ಜೆ ಡಿ ಎಸ್ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಮಿಥುನ್ ರೈ ಪರ ಪ್ರಚಾರ

Spread the love

ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಮಿಥುನ್ ರೈ ಪರ ಪ್ರಚಾರ

ಮಂಗಳೂರು : ದಕ್ಷಿಣ ಕನ್ನಡ ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ವಿವಿಧ ವಾರ್ಡ್ಗಳಲ್ಲಿ ಸಮ್ಮಿಶ್ರ ಸರಕಾರದ ದಕ್ಷಿಣ ಕನ್ನಡ ಲೋಕ ಸಭಾ ಅಭ್ಯರ್ಥಿ ಮಿಥುನ್ ರೈ ಪರ ಮನೆ ಮನೆಗಳಿಗೆ ತೆರಳಿ ಬಿರುಸಿನ ಪ್ರಚಾರ ಕಾರ್ಯಕ್ರಮ ನಡೆಯಿತು.

ಈ ಪ್ರಚಾರ ಕಾರ್ಯಕ್ರಮದಲ್ಲಿ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಸುಮತಿ ಹೆಗ್ಡೆ ಪಕ್ಷದ ಮುಖಂಡರಾದ ಸುಶೀಲ್ ನೊರೊನ್ಹ, ರತ್ನಾಕರ್ ಸುವರ್ಣ ಎನ್.ಪಿ ಪುಷ್ಟರಾಜನ್ ಶಿವಾನಂದ, ವೀಣಾ ಶೆಟ್ಟಿ, ಭಾರತಿ ಪುಷ್ಪರಾಜನ್, ಶಾಲಿನಿ ರೈ ಕವಿತಾ, ವಾಣಿ ಹರ್ಷಿತ್ ಮುಂತಾದವರು ಭಾಗವಹಿಸಿದರು.


Spread the love