ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾದ್ಯಕ್ಷರಾದ ಯೊಗೀಶ್ ಶೆಟ್ಟಿ ಜೆಪ್ಪು ರವರ ಹುಟ್ಟು ಹಬ್ಬ

ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾದ್ಯಕ್ಷರಾದ ಯೊಗೀಶ್ ಶೆಟ್ಟಿ ಜೆಪ್ಪು ರವರ ಹುಟ್ಟು ಹಬ್ಬವನ್ನು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಆಚರಿಸಲಾಯಿತು

ಯೊಗೀಶ್ ಶೆಟ್ಟಿ ಜಪ್ಪು ಅಭಿಮಾನಿಗಳ ಬಳಗದ ವತಿಯಿಂದ ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ರಕ್ತದಾನ ಹಾಗೂ ಸಸಿ ವಿತರಿಸುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು, ಈ ಮೂಲಕ 10000ಯುನಿಟ್ ರಕ್ತದಾನ ಹಾಗೂ 10000 ಗಿಡ ನೆಡುವ ಪ್ರತಿಜ್ಞೆ ಯನ್ನು ಹಾಗೂ ಗುರಿಯನ್ನು ಘೋಷಿಸಿಸಲಾಯಿತು. ನಂತರ ಜಪ್ಪುವಿನಲ್ಲಿರುವ ಭಗಿನಿ ಸಮಾಜದಲ್ಲಿ ಹಣ್ಣು ಹಂಪಲುಗಳನ್ನು ಹಂಚುವ ಕಾರ್ಯಕ್ರಮ ನಡೆಯಿತು.

ಅಭಿಮಾನಿ ಬಳಗದ ಅಧ್ಯಕ್ಷರಾದ ಪ್ರಶಾಂತ್ ರಾವ್ ಕದ್ರಿ , ರಾಜ್ಯ ವಕೀಲರ ಘಟಕದ ಅಧ್ಯಕ್ಷರಾದ ರಾಘವೇಂದ್ರ ರಾವ್, ಮಹಿಳಾ ಘಟಕದ ರಾಜ್ಯಾದ್ಯಕ್ಷೆಯಾದ ಜ್ಯೋತಿಕಾ ಜೈನ್, ಯುವ ಘಟಕದ ರಾಜ್ಯಾಧ್ಯಕ್ಷ ರಾದ ಮೋಹನ್ ದಾಸ್ ರೈ, ರಾಜ್ ಗೋಪಾಲ್, ಪುಂಜಾಲುಕಟ್ಟೆ ಘಟಕದ ಅಧ್ಯಕ್ಷರಾದ ರಮೇಶ್ ಶೆಟ್ಟಿ ಮೆಜಲೋಡಿ, ಮಹಿಳಾ ಘಟಕದ ಕಾರ್ಯದರ್ಶಿಯಾದ ವಿಜಯಾ ನಾಯರ್ ರಮೇಶ್ ಶೆಟ್ಟಿ ಶಿರೂರು, ವಾಮದ ಪದವು ಘಟಕದ ಅದ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ, ಆನಂದ್ ಅಮೀನ್ ಅಡ್ಯಾರ್, ನೇಮು ಕೊಟ್ಟಾರಿ, ಪ್ರಶಾಂತ್ ಜಪ್ಪಿನ ಮೊಗರು, ಹಾಗೂ ತುಳುನಾಡ ರಕ್ಷಣಾ ವೇದಿಕೆಯ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕಾರ್ಯಕ್ರಮಗಳಲ್ಲಿ ಭಾಗವಹಿಸದ್ದರು

Leave a Reply