ಜೂನ್ 1 ರಿಂದ ಜುಲೈ 31 ರವರೆಗೆ ಯಾಂತ್ರೀಕೃತ ಮೀನುಗಾರಿಕೆ ನಿಷೇಧ

Spread the love

ಉಡುಪಿ : ಸರಕಾರದ ಆದೇಶದಂತೆ, ಕರ್ನಾಟಕ ಕರಾವಳಿಯಾದ್ಯಂತ ಜೂನ್ 1 ರಿಂದ ಜುಲೈ 31 ರವರೆಗೆ ಯಾಂತ್ರೀಕೃತ ಮೀನುಗಾರಿಕೆ ನಿಷೇಧಿಸಿ ಆದೇಶಿಸಲಾಗಿದೆ.
ಈ ಅವಧಿಯಲ್ಲಿ 10 ಹೆಚ್‍ಪಿ ವರೆಗಿನ ಇಂಜಿನ್ ಅಳವಡಿಸಿ ನಾಡದೋಣಿಗಳ ಮೀನುಗಾರಿಕೆಗೆ ಅವಕಾಶವಿರುತ್ತದೆ. ಈ ನಿಷೇಧಿತ ಅವಧಿಯಲ್ಲಿ ಹೊರರಾಜ್ಯಗಳ ಬೋಟುಗಳು ಕರ್ನಾಟಕದ ಕರಾವಳಿಯನ್ನು ಪ್ರವೇಶಿಸಬಾರದು ಹಾಗೂ ಮೀನುಗಾರಿಕೆ ಮಾಡಬಾರದೆಂದು ತಿಳಿಸಿದೆ. ಹೊರರಾಜ್ಯದ ಬೋಟುಗಳು ಕರ್ನಾಟಕ ಕರಾವಳಿ ಪ್ರದೇಶದಲ್ಲಿ ಕಂಡುಬಂದಲ್ಲಿ ಕಾನೂನು ರೀತಿಯ ಕಠಿಣ ಕ್ರಮವನ್ನು ಜರುಗಿಸಲಾಗುವುದೆಂದು ಎಚ್ಚರಿಸಲಾಗಿದೆ.
ಹೊರರಾಜ್ಯದ ಬೋಟುಗಳು ಕರ್ನಾಟಕ ಕರಾವಳಿ ಪ್ರದೇಶದಲ್ಲಿ ಕಂಡುಬಂದಲ್ಲಿ ಸಾರ್ವಜನಿಕರು/ ಮೀನುಗಾರರು ಟೋಲ್ ಫ್ರೀ ಸಂಖ್ಯೆ 1093 ಗೆ ಕರೆಮಾಡಿ ಬೋಟ್ ಹೆಸರು, ನೊಂದಣಿ ಸಂಖ್ಯೆಯ ಮಾಹಿತಿ ನೀಡಲು ಕೋರಿದೆ. ಹಾಗೂ 0824-2425680, 0820-2537801, 0820-2522487 ಮತ್ತು 0820-2522781 ಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ಮೀನುಗಾರಿಕಾ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Spread the love