ಟೆಲಿಫೋನ್ ಬಿಲ್ಲು ಕಟ್ಟಲು ಹೋದ ವ್ಯಕ್ತಿ ನಾಪತ್ತೆ

ಬ್ರಹ್ಮಾವರ: ಟೆಲಿಫೋನ್ ಬಿಲ್ಲು ಕಟ್ಟಿಬರುತ್ತೇನೆಂದು ಹೇಳಿ ಹೋದ ವ್ಯಕ್ತಿಯೋರ್ವರು ಮರಳಿ ಮನೆಗೆ ಬಾರದೆ ನಾಪತ್ತೆಯಾದ ಕುರಿತು ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

28

ಮೇ 26ರಂದು ಮಧ್ಯಾಹ್ನ 1.30 ಗಂಟೆಗೆ ಉಡುಪಿ ತಾಲೂಕು ಬೈಕಾಡಿ ಗ್ರಾಮದ ಭಧ್ರಗಿರಿಯ ಲೀನಾ ಡಿಸಿಲ್ವಾರ ಪತಿ ಜೋನ್ ಡಿ’ಸಿಲ್ವಾ (72) ಎಂಬವವರು ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಪಕ್ಕದ ಮನೆಯವರಲ್ಲಿ ಬ್ರಹ್ಮಾವರಕ್ಕೆ ಹೋಗಿ ಟೆಲಿಫೋನ್ ಬಿಲ್ಲು ಕಟ್ಟಿಬರುತ್ತೇನೆಂದು ಹೇಳಿ ಹೋದವರು ಮನೆಗೆ ಬಾರದೆ ಕಾಣೆಯಾಗಿರುತ್ತಾರೆ
ಈ ಕುರಿತು ಅವರ ಪತ್ನಿ ಲೀನಾ ಡಿ’ಸಿಲ್ವಾ ಅವರು ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೋಲಿಸರು ಹುಡುಕಾಟ ನಡೆಸುತ್ತಿದ್ದಾರೆ.

1 Comment

Leave a Reply