ತುರ್ತು ಪರಿಸ್ಥಿತಿ ಭಾರತದ ಇತಿಹಾಸಕ್ಕೊಂದು ಕಪ್ಪು ಚುಕ್ಕೆ : ಮಟ್ಟಾರ್

ತುರ್ತು ಪರಿಸ್ಥಿತಿ ಭಾರತದ ಇತಿಹಾಸಕ್ಕೊಂದು ಕಪ್ಪು ಚುಕ್ಕೆ : ಮಟ್ಟಾರ್

ಉಡುಪಿ : ವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯಗಳ ಹರಣ, ಪ್ರಜಾತಂತ್ರದ ಕಗ್ಗೊಲೆ ದೇಶದ ಇತಿಹಾಸದಲ್ಲಿನ ಒಂದು ಕರಾಳ ದಿನ. 41 ವರ್ಷಗಳ ಹಿಂದಿನ ಆ ಕರಾಳ ನೆನಪುಗಳು ಸ್ವತಂತ್ರ ಭಾರತದ ಇತಿಹಾಸಕ್ಕೊಂದು ಕಪ್ಪು ಚುಕ್ಕೆ. ಸ್ವಾತಂತ್ರ್ಯ ಹರಣದ ಅಂದಿನ ಹೆಜ್ಜೆಗಳು ಇಂದಿಗೂ ನಮ್ಮೆಲ್ಲರನ್ನೂ ಕಾಡುವ ಭೀತಿಯ ಕಾಲಘಟ್ಟವಾಗಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡಯವರು ಹೇಳಿದ್ದಾರೆ. ಅವರು ಉಡುಪಿ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ನಡೆದ ‘ತುರ್ತು ಪರಿಸ್ಥಿತಿಯ ಕರಾಳ ನೆನಪು’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

bjp-emergency-balack-day

ತುರ್ತು ಪರಿಸ್ಥಿತಿಯ ಅಂದಿನ ದಿನಗಳಲ್ಲಿ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟ ಮಾಡಿ ಜೈಲುವಾಸ ಅನುಭವಿಸಿದ ಹಿರಿಯರಾದ ಬಿ. ರವಿ ಅಮೀನ್, ಕೊಗ್ಗ ಪೂಜಾರಿ, ವೈಜಯಂತಿ ಭಟ್, ಮೋಹನ್ ಉಪಾಧ್ಯಾ ಇವರುಗಳನ್ನು ಜಿಲ್ಲಾಧ್ಯಕ್ಷರು ಗೌರವಿಸಿ ಅಭಿನಂದಿಸಿದರು.

ಹಿರಿಯರಾದ ಕೊಗ್ಗ ಪೂಜಾರಿ, ವೈಜಯಂತಿ ಭಟ್, ಯು. ಮೋಹನ್ ಉಪಾಧ್ಯಾ ಮೊದಲಾದವರು ತುರ್ತು ಪರಿಸ್ಥಿತಿಯ ತಮ್ಮ ಕರಾಳ ದಿನದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.

ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಕೆ. ಉದಯ ಕುಮಾರ್ ಶೆಟ್ಟಿ ಮಾಜಿ ಶಾಸಕರಾದ ಕೆ. ರಘುಪತಿ ಭಟ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ್ ಬಾಬು, ಶ್ಯಾಮಲಾ ಎಸ್. ಕುಂದರ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಸ್ವಾಗತಿಸಿ, ಕುಯಿಲಾಡಿ ಸುರೇಶ ನಾಯಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Reply