ಜೀವನ್ ಕೆ. ಶೆಟ್ಟಿಯವರಿಗೆ ಸರ್. ಎಂ.ವಿಶ್ವೇಶ್ವರಯ್ಯ ಬೆಸ್ಟ್ ಇಂಜಿನಿಯರಿಂಗ್ ನ್ಯಾಷನಲ್ ಅವಾರ್ಡ್

ಜೀವನ್ ಕೆ. ಶೆಟ್ಟಿಯವರಿಗೆ ಸರ್. ಎಂ.ವಿಶ್ವೇಶ್ವರಯ್ಯ ಬೆಸ್ಟ್ ಇಂಜಿನಿಯರಿಂಗ್ ನ್ಯಾಷನಲ್ ಅವಾರ್ಡ್
ಮೂಲ್ಕಿಯ ಶಾರದಾ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಇಂಜಿನಿಯರ್ ಜೀವನ್ ಕೆ. ಶೆಟ್ಟಿಯವರಿಗೆ ನ್ಯಾಷನಲ್ ಅವಾರ್ಡ್ ಬೆಂಗಳೂರಿನ ಜಾಗತಿಕ, ಆರ್ಥಿಕ ಹಾಗು ಸಾಮಾಜಿಕ ಪರಿವರ್ತನಾ ಸಂಸ್ಥೆಯು ಕೊಡಮಾಡುವ ಪ್ರತಿಷ್ಠಿತ ಸರ್. ಎಂ.ವಿಶ್ವೇಶ್ವರಯ್ಯ ಬೆಸ್ಟ್ ಇಂಜಿನಿಯರಿಂಗ್ ನ್ಯಾಷನಲ್ ಅವಾರ್ಡ್‍ಗೆ ಮೂಲ್ಕಿಯ ಶಾರದಾ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಹಾಗು 2016ರ ರಾಷ್ಟ್ರೀಯ ಗೌರವ ಅವಾರ್ಡ್ ಪುರಸ್ಕøತ ಇಂಜಿನಿಯರ್ ಜೀವನ್ ಕೆ. ಶೆಟ್ಟಿ ಆಯ್ಕೆಯಾಗಿದ್ದಾರೆ.

ಜನವರಿ 28, ಶನಿವಾರ ಬೆಂಗಳೂರಿನ ಎ.ಡಿ.ಎ ರಂಗಮಂದಿರದಲ್ಲಿ ಕೇಂದ್ರ ಸರಕಾರದ ಮಾಜಿ ಯೋಜನಾ ಮಂತ್ರಿಗಳಾದ ಎಂ.ವಿ ರಾಜಶೇಖರನ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಚಲನಚಿತ್ರ ನಿರ್ಮಾಪಕರು, ನಿರ್ದೇಶಕರಾದ ಎಂ.ಎನ್.ಸುರೇಶ್, ಸಂಸ್ಥೆಯ ಅಧ್ಯಕ್ಷರಾದ ಡಾ| ಶಿವಪ್ಪ ಉಪಸ್ಥಿತರಿರುವರು.