ತಂದೆ ಪ್ರಮೋದ್ ಪರ ಪುತ್ರಿ ಪ್ರತ್ಯಕ್ಷಾ ಮಧ್ವರಾಜ್ ಅವರಿಂದ ಮತ ಯಾಚನೆ

2300

ತಂದೆ ಪ್ರಮೋದ್ ಪರ ಪುತ್ರಿ ಪ್ರತ್ಯಕ್ಷಾ ಮಧ್ವರಾಜ್ ಅವರಿಂದ ಮತ ಯಾಚನೆ

ಉಡುಪಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು ಶುಕ್ರವಾರ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪರ ಪ್ರಥಮ ಬಾರಿಗೆ ಮಗಳು ಪ್ರತ್ಯಕ್ಷಾ ಮಧ್ವರಾಜ್ ಹೆಬ್ರಿ, ಮಣಿಪಾಲ ಪರಿಸರದಲ್ಲಿ ತಂದೆಯ ಪರ ಬಿರುಸಿನ ಪ್ರಚಾರ ನಡೆಸಿದರು.

ಬೆಳಿಗ್ಗಿನಿಂದಲೇ ಹೆಬ್ರಿಯ ಲಕ್ಷ್ಮೀ ಕ್ಯಾಶ್ಯೂ ಫ್ಯಾಕ್ಟರಿ, ಅಕ್ಷಯ ಕ್ಯಾಶ್ಯೂ ಫ್ಯಾಕ್ಟರಿ, ನಿಖಿಲ್ ಕ್ಯಾಶ್ಯೂ ಫ್ಯಾಕ್ಟರಿ, ಸುಪ್ರೀತಾ ಕ್ಯಾಶ್ಯೂ ಫ್ಯಾಕ್ಟರಿ, ಗಣೇಶ್ ಕ್ಯಾಶ್ಯೂ ಫ್ಯಾಕ್ಟರಿ, ಪುತ್ತೂರಿನ ಬಾಳಿಗ ಫಿಶ್ ನೆಟ್, ಮಣಿಪಾಲ ಟಿ ಎಮ್ ಎ ಪೈ ಪಾಲಿಟೆಕ್ನಿಕ್, ಮಣಿಪಾಲ ನಂದಿನ ಹಾಲಿನ ಡೈರಿ ಪ್ರದೇಶಗಳಿಗೆ ತೆರಳಿದ ಪ್ರತ್ಯಕ್ಷಾ ಮಧ್ವರಾಜ್ ತಂದೆಯನ್ನು ಈ ಬಾರಿ ಬೆಂಬಲಿಸುವಂತೆ ಕಾರ್ಮಿಕರಲ್ಲಿ ಮನವಿ ಮಾಡಿದರು.

ಈ ವೇಳೆ ಕಾಂಗ್ರೆಸ್ ನಾಯಕರಾದ ವೆರೋನಿಕಾ ಕರ್ನೆಲಿಯೊ, ಜ್ಯೋತಿ ಹೆಬ್ಬಾರ್, ರೋಶನಿ ಒಲಿವೇರಾ, ಡಾ|ಸುನೀತಾ ಶೆಟ್ಟಿ, ರಮೇಶ್ ಕಾಂಚನ್ ಹಾಗೂ ಇತರರು ಉಪಸ್ಥಿತರಿದ್ದರು.