ಜುಲೈ 24ರಂದು ಕರ್ನಾಟಕ ಕಾರ್ಮಿಕ ವೇದಿಕೆಯಿಂದ ಉಚಿತ ವೈದ್ಯಕೀಯ ಶಿಬಿರ

ಜುಲೈ 24ರಂದು ಕರ್ನಾಟಕ ಕಾರ್ಮಿಕ ವೇದಿಕೆಯಿಂದ ಉಚಿತ ವೈದ್ಯಕೀಯ ಶಿಬಿರ

ಉಡುಪಿ: ಕರ್ನಾಟಕ ಕಾರ್ಮಿಕ ವೇದಿಕೆ ಉಡುಪಿ ಜಿಲ್ಲಾ ಘಟಕ ಹಾಗೂ ಆದರ್ಶ ಆಸ್ಪತ್ರೆ ಉಡುಪಿ ಇವರುಗಳ ಸಹಯೋಗದೊಂದಿಗೆ ಜುಲೈ 24 ರಂದು ಭಾನುವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1,30 ರ ವರೆಗೆ ಬೃಹತ್ ಆರೋಗ್ಯ ಶಿಬಿರ ಹಾಗೂ ಉಚಿತ ಔಷದಿ ವಿತರಣಾ ಕಾರ್ಯಕ್ರಮ ಮಲ್ಪೆ ಬೀಚಿನ ಮಹಾತ್ಮಾಗಾಂಧಿ ಪ್ರತಿಮೆಯ ಬಳಿ ಆಯೋಜಿಸಲಾಗಿದೆ.

Health-Checkup

ಶಿಬಿರದಲ್ಲಿ ಮಧುಮೇಹ, ಎಲುಬು, ಹಾಗೂ ಕೀಲು ತಜ್ಞರು, ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು ಹಾಗೂ ಹ್ರದ್ರೋಗ ತಜ್ಞರು ಭಾಗವಹಿಸಲಿದ್ದು, ರಕ್ತದ ಸಕ್ಕರೆ ಅಂಶ ಹಾಗೂ ಇ.ಸಿ.ಜಿ ಪರೀಕ್ಷೆಯನ್ನು ಉಚಿತವಾಗಿ ಮಾಡಲು ಅವಕಾಶವಿದೆ.

ಅಗತ್ಯವುಳ್ಳವರಿಗೆ ವೈದ್ಯರ ಶಿಫಾರಸ್ಸಿನ ಮೇರೆಗೆ ಹೃದಯದ ಸ್ಕಾನಿಂಗ್ (ಇಕೋ) ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುವುದು ಶಿಬಿರದಲ್ಲಿ ಲಭ್ಯವಿರುವ ಔಷಧಿಯನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಕಾರ್ಮಿಕ ವೇದಿಕೆಯ ಪ್ರಕಟಣೆ ತಿಳಿಸಿದೆ

Leave a Reply