ಝಾಕೀರ್ ನಾಯ್ಕ್ ವಿರುದ್ದ ನಿರಾಧಾರ ಆರೋಪ ಹೊರಿಸುವುದರ ವಿರುದ್ದ ಪ್ರತಿಭಟನೆ

ಝಾಕೀರ್ ನಾಯ್ಕ್ ವಿರುದ್ದ ನಿರಾಧಾರ ಆರೋಪ ಹೊರಿಸುವುದರ ವಿರುದ್ದ ಪ್ರತಿಭಟನೆ

ಮಂಗಳೂರು: ಅಂತರಾಷ್ಟ್ರೀಯ ಮುಸ್ಲಿಂ ವಿದ್ಥಾಂಸ ಡಾ ಝಾಕೀರ್ ನಾಯ್ಕ್ ವಿರುದ್ದ ನಿರಾಧಾರ ಆರೋಪ ಹೊರಿಸುವುದರ ವಿರುದ್ದ ಶುಕ್ರವಾರ ವಿವಿಧ ಮುಸ್ಲಿಂ ಸಂಘಟನೆಗಳು ಜಿಲ್ಲಾಧಿಕಾರಿ ಕಛೇರಿಯ ಎದುರು ಪ್ರತಿಭಟನೆ ನಡೆಸಿದರು.

image008Drzakir-naik-muslim-forum-20160715-008 image009Drzakir-naik-muslim-forum-20160715-009 image007Drzakir-naik-muslim-forum-20160715-007 image006Drzakir-naik-muslim-forum-20160715-006 image005Drzakir-naik-muslim-forum-20160715-005 image004Drzakir-naik-muslim-forum-20160715-004 image001Drzakir-naik-muslim-forum-20160715-001 image002Drzakir-naik-muslim-forum-20160715-002 image003Drzakir-naik-muslim-forum-20160715-003

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪಿಎಫ್ ಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಅವರು, ಇಂದು ದೇಶದಲ್ಲಿ ಸೌಹರ್ದತೆ ಬಯಸದ ಕೆಲವೊಂದು ಹಿತಾಸಕ್ತಿಗಳು ಜನರ ಮನಸ್ಸುಗಳನ್ನು ಒಡೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಇದರ ಮೂಲಕ ದೇಶದ ಸಂವಿಧಾನವನ್ನು ಬುಡಮೇಲು ಮಾಡುವ ಕೆಲಸಕ್ಕೆ ಮುಂದಾಗಿದ್ದು, ದೇಶ ಅಪಾಯದ ದಿಕ್ಕಿನಡೆಗೆ ಸಾಗುತ್ತಿದೆ. ಜನರ ಹೃದಯಗಳನ್ನು ಪರಸ್ಪರ ಜೋಡಿಸಬೇಕಾದ ಮಾಧ್ಯಮಗಳು ಇಂದ ಜನರ ಹೃದಯವನ್ನು ಒಡೆಯುವ ಕೆಲಸವನ್ನು ಮಾಡುತ್ತಿವೆ. ಇಂತಹ ಪ್ಯಾಸಿಸ್ಟ್ ಶಕ್ತಿಗಳ ವಿರುದ್ದ ದೇಶದ ನಾಗರಿಕರು ಒಂದಾಗಬೇಕಾಗಿದೆ ಎಂದರು.

ಡಾ ಝಾಕೀರ್ ನಾಯ್ಕ್ ಒರ್ವ ಮುಸ್ಲಿಂ ಎಂಬ ಕಾರಣಕ್ಕೆ ಅವರನ್ನು ಇಂದು ಗುರಿಯಾಗಿಸಿದ್ದು, ಅವರು ಜನರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸುತ್ತದ್ದಾರೆ ವಿನಃ ಇನ್ನೇನು ಮಾಡುತ್ತಿಲ್ಲ. ಸತ್ಯದ ಬಗ್ಗೆ ಯಾರು ಇಂದು ಮಾತನಾಡುತ್ತಾರೋ ಅಂತಹವರ ಬಾಯಿ ಮುಚ್ಚಿಸುವ ಪ್ರಯತ್ನ ನಿರಂತರ ನಡೆಯುತ್ತಿದೆ. ಮಾನವ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗ, ದೆಹಲಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಜಿ ಎನ್ ಸಾಯಿಬಾಬಾ, ಸೋನಿ ಸೋರಿ, ತಿಸ್ತಾ ಸೆಟಲ್ವಾಡ್ ಹೀಗೆ ಇನ್ನೂ ಅನೇಕರು ಇಂತಹ ಶಕ್ತಿಗಳ ಕುಕೃತ್ಯಕ್ಕೆ ಬಲಿಯಾಗಿದ್ದಾರೆ. ಪ್ಯಾಸಿಸ್ಟ್ ವಾದವನ್ನು ವಿರೋಧಿಸಿದ ಗೋವಿಂದ ಪನ್ಸಾರೆ, ಕಲ್ಬರ್ಗಿಯವರನ್ನು ಕೊಲೆ ಮಾಡಲಾಯಿತು. ಡಾ ಝಾಕೀರ್ ನಾಯಕ್ ಅವರ ಭಾಷಣದ ವೀಡಿಯೊ ವೀಕ್ಷಿಸಿದ್ದರಿಂದ ಯುವಕರು ಭಯೋತ್ಪಾದನ ಕ್ರತ್ಯಕ್ಕೆ ಬಲಿಯಾಗುತ್ತಾರೆ ಎನ್ನುವ ಮಾಧ್ಯಮಗಳು, ಇಂದು ಹಲವಾರು ಲೋಕಸಭಾ ಸದಸ್ಯರು ಜೈಲಿನಲ್ಲಿ ಇರಬೇಕಾಗಿತ್ತಲ್ಲವೇ ಎಂದು ಪ್ರಶ್ನಿಸಿದರು. ಲೋಕಸಭೆಯಲ್ಲಿ ಹಲವಾರು ಮುಸ್ಲಿಂ ಪ್ರತಿನಿಧಿಗಳು ಕೂಡ ಇದ್ದು, ಝಾಕೀರ್ ನಾಯ್ಕ್ ಅವರ ಭಾಷಣದ ನಿಜವಾದ ವೀಡಿಯೊ ಪ್ರದರ್ಶಿಸುವ ಬದಲು ಅವರ ಭಾಷಣವನ್ನು ತಿರುಚಿ ತಯಾರಿಸಿದ ವೀಡಿಯೊವನ್ನು ಪ್ರದರ್ಶಿಲಾಗಿದೆ ಎಂದು ಆರೋಪಿಸಿದರು.

image012muslim-organisation-zakir-naik-protest-20160715-012 image011muslim-organisation-zakir-naik-protest-20160715-011 image010muslim-organisation-zakir-naik-protest-20160715-010 image009muslim-organisation-zakir-naik-protest-20160715-009 image006muslim-organisation-zakir-naik-protest-20160715-006 image007muslim-organisation-zakir-naik-protest-20160715-007 image008muslim-organisation-zakir-naik-protest-20160715-008 image003muslim-organisation-zakir-naik-protest-20160715-003 image004muslim-organisation-zakir-naik-protest-20160715-004 image005muslim-organisation-zakir-naik-protest-20160715-005 image002muslim-organisation-zakir-naik-protest-20160715-002 image001muslim-organisation-zakir-naik-protest-20160715-001

ಸ್ವಾಧ್ವಿ ಪ್ರಾಚಿ ಡಾ ಝಾಕೀರ್ ನಾ್ಯ್ಕ ಅವರ ತಲೆ ಕಡಿದವರಿಗೆ 50 ಲಕ್ಷ ನೀಡುವುದಾಗಿ ಘೋಷಣೆ ಮಾಡಿದಾಗ ನಮ್ಮ ಮಾಧ್ಯಮಗಳಿಗೆ ಅದು ವಿಷಯವಾಗಲಿಲ್ಲ. ಅಂದು ಯಾಕೆ ಇದನ್ನು ದೊಡ್ಡ ಸುದ್ದಿ ಮಾಡಲಿಲ್ಲ ಎಂದು ಪ್ರಶ್ನಿಸಿದರು. ಎಲ್ಲಿಯೂ ಬಾಂಬ್ ಸ್ಪೋಟಗೊಂಡರೂ ಕೂಡ ಮುಸ್ಲಿಂರನ್ನು ಗುರಿಯಾಗಿಸಲಾಗುತ್ತದೆ. ಐಎಸ್ಐಎಸ್ ಅಕ್ರಮಗಳಿಗೆ ಮುಸ್ಲಿಂರು ಕಾರಣರಲ್ಲ ರಷ್ಯಾದಲ್ಲಿ ಬಾಂಬ್ ಸ್ಪೋಟ ನಡೆದರೆ ಭಾರತದ ಮಾಧ್ಯಮಗಳಿಗೆ ಚರ್ಚೆಯ ವಿಷಯ ಮುಸ್ಲಿಂರಾಗುತ್ತಾರೆ. ಇಸ್ಲಾಂ ಎಂದು ಭಯೋತ್ಪಾಧನೆಗೆ ಬೆಂಬಲ ನೀಡುವುದಿಲ್ಲ. ಇಂದು ಆರ್ ಎಸ್ ಎಸ್ ಹೆದರಿ ಇಂತಹ ಸುಳ್ಳೂ ಸುದ್ದಿ ಹಬ್ಬಿಸುವ ಕೆಲಸ ಮಾಡುತ್ತಿದೆ ಆದರೆ ಮುಸ್ಲಿಂ ಸಮುದಾಯ ಎಂದಿಗೂ ಕೂಡ ದೇಶವನ್ನು ಒಡೆಯಲು ಅವಕಾಶವನ್ನು ನೀಡುವುದಿಲ್ಲ. ದೇಶ ಒಡೆಯುವ ಕೆಲಸ ಮಾಡುತ್ತಿರುವಂತಹ ಸುದ್ದಿ ವಾಹಿನಿಗಳನ್ನು ಸರಕಾರ ನಿಷೇಧಿಸುವ ಕೆಲಸ ಮಾಡಬೇಕು ಎಂದರು.

Leave a Reply

Please enter your comment!
Please enter your name here