ತಾಯಿ ಮಗನಿಗೆ ಪೋಲಿಸ್ ಕಸ್ಟಡಿ ವಿಸ್ತರಣೆ, ನಿರಂಜನ ಭಟ್ ಗೆ ನಾಲ್ಕು ದಿನ ಪೋಲಿಸ್ ಕಸ್ಟಡಿ

ತಾಯಿ ಮಗನಿಗೆ ಪೋಲಿಸ್ ಕಸ್ಟಡಿ ವಿಸ್ತರಣೆ, ನಿರಂಜನ ಭಟ್ ಗೆ ನಾಲ್ಕು ದಿನ ಪೋಲಿಸ್ ಕಸ್ಟಡಿ

ಉಡುಪಿ: ಉದ್ಯಮಿ ಭಾಸ್ಕರ್‌ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳಾದ ಪತ್ನಿ ರಾಜೇಶ್ವರಿ ಶೆಟ್ಟಿ ಹಾಗೂ ಮಗ ನವನೀತ್‌ ಶೆಟ್ಟಿಗೆ ಮತ್ತೆ 4 ದಿನಗಳ ಪೊಲೀಸ್‌ ಕಸ್ಟಡಿಯನ್ನು ವಿಸ್ತರಿಸಿ ಉಡುಪಿ ನ್ಯಾಯಾಲಯ ಆದೇಶ ನೀಡಿದೆ.

ಆ.8ರಿಂದ ಪೊಲೀಸ್‌ ಕಸ್ಟಡಿಯಲ್ಲಿರುವ ಈ ಇಬ್ಬರು ಆರೋಪಿಗಳ ಕಸ್ಟಡಿ ಅವಧಿ ಇಂದಿಗೆ ಮುಗಿದ ಹಿನ್ನೆಲೆಯಲ್ಲಿ ಪ್ರಕರಣದ ತನಿಖಾಧಿಕಾರಿಯಾಗಿ ರುವ ಕಾರ್ಕಳ ಎಎಸ್ಪಿ ಸುಮನಾ ನೇತೃತ್ವದಲ್ಲಿ ಆರೋಪಿಗಳನ್ನು ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಸಂಜೆ ಉಡುಪಿ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರ ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.

navaneet-rajeshwari-court-produce-20160812-14 navaneet-rajeshwari-court-produce-20160812-08 navaneet-rajeshwari-court-produce-20160812-07 navaneet-rajeshwari-court-produce-20160812-03 navaneet-rajeshwari-court-produce-20160812

ಮತ್ತೆ ಆರೋಪಿಗಳನ್ನು ಒಂದು ವಾರಗಳ ಪೊಲೀಸ್‌ ಕಸ್ಟಡಿಗೆ ಒಪ್ಪಿಸುವಂತೆ ತನಿಖಾಧಿಕಾರಿಗಳು ನ್ಯಾಯಾಧೀಶ ರಾಜೇಶ್‌ ಕರ್ಣನ್‌ ಗೆ ಮನವಿ ಮಾಡಿದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿ ತಾಯಿ-ಮಗನ ಕಸ್ಟಡಿ ಅವಧಿಯನ್ನು ಆ.16ರವರೆಗೆ ವಿಸ್ತರಿಸಿ ಆದೇಶ ನೀಡಿದರು. ಆದೇಶದ ಪ್ರತಿಗೆ ಆರೋಪಿಗಳ ಸಹಿ ಪಡೆದ ಪೊಲೀಸರು ಕೂಡಲೇ ಅವರನ್ನು ಬಿಗಿ ಭದ್ರತೆಯಲ್ಲಿ ಹೊರ ಕರೆತಂದು ಮತ್ತೆ ಅಜ್ಞಾತ ಸ್ಥಳಕ್ಕೆ ಕರೆದೊಯ್ದರು.

ಆರೋಪಿಗಳಾದ ತಾಯಿ ಮಗ ನನ್ನು ಇಂದು ಪೂರ್ವಾಹ್ನ 11 ಗಂಟೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆಂಬ ಮಾಹಿತಿ ತಿಳಿದ ನೂರಾರು ಸಾರ್ವಜನಿಕರು ಕೋರ್ಟ್‌ ಆವರಣ ದಲ್ಲಿ ಜಮಾಯಿಸಿದ್ದರು. ತಾಯಿ- ಮಗನನ್ನು ನೋಡುವ ಕುತೂಹಲ ದೊಂದಿಗೆ ಮಧ್ಯಾಹ್ನ ಒಂದು ಗಂಟೆ ಯವರೆಗೂ ಕಾದು ಕುಳಿತ ಸಾರ್ವಜನಿ ಕರಿಗೆ ಆರೋಪಿಗಳನ್ನು ಸಂಜೆ ಕರೆದುಕೊಂಡು ಬರುತ್ತಾರೆ ಎಂಬ ಮಾಹಿತಿ ಸಿಕ್ಕಿತು. ಅದರ ನಂತರ ಒಬ್ಬೊಬ್ಬರೇ ಅಲ್ಲಿಂದ ಹೊರಟು ಹೋದರು. ಅಪರಾಹ್ನ 3ಗಂಟೆಗೆ ಕೋರ್ಟ್‌ ಕಲಾಪ ಆರಂಭವಾಗುತ್ತಿದ್ದಂತೆ ಮತ್ತೆ ನೂರಾರು ಸಂಖ್ಯೆಯ ಜನ ಕೋರ್ಟ್‌ ಆವರಣ ಮಾತ್ರವಲ್ಲದೆ ಮುಂಭಾಗ ರಸ್ತೆ, ಬಹುಮಹಡಿ ಕಟ್ಟಡ, ವಸತಿ ಸಮುಚ್ಚಯಗಳಲ್ಲಿ ನಿಂತು ಕುತೂಹಲದಿಂದ ಕಾಯುತ್ತಿದ್ದರು. ಜನರ ನಿಯಂತ್ರಣಕ್ಕಾಗಿ ಪೋಲಿಸರು ಹೆಚ್ಚಿನ ಭಧ್ರತೆಯನ್ನು ಒದಗಿಸಿದ್ದರು.

ನಿರಂಜನ್‌ ಭಟ್‌ಗೆ 4 ದಿನ ಪೊಲೀಸ್‌ ಕಸ್ಟಡಿ
ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಆರೋಪಿ ನಿರಂಜನ್‌ ಭಟ್‌ನನ್ನು ಇಂದು ಸಂಜೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ತಡರಾತ್ರಿ ಉಡುಪಿ ನ್ಯಾಯಾಧೀಶರ ಮುಂದೆ ಬಿಗಿ ಪೊಲೀಸ್‌ ಭದ್ರತೆಯೊಂದಿಗೆ ಹಾಜರು ಪಡಿಸಲಾಯಿತು. ತನಿಖಾಧಿಕಾರಿ ಸುಮನಾ ನೇತೃತ್ವದಲ್ಲಿ ನಿರಂಜನ್‌ ಭಟ್‌ನನ್ನು ನ್ಯಾಯಾಧೀಶ ರಾಜೇಶ್‌ ಕರ್ಣನ್‌ರ ನಿವಾಸದಲ್ಲಿ ಹಾಜರುಪಡಿಸಿ 1 ವಾರಗಳ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿವಂತೆ ಮನವಿ ಮಾಡಲಾಯಿತು. ಆದರೆ ನ್ಯಾಯಾಧೀಶರು ಆ.16ರವರೆಗೆ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದರು. ನಿರಂಜನ್‌ ಭಟ್‌ನನ್ನು ರಾಜೇಶ್ವರಿ ಹಾಗೂ ನವನೀತ್‌ ಜೊತೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಿದಟಛಿತೆಯನ್ನು ಪೊಲೀಸರು ನಡೆಸಿದ್ದರು. ಆದರೆ ಅಂತಿಮ ಕ್ಷಣದಲ್ಲಿ ರಾತ್ರಿ ವೇಳೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.

Leave a Reply