ತುಳುನಾಡಿನ ನೆಲ, ಜಲ, ಭಾಷೆಯ ಉಳಿವು, ರಕ್ಷಣೆ ನಮ್ಮ ಜವಾಬ್ದಾರಿ: ಮಾಲಾಡಿ ಅಜಿತ್ ಕುಮಾರ್ ರೈ

ತುಳುನಾಡಿನ ನೆಲ, ಜಲ, ಭಾಷೆಯ ಉಳಿವು, ರಕ್ಷಣೆ ನಮ್ಮ ಜವಾಬ್ದಾರಿ: ಮಾಲಾಡಿ ಅಜಿತ್ ಕುಮಾರ್ ರೈ

ಮಂಗಳೂರು: ಕೆಳಸ್ತರದಲ್ಲಿರುವ ಸಮಾಜ ಬಾಂಧವರನ್ನು ಮುಖ್ಯವಾಹಿನಿಗೆ ತರುವ ಜವಾಬ್ದಾರಿ ನಮ್ಮ ಮೇಲಿದೆ, ಹೊರನೋಟಕ್ಕೆ ನಮ್ಮದು ಜಾತಿ ಸಂಘಟನೆಯಾದರೂ ಇತರ ಸಮಾಜದೊಂದಿಗೆ ಸ್ನೇಹ- ಸೌಹಾರ್ದ ಮತ್ತು ಐಕ್ಯತೆಯಿಂದ ಇರಬೇಕು. ತುಳುನಾಡಿನ ನೆಲ, ಜಲ, ಹಾಗೂ ಭಾಷೆ ಇವುಗಳ ಉಳಿವು ಹಾಗೂ ರಕ್ಷಣೆ ನಮ್ಮ ಜವಾಬ್ದಾರಿ ಆಗಿರುತ್ತದೆ ಎಂದು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಮಾಲಾಡಿ ಅಜಿತ್‍ಕುಮಾರ್ ರೈ ಮಾಲಾಡಿ ಅಭಿನಂದನಾ ಭಾಷಣದಲ್ಲಿ ತಿಳಿಸಿದರು.

ಬಂಟ್ಸ್‍ಹಾಸ್ಟೆಲ್‍ನ ಗೀತಾ ಎಸ್.ಎಂ.ಶೆಟ್ಟಿ ಸಭಾಂಗಣದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ajeeth-1 ajeeth

ಈ ಸಂದರ್ಭದಲ್ಲಿ ಡಾ.ಆಶಾಜ್ಯೋತಿ ರೈ ಹಾಗೂ ಮಂಗಳೂರು ಕಾರ್ಯಕಾರಿ ಸಮಿತಿಗೆ ಆಯ್ಕೆಗೊಂಡ ಮೇಘನಾಥ ಶೆಟ್ಟಿ, ಜಯರಾಮ ಸಾಂತ ಯಸ್, ಸುರೇಶ್ಚಂದ್ರ ಶೆಟ್ಟಿ, ಎಮ್ ಸುಂದರ ಶೆಟ್ಟಿ, ನಿಟ್ಟೆಗುತ್ತು ರವಿರಾಜ ಶೆಟ್ಟಿ , ಜಗನ್ನಾಥ ಶೆಟ್ಟಿ ಬಾಳ, ಕೃಷ್ಣ ಪ್ರಸಾದ್ ರೈ, ಉಮೇಶ್ ರೈ ಪದವು ಮೇಗಿನ ಮನೆ, ಕೇಶವ ಮಾರ್ಲ, ಗೋಪಾಲಕೃಷ್ಣ ಶೆಟ್ಟಿ, ಶಶಿರಾಜ್ ಶೆಟ್ಟಿ, ಎ.ಸುರೇಶ್ ರೈ, ವಿಕಾಸ್ ಶೆಟ್ಟಿ, ರತ್ನಾಕರ ಶೆಟ್ಟಿ, ಡಾ.ಬಿ.ದೇವದಾಸ ರೈ, ವಸಂತ ಶೆಟ್ಟಿ, ರವೀಂದ್ರನಾಥ ಎಸ್, ಶೆಟ್ಟಿ, ಡಾ.ಬಿ.ಸಚ್ಚಿದಾನಂದ ರೈ, ಆನಂದ ಶೆಟ್ಟಿ ಹಾಗೂ ಸಬಿತಾ ಆರ್ ಶೆಟ್ಟಿ ಅವರನ್ನು ಗೌರವಿಸಲಾಯಿತು.

ಕೃಷ್ಣಪ್ರಸಾದ್ ರೈ ಹಾಗೂ ಮೇಘನಾಥ ಶೆಟ್ಟಿ ಅನಿಸಿಕೆಗಳನ್ನು ಸಭೆಯಲ್ಲಿ ವ್ಯಕ್ತಪಡಿಸಿದರು.

ಸಭೆಯಲ್ಲಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸಿಎ ಶಾಂತರಾಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದಿವಾಕರ ಸಾಮಾನಿ ಚೇಳ್ಯಾರ್ ಗುತ್ತು, ನಿವೇದಿತಾ ಎನ್.ಶೆಟ್ಟಿ, ಸುಲತಾ ಶೆಟ್ಟಿ, ಕೃಷ್ಣರಾಜ ಸುಲಯ, ಎಂ.ಕರುಣಾಕರ ಶೆಟ್ಟಿ, ಅಶ್ವತ್ಥಾಮ ಹೆಗ್ಡೆ, ಜಗದೀಶ್ ಶೆಟ್ಟಿ, ಮನಿಷ್ ರೈ, ಸಂದೀಪ್ ಶೆಟ್ಟಿ, ಸಿಎ ಮನಮೋಹನ್ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಉಲ್ಲಾಸ್ ಆರ್.ಶೆಟ್ಟಿ ಉಪಸ್ಥಿತರಿದ್ದರು.

ಜಯರಾಮ ಸಾಂತ ಸ್ವಾಗತಿಸಿದರು. ಸುಂದರ ಶೆಟ್ಟಿ ವಂದಿಸಿದರು. ಪ್ರಕಾಶ್ ಮೇಲಾಂಟ ಹಾಗೂ ಸುಖೇಶ್ ಚೌಟ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Please enter your comment!
Please enter your name here