ಟೋಲ್ ಗೇಟ್ ಸಿಬಂದಿ ಹಾಗೂ ಬಸ್ಸಿನವರ ಜೊತೆ ಹೊಡೆದಾಟ ಪ್ರಕರಣ ದಾಖಲು

ಮಂಗಳೂರು: ಎನ್ ಐಟಿಕೆ ಟೋಲ್ ಗೇಟ್ ನ ಸಿಬಂದಿ ಹಾಗೂ ಬಸ್ಸಿನ ಸಿಬಂದಿ ಜೊತೆ ಪರಸ್ಪರ ಹೊಡೆದಾಟ ನಡೆಸಿ ಎರಡು ಪ್ರತ್ಯೇಕ ಪ್ರಕರಣಗಳು ಮಂಗಳೂರು ಉತ್ತರ ಠಾಣೆಯಲ್ಲಿ ದಾಖಲಾಗಿವೆ.
ಮೊದಲ ಪ್ರಕರಣದಲ್ಲಿ ಎಪ್ರಿಲ್ 1 ರಂದು ಬೆಳಿಗ್ಗೆ ಪಾಂಡುರಂಗ ರವರು ಎನ್ ಐಟಿಕೆ ಟೋಲ್ ಗೇಟ್ ಬಳಿ ಕರ್ತವ್ಯದಲ್ಲಿದ್ದ ಸಮಯ ಬೆಳಿಗ್ಗೆ 08-45 ಗಂಟೆಗೆ ಉಡುಪಿ ಕಡೆಯಿಂದ ಬಂದ ಮರೋಳಿ ಬಸ್ಸಿನವರಲ್ಲಿ ಟೋಲ್ ಸಿಬ್ಬಂದಿಯವರು ಪಾಸ್ ಕೇಳಿದಾಗ ಸದ್ರಿ ಬಸ್ಸಿನವರು ಪಾಸ್ ನಿಮ್ಮ ಆಫೀಸಿನಲ್ಲಿಯೇ ಇದೆ ಎಂದು ಹೇಳಿದ್ದು ತೋರಿಸುವಂತೆ ಪಿರ್ಯಾದಿದಾರರು ಕರೆದುಕೊಂಡು ಹೋದ ಸಮಯ ಬಸ್ಸು ಕಂಡಕ್ಟರ್ ಪಾಸ್ ನಿಮ್ಮ ಬಳಿಯೇ ಇದ್ದರೆ ನಿನಗೆ ಹೊಡೆಯುತ್ತೇನೆ, ಅವಾಚ್ಯವಾಗಿ ಬೈದು ಪಿರ್ಯಾದಿದಾರರನ್ನು ತಡೆದು ಕೈಯಲ್ಲಿ ಬಲವಾಗಿ ಎಡ ಕಣ್ಣಿನ ಬಳಿ ಹೊಡೆದಿದ್ದು. ಆಗ ಅಲ್ಲಿಗೆ ಟೋಲ್ ಗೇಟ್ ಸಿಬ್ಬಂದಿಯವರು ರಕ್ಷಣೆಗೆ ಬಂದಾಗ ಅವರಿಗೂ ಕೂಡ ಸದ್ರಿ ಕಂಡಕ್ಟರ್ ಹಾಗೂ ಇತರರು ಹಲ್ಲೆ ನಡೆಸಿ, ಬಸ್ಸಿನಡಿಗೆ ಹಾಕಿ ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ ಎಂದು ಪ್ರಕರಣವನ್ನು ದಾಖಲಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಪ್ರವೀಣ್ ಮಂಗಳೂರು- ಕಾರ್ಕಳ ರೂಟ್ ನ ಮರೋಳಿ ಬಸ್ಸಿನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡಿಕೊಂಡಿದ್ದು ಎನ್ ಐಟಿಕೆ ಬಳಿ ಟೋಲ್ ನಲ್ಲಿ ಶುಲ್ಕ ಪಾವತಿಸುವರೇ ಮಾಸಿಕ ಪಾಸ್ ಮಾಡಿಕೊಂಡಿದ್ದು ಸದ್ರಿ ಪಾಸ್ ದಿನಾಂಕ: 10-04-2016 ರವರೆಗೆ ಊರ್ಜಿತದಲ್ಲಿದ್ದು ದಿನಾಂಕ: 30-03-2016 ರಂದು ಟೋಲ್ ಸಿಬ್ಬಂದಿಯವರು ಸದ್ರಿ ಪಾಸ್ ನ್ನು ಬದಲಿ ಕಂಡಕ್ಟರ್ ನಿಂದ ಪರಿಶೀಲಿಸುವ ಸಲುವಾಗಿ ಪಡೆದುಕೊಂಡವರು ಹಿಂತಿರುಗಿಸದೇ ಇದ್ದು ದಿನಾಂಕ: 01-04-2016 ರಂದು ಪಿರ್ಯಾದಿದಾರರು ಸದ್ರಿ ಬಸ್ಸಿನಲ್ಲಿ ಕಾರ್ಕಳ ದಿಂದ ಮಂಗಳೂರು ಕಡೆಗೆ ಹೊರಟು ಎನ್ ಐಟಿಕೆ ಟೋಲ್ ಗೇಟ್ ಬಳಿ ತಲುಪಿದಾಗ ಟೋಲ್ ಗೇಟ್ ಸಿಬ್ಬಂದಿಯವರು ಪಾಸ್ ಕೇಳಿದ್ದು ಪಿರ್ಯಾದಿದಾರರು ನಿಮ್ಮ ಬಳಿಯೇ ಪಾಸ್ ಇದೆ ಎಂದು ತಿಳಿಸಿದಾಗ ಟೋಲ್ ಗೇಟ್ ಸಿಬ್ಬಂದಿಯವರು ಎಲ್ಲಿದೆ ಪಾಸ್ ? ತೋರಿಸು ಎಂದು ಎಳೆದುಕೊಂಡು ಹೋಗಿ ಅಲ್ಲಿದ್ದ 10-13 ಜನ ಸಿಬ್ಬಂದಿಯವರು ಏಕಾಏಕಿ ಕೈಯಿಂದ, ಕಾಲಿನಿಂದ ತುಳಿದು, ಸೊಂಟದ ಬೆಲ್ಟ್ ನಿಂದ ಹಲ್ಲೆ ನಡೆಸಿ ಪಿರ್ಯಾದಿದಾರರ ಶರ್ಟ್ ನ್ನು ಹರಿದು ಹಾಕಿ ಕಿಸೆಯಲ್ಲಿದ್ದ ರೂ.5800/- ನಗದನ್ನು ಯಾರೋ ಕಸಿದುಕೊಂಡಿರುತ್ತಾರೆ ಎಂದು ಪ್ರಕರಣ ದಾಖಲಿಸಿದ್ದಾರೆ .
ಪೋಲಿಸರು ಎರಡು ಕಡೆಯವರ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದಾರೆ.

Leave a Reply