ಜೂಜಾಡುತ್ತಿದ್ದ 4 ಪೇದೆಗಳನ್ನು ಅಮಾನತು ಮಾಡಿದ ಎಸ್ಪಿ ಅಣ್ಣಾಮಲೈ

ಜೂಜಾಡುತ್ತಿದ್ದ 4 ಪೇದೆಗಳನ್ನು ಅಮಾನತು ಮಾಡಿದ ಎಸ್ಪಿ ಅಣ್ಣಾಮಲೈ

ಚಿಕ್ಕಮಗಳೂರು: ಚಿಕ್ಕಮಗಳೂರಿನ ಹಿರೇಮಗಳೂರು ಬಳಿ ಇರುವ ಬ್ಲೂ ಸ್ಟಾರ್ ಕ್ಲಬ್ ಮೇಲೆ ಎಸ್ಪಿ ಅಣ್ಣಾಮಲೈ ನೇತೃತ್ವದಲ್ಲಿ ದಾಳಿ ನಡೆಸಿ ಜೂಜಾಡುತ್ತಿದ್ದ ನಾಲ್ಕು ಮಂದಿ ಪೊಲೀಸರು ಸೇರಿದಂತೆ 35 ಜನರನ್ನು ಬಂಧಿಸಲಾಗಿದೆ. ಇಸ್ಪೀಟ್ ಆಡುತ್ತಿದ್ದ ಪೊಲೀಸ್‌ ಸಿಬ್ಬಂದಿಗಳಾದ ಯೋಗೇಶ್‌, ಬಸವರಾಜು, ಪೂರ್ಣೇಶ್, ಮತ್ತು ಲೋಕೇಶ್‌ ಅವರನ್ನು ಅಮಾನತುಗೊಳಿಸಲಾಗಿದೆ.

ಇತರ ಬಂಧಿತರನ್ನು ಬಸವರಾಜು, ನಾಗರಾಜು, ವರದೇಶ್, ಸುರೇಶ್, ಶಬ್ಬೀರ್, ಬಾಲಕೃಷ್ಣ, ಚಂದ್ರಶೇಖರ್, ವೆಂಕಟೇಶ್, ಗೌಸ್, ಮಂಜುನಾಥ್, ರಘು, ಬಸವರಾಜು, ರಮೇಶ್, ಮೋಹನ, ಶಾಂತಕುಮಾರ್, ನಾಗರಾಜು, ಅಬ್ದುಲ್ ರೆಹಮಾನ್, ಧರ್ಮಪಾಲ್, ಶಂಕರ್, ಕೃಪದೇವ, ವಿಶ್ವನಾಥ, ರವಿಕುಮಾರ, ತಿಮ್ಮಾಚಾರಿ, ಎಂ.ಎ.ಉಪೇಂದ್ರ, ಸುಬ್ಬರಾಯ್, ಬಸವರಾಜು, ಬಸವರಾಜು, ಲೋಕೇಶ್, ಯತಿರಾಜ ನಾಯ್ಡು, ಫಯಾಜ್, ಮಂಜುನಾಥ್, ಧರ್ಮೇಗೌಡ, ಮಲ್ಲೇಶ, ಪ್ರಭಾಕರ್ ಎಂದು ಗುರುತಿಸಲಾಗಿದೆ.

ಬಂಧಿತರಿಂದ  1.50 ಲಕ್ಷ ನಗದು, 11 ಕಾರು ಮತ್ತು 6 ಬೈಕ್ ವಶಪಡಿಸಿಕೊಳ್ಳಲಾಗಿದೆ.

Leave a Reply