ಡಾ| ಅಶೋಕ್ ಪೈಗಳ ನಿಧನಕ್ಕೆ ಹೆಗ್ಗಡೆಯವರ ಸಂತಾಪ

ಡಾ| ಅಶೋಕ್ ಪೈಗಳ ನಿಧನಕ್ಕೆ ಹೆಗ್ಗಡೆಯವರ ಸಂತಾಪ

ಧರ್ಮಸ್ಥಳ : ಸ್ಕಾಟ್‍ಲೆಂಡ್‍ನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ ರಾಜ್ಯದ ಖ್ಯಾತ ಮನೋವೈದ್ಯ ಶಿವಮೊಗ್ಗ ಮಾನಸ ಮಾನಸಿಕ ಆಸ್ಪತ್ರೆಯ ಡಾ| ಅಶೋಕ್ ಪೈಗಳ ಅಕಾಲಿಕ ನಿಧನಕ್ಕೆ ಧರ್ಮಸ್ಥಳ ದಧರ್ಮಾಧಿಕಾರಿಗಳಾದ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
“ಡಾ| ಅಶೋಕ್ ಪೈಗಳು ಮಾನಸಿಕ ತಜ್ಞರು, ವಿಜ್ಞಾನಿಗಳು ಮತ್ತು ಸಾಮಾಜಿಕ ಸಮಸ್ಯೆಗಳ ಕುರಿತಂತೆ ಅಧ್ಯಯನಶೀಲರೂ ಆಗಿದ್ದರು. ಎಷ್ಟೋ ಸಂದರ್ಭ ಅವರ ಮತ್ತು ನನ್ನ ನಡುವೆ ಬಿಚ್ಚು ಮನಸ್ಸಿನ ಮಾತುಕತೆಯಾಗಿತ್ತು. ಅನೇಕ ಸಂದರ್ಭಗಳಲ್ಲಿ ಕ್ಷೇತ್ರಕ್ಕೆ ಬಂದ ಮನೋರೋಗಿಗಳನ್ನು ಶಿವಮೊಗ್ಗದಲ್ಲಿರುವ ಅವರ ಮಾನಸ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿ ಕೊಡಲಾಗುತ್ತಿತ್ತು.
ಅಂತೆಯೇ ಭ್ರಮೆಗೊಳಗಾದ ವ್ಯಕ್ತಿಗಳನ್ನು ಡಾ| ಅಶೋಕ್ ಪೈಯವರು ನನ್ನ ಬಳಿಗೆ ಚಿಕಿತ್ಸೆಗಾಗಿ ಕಳುಹಿಸಿದ್ದೂ ಇದೆ. ಪರಸ್ಪರ ಭೇಟಿಯಾದಾಗ ಸಾಮಾನ್ಯ ಜನರ ಬಗೆ ್ಗಅವರಿಗಿದ್ದ ಕಳಕಳಿ ನನ್ನ ಮನಸ್ಸನ್ನು ತಟ್ಟಿದೆ. ಅವರು ನಮ್ಮ ಜನಜಾಗೃತಿ ವೇದಿಕೆಗೆ ಸಲಹೆಗಾರರಾಗಿ ಬಹಳಷ್ಟು ಪ್ರೇರಣೆ ನೀಡಿದ್ದಾರೆ. ಒಬ್ಬ ಶ್ರೇಷ್ಠ ಮನೋವಿಜ್ಞಾನಿಯನ್ನು ನಮ್ಮ ರಾಷ್ಟ್ರ ಕಳೆದುಕೊಂಡಿದೆ” ಎಂದು ಹೆಗ್ಗಡೆಯವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

Leave a Reply

Please enter your comment!
Please enter your name here