್ಲಿ ಕಂಡುಬರುವ ಹೆಚ್ಚಿನ ಜೇಡಗಳಂತೆ ಇದನ್ನು ಸರಿಯಾಗಿ ಅಧ್ಯಯನ ಮಾಡಲಾಗಿಲ್ಲ.

ಪ್ರಸ್ತುತ ಅಧ್ಯಯನವು ಈ ಜೇಡ ಜಾತಿಗಳ ಜೀವನ ಪದ್ಧತಿಯಯ ಅವಲೋಕನಾ ಸಂಶೋಧನೆಯಾಗಿದೆ. ಜೇಡನ ನಡವಳಿಕೆಯ ಎರಡು ಅಂಶಗಳಿಗೆ ಹೆಚ್ಚಿನ ಗಮನ ನೀಡಲಾಗಿದ್ದು, ಅವುಗಳೆಂದರೆ ರಾತ್ರಿಯ ವೇಳೆಯ ತಾತ್ಕಾಲಿಕ ಜೇಡನ ಬಲೆ ಅಥವ ಗೂಡು ಕಟ್ಟುವಿಕೆ ಮತ್ತದರ ಬಳಕೆಯನ್ನು ಮತ್ತು ಅದರ ಬೇಟೆಯಾಡುವ ಅಂಶಗಳನ್ನು ದಾಖಲಿಸಲು ಪ್ರಯತ್ನಿಸಲಾಗಿದೆ.

ಮಹಾರಾಷ್ಟ್ರ ರಾಜ್ಯದ ಅಲಿಬಾಗ್ ಜಿಲ್ಲೆಯ ನಾಗಾನ್ ಪ್ರದೇಶದಲ್ಲಿ ಈ ಅಧ್ಯಯನಗಳನ್ನು ಹೆಚ್ಚಾಗಿ ಮಾಡಲಾಗಿದೆ. ಈ ಸಂಶೋಧನೆಯ ವಿಸ್ತ್ರತ ವರದಿಯನ್ನು 25 ಮಾರ್ಚ್, 2019 ರ ದಿನಾಂಕದ ‘ಫೆಖ್ಯಾಮಿಯಾ’ ವೈಜ್ಞಾನಿಕ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ. ಜಂಪಿಂಗ್ ಜೇಡಗಳ ಬಗ್ಗೆ ವೈಜ್ಞಾನಿಕ ಸಂಶೋಧನೆಗಳನ್ನು ಪ್ರಕಟಿಸಲು ಮಾತ್ರ ಮೀಸಲಾಗಿರುವ ವಿಶ್ವದಲ್ಲೇ ಏಕೈಕ ಪತ್ರಿಕೆ’ ಪೆಕ್ಹ್ಯಾಮಿಯಾ ‘.

ತಮಾಷೆಯ ವಸ್ತುವಾಗಿತ್ತು ಜಿಗಿ ಜೇಡ

ಎರಡು ಪಟ್ಟಿಯ ಜಿಗಿತಗಾರ ಟೆಲಮೋನಿಯಡಿಮಿಡಿಯಾಟಾ ಕುರಿತು ಸ್ವಾರಸ್ಯಕರ ಕತೆಗಳಿವೆ. ಒಮ್ಮೆ ಅದು ವ್ಯಾಪಕವಾಗಿ ಇಂಟರ್ನೆಟ್ ಹಾಸ್ಯದ ಬಲಿಪಶುವಾಗಿತ್ತು. ಸಾಮಾಜಿಕ ಮಾಧ್ಯಮ ಮತ್ತು ಸ್ಮಾರ್ಟ್ ಫೆÇೀನ್ ಹುಟ್ಟುವ ಮುಂಚೆಯೇ ಈ ನಕಲಿ ಈ ತಮಾಷೆಯ ನಕಲಿ ಸಂದೇಶ ಇಮೇಲ್ ಮೂಲಕ ಹರಡಿತ್ತು. ನಕಲಿ ಸಂದೇಶದಲ್ಲಿ ಓದುಗರು ಅಪಾಯಕಾರಿಯಾದ ಜೇಡನ ಬಗ್ಗೆ ಎಚ್ಚರಿಕೆ ನೀಡಿದ್ದರು. ಇದು ಟಾಯ್ಲೆಟ್ ಸೀಟಿನ ಅಡಿಯಲ್ಲಿ ಅವಿತು ಕುಳಿತು ಮುನುಷ್ಯರನ್ನು ಕಚ್ಚುವÀ ಮೂಲಕÀ ವಿಷವನ್ನು ಇಂಜೆಕ್ಟ್ ಮಾಡುತ್ತದೆ ಎಂದಿತ್ತು ಸಂದೇಶಗಳು. ಭಾರತ ಮತ್ತು ಇತರ ಏಷ್ಯಾದ ದೇಶಗಳಿಂದ ಬರುವ ವಿಮಾನಗಳ ಶೌಚಾಲಯಗಳಲ್ಲಿ ಅನೇಕ ಇಂತಹ ಜೇಡಗಳು ಕಂಡುಬಂದಿವೆ ಎಂದು ಓದುಗರು ಎಚ್ಚರಿಸಿದ್ದರು. ಆದರೆ, ಅದೆಲ್ಲವು ಸುಳ್ಳಾಗಿತ್ತು.

ಪ್ರಕೃತಿ ಛಾಯಾಗ್ರಾಹಕ ಡಾ. ಕೃಷ್ಣ ಮೋಹನ್ ಅವರು ಇಂತಹ ಫೇಕ್ ಸುದ್ದಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ. ತನ್ನ ಛಾಯಾಗ್ರಹಣ ಬ್ಲಾಗ್ನಿನಲ್ಲಿ ಈ ಬಗ್ಗೆ ಬರೆದಿರುವ ಅವರು 1999 ರಲ್ಲಿ ತಾನು ಮೊದಲ ಬಾರಿಗೆ ಫೇಕ್ ಸುದ್ದಿಯನ್ನು ಎದುರಿಸಬೇಕಾಯಿತು. ಹೆಚ್ಚಿನ ಓದುಗರು ತಕ್ಷಣ ಅದನ್ನು ತಮಾಷೆಯಾಗಿ ಗುರುತಿಸಲು ಸಮರ್ಥರಾಗಿದ್ದರು. ಅನಂತರ ಯಾರೊ ಒಬ್ಬರು ಸಂದೇಶ ಹೊಸದಾಗಿ ಬರೆದು ಎರಡು ಪಟ್ಟೆಯ ಟೆಲಿಮೋನಿಯಸ್ ವಿರುದ್ಧ ದೂರಲಾಗಿತ್ತು. ವಾಸ್ತವದಲ್ಲಿ ಇದು ಸಂಪೂರ್ಣವಾಗಿ ನಿರುಪದ್ರವ ಜೇಡ ಎನ್ನುತ್ತಾರೆ ಡಾ. ಕೃಷ್ಣ ಮೋಹನ್. ಇಂತಹ ಕುಚೇಷ್ಟೆಗಳು ಭಯವನ್ನು ಹುಟ್ಟುಹಾಕುತ್ತವೆ, ಕಟ್ಟುಕತೆಗಳನ್ನು ಹರಡುತ್ತವೆ ಮತ್ತು ಪ್ರಕೃತಿಯ ಬಗ್ಗೆ ತಪ್ಪು ಗ್ರಹಿಕೆಯನ್ನು ಉಂಟುಮಾಡುತ್ತವೆ ಎಂದಿದ್ದಾರೆ.

ಅಧ್ಯಯನದ ಪ್ರಾಮುಖ್ಯತೆ

ಈ ಸಂಶೋಧನೆಗಳು ಪ್ರಾಮುಕ್ಯವಾಗುತ್ತವೆ ಏಕೆಂದರೆ ಇದು ಜೇಡರ ಜಾತಿಗಳ ಮೇಲೆ ಹೆಚ್ಚಿನ ಬೆಳಕು ಚೆಲ್ಲುತ್ತದೆ ಮಾತ್ರವಲ್ಲದೆ, ಜೀವವೈವಿಧ್ಯತೆ ಮತ್ತು ಪರಿಸರ ವ್ಯವಸ್ಥೆಯ ಕಾರ್ಯವಿಧಾನವನ್ನು ತಿಳಿಯಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಹುಲಿ ಮತ್ತು ಆನೆ ಮುಂತಾದ ಚಿತ್ತಾಕರ್ಷಕ ಪ್ರಾಣಿಗಳು ಜನರನ್ನು ಹೆಚ್ಚಾಗಿ ಆಕರ್ಷಿಸುತ್ತದೆ. ಪ್ರಿಯ ಕಲ್ಪನೆಯ ಮೇಲೆ ಪ್ರಭಾವ ಬೀರುತ್ತವೆ. ಆದರೆ, ಹರಿದಾಡುವ ಸಣ್ಣ ಕ್ರಿಮಿ ಕೀಟಗಳು, ಜೇಡಗಳು ಅವುಗಳಿಗೆಸಂಬಂಧಿಸಿದ ಪ್ರಬೇಧಗಳು ಪರಿಸರ ವ್ಯವಸ್ಥೆಯು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಲು ಸಹಾಯಕವಾಗಿರುತ್ತದೆ. ಆದರೆ, ಬಹಳಷ್ಟು ಸಂದರ್ಭಗಳಲ್ಲಿ ಈ ಜೀವಿಗಳನ್ನು ಕಡೆಗಣಿಸುವುದÀು ಮಾತ್ರವಲ್ಲದೆ ಇವುಗಳನ್ನು ತಪ್ಪಾಗಿ ಗ್ರಹಿಸಲಾಗುತ್ತಿದೆ.

ಪ್ರಕೃತಿ ಛಾಯಾಗ್ರಾಹಕ ಡಾ. ಕೃಷ್ಣ ಮೋಹನ್

ಹೀಗಾಗಿ ಈ ಹಾನಿಕಾರಕವಲ್ಲದ ಜಂಪಿಂಗ್ ಜೇಡಗಳ ಬಗ್ಗೆ ಅಧ್ಯಯನ ಕೈಗೊಂಡು ತಮ್ಮ ಜ್ಞಾನಕ್ಕೆ ಸೇರಿಸಿಕೊಳ್ಳಲು ಸಂಶೋಧನಾ ತಂಡವು ಪ್ರಯತ್ನಿಸಿದೆ. ಈ ಜೇಡ ಪ್ರಬೇಧವು ಹಾನಿಕಾರಕವಾದ ಕೀಟ ಜಾತಿಗಳಾದ ನುಸಿ ಮತ್ತು ಸೊಳ್ಳೆಗಳನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಪ್ರಭೇದಗಳ ಬಗ್ಗೆ ಹೊಸ ಮಾಹಿತಿಯನ್ನು ಬಹಿರಂಗಪಡಿಸುವುದರ ಜತೆಗೆ ಇದು ನಮ್ಮ ಮಹಾನ್ ದೇಶದಲ್ಲಿ ಕಂಡುಬರುವ ಜೇಡಗಳ ನೈಸರ್ಗಿಕ ಇತಿಹಾಸ ಮತ್ತು ಪರಿಸರ ವಿಜ್ಞಾನದ ಮಾಹಿತಿಯನ್ನು ಕೂಡ ನೀಡುತ್ತದೆ ಎಂದು ಜಾವೇದ್ ಅಹ್ಮದ್ ಹೇಳುತ್ತಾರೆ. “ಇದು ಕೇವಲ ಪ್ರಾರಂಭವಾಗಿದೆ. ಸಂಶೋಧನೆಯಲ್ಲಿ ನಾವು ಬಹುದೂರ ಸಾಗಬೇಕಾಗಿದೆ. ಮುಂಬರುವ ದಿನಗಳಲ್ಲಿ ಜಾಗತಿಕ ವಾತಾವರಣ ಬದಲಾವಣೆ ಮತ್ತು ಪರಿಣಾಮಗಳು ಕಟು ವಾಸ್ತವ ಆಗಿರುವಾಗ ಇಂತಹ ಜೇಡಗಳ ಧ್ಯಯನ ಕೂಡ ಮಹತ್ವ ಪಡೆದುಕೊಳ್ಳುತ್ತದೆ.”