ಡಾ.ಎಂ.ಎಂ. ಕಲಬುರ್ಗಿ ಪಾರ್ಥಿವ ಶರೀರದ ಅಂತಿಮಯಾತ್ರೆ ಆರಂಭ

ಧಾರವಾಡ: ದುಷ್ಕರ್ವಿುಗಳ ಗುಂಡಿಗೆ ಬಲಿಯಾದ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಅವರ ಅಂತಿಮ ಯಾತ್ರೆ ಆರಂಭವಾಗಿದೆ. ಧಾರವಾಡದ ಕೆಸಿಡಿ ಕಾಲೇಜು ಆವರಣದಿಂದ ಹೊರಟಿರುವ ಯಾತ್ರೆ ಕರ್ನಾಟಕ ವಿಶ್ವವಿದ್ಯಾಲಯದ ಆವರಣಕ್ಕೆ ಬರಲಿದೆ. ಕಲಬುರ್ಗಿ ಅವರ ಕುಟುಂಬ ವರ್ಗದವರಲ್ಲದೆ, ಸಹಸ್ರಾರು ಅಭಿಮಾನಿಗಳು ಶವಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಮಧ್ಯಾಹ್ನ 3 ಗಂಟೆಯ ವೇಳೆಗೆ ಕಲಬುರ್ಗಿ ಅವರ ಪಾರ್ಥಿವ ಶರೀರ ಕರ್ನಾಟಕ ವಿಶ್ವವಿದ್ಯಾಲಯದ ಆವರಣ ತಲುಪುವ ಸಾಧ್ಯತೆ ಇದೆ.

mm-kalaburgi

ಆನಂತರದಲ್ಲಿ ಸಂಪ್ರದಾಯಬದ್ಧವಾಗಿ ಅವರ ಅಂತ್ಯ ಸಂಸ್ಕಾರ ನೆರವೇರಲಿದೆ. ಇದಕ್ಕೂ ಮುನ್ನ ಸೋಮವಾರ ಬೆಂಗಳೂರಿನಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ಡಾ. ಕಲಬುರ್ಗಿ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸುವುದಾಗಿ ಘೊಷಿಸಿದರು.

ಇನ್ನೊಂದೆಡೆ ಸಿಎಂ ಸಿದ್ದರಾಮಯ್ಯ ಅವರ ನಿರ್ಧಾರವನ್ನು ಸ್ವಾಗತಿಸಿರುವ ಬಿಜೆಪಿ, ಸಿಐಡಿ ತನಿಖೆ ತ್ವರಿತಗತಿಯಲ್ಲಿ ನಡೆದು, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತಾಗಲಿ ಎಂದು ಹೇಳಿದೆ.

ಕಲಬುರ್ಗಿ ಅವರ ಪಾರ್ಥಿವ ಶರೀರದ ಅಂತಿಮಯಾತ್ರೆ ಆರಂಭವಾಗುವುದಕ್ಕೂ ಮುನ್ನ ಕೆಸಿಡಿ ಕಾಲೇಜು ಆವರಣಕ್ಕೆ ತೆರಳಿದ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅಗಲಿದ ಸಂಶೋಧಕರಿಗೆ ಅಂತಿಮ ನಮನ ಸಲ್ಲಿಸಿದರು. ಮಾಜಿ ಸಚಿವ ಗೋವಿಂದ ಕಾರಜೋಳ ಜತೆಗಿದ್ದರು

Leave a Reply

Please enter your comment!
Please enter your name here