ತಮ್ಮನಿಗೆ ಹಲ್ಲೆ ಮಾಡಿದ ಆರೋಪಿ ಅಕ್ಕಳಿಗೆ ಶಿಕ್ಷೆ

ಉಡುಪಿ: ತಮ್ಮನಿಗೆ ಹಲ್ಲೆ ಮಾಡಿದ ಆರೋಪಿ ಅಕ್ಕನಿಗೆ ಶಿಕ್ಷೆ ವಿಧಿಸಿ ಉಡುಪಿ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯ ವಿಧಿಸಿದೆ

ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಬನ್ನಂಜೆ ಎಂಬಲ್ಲಿ ದಿ:29-7-12 ರಂದು ರಾತ್ರಿ 7-40 ಗಂಟೆಗೆ ಆರೋಪಿ ಶಿರಿಬೀಡು ನಿವಾಸಿ ಆಶಾ ರಮೇಶ ಎಂಬವರು ತನ್ನ ತಮ್ಮ ಬನ್ನಂಜೆ ಪುರುಷೋತ್ತಮ ಎಂಬವರ ಜೊತೆಗೆ ಮನೆಯಲ್ಲಿ ಮಾತನಾಡುತ್ತಿರುವಾಗ ಒಮ್ಮಲೇ ಕೋಪಗೊಂಡು ತನ್ನ ಕೈಯಲ್ಲದ್ದ ಕೊಡೆಯಿಂದ ಪುರುಷೋತ್ತಮನ ಎಡ ಕಣ್ಣಿನ ಕೆಳ ಭಾಗಕ್ಕೆ ಬಲವಾಗಿ ಹೊಡೆದು ಗಾಯವುಂಟು ಮಾಡಿದ ಬಗ್ಗೆ ಆರೋಪಿಯ ವಿರುದ್ಧ ಭಾ.ದಂ.ಸಂ. 326 ರಂತೆ ಪ್ರಕರಣ ದಾಖಲಿಸಿ ಮಧು ಟಿ.ಎಸ್. ದೋóಷಾರೋಪಣಾ ಪತ್ರ ಸಲ್ಲಸಿರುತ್ತಾರೆ.
ಈ ಪ್ರಕರಣವು ಮಾನ್ಯ ಉಡುಪಿ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಪ್ರಕರಣದಲ್ಲಿ ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿ ಕೃತ್ಯ ನಡೆಸಿದ್ದು ಸಾಬೀತಾಗಿದೆ ಎಂದು ತೀರ್ಮಾನಿಸಿ ಭಾ.ದಂ.ಸಂ. 324 ರಂತೆ ನ್ಯಾಯಾಧೀಶೆ ಶ್ರೀಮತಿ ವಿ.ಎನ್. ಮಿಲನ ರವರು ಆರೋಪಿಗೆ ರೂ5,000/- ದಂಡ ವಿಧಿಸಿದ್ದಲ್ಲದೆ ಆರೋಪಿಯು 63 ವರ್ಷವಾದದ್ದನ್ನು ಪರಿಗಣಿಸಿ ಅಪರಾದಿ ಪರಿವೀಕ್ಷಣಾ ಕಾಯ್ದೆ ಕಲಂ 4 ರಂತೆ ಒಂದು ವರ್ಷದ ಅವಧಿಯಲ್ಲಿ ಸನ್ನಡತೆಯಲ್ಲಿ ಇರುವಂತೆ ಆದೇಶಿಸಿ ದಿನಾಂಕ: 13-5-2016 ರಂದು ತೀರ್ಪು ನೀಡಿರುತ್ತಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಮಮ್ತಾಜ್ ರವರು ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.

Leave a Reply