ತೆಂಕಮಿಜಾರು ಗ್ರಾಮಕ್ಕೆ ಕೃಷಿ ವಿಜ್ಞಾನಿಗಳ ಭೇಟಿ

ತೆಂಕಮಿಜಾರು ಗ್ರಾಮಕ್ಕೆ ಕೃಷಿ ವಿಜ್ಞಾನಿಗಳ ಭೇಟಿ
ಮ0ಗಳೂರು: ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು 2016-17 ಸಾಲಿನ ಮುಂಚೂಣಿ ಪ್ರಾತ್ಯಕ್ಷಿಕೆ ಕಾರ್ಯಕ್ರಮದ ಅಡಿಯಲ್ಲಿ ಮಂಗಳೂರು ತಾಲೂಕಿನ ತೆಂಕಮಿಜಾರು ಗ್ರಾಮದಲ್ಲಿ ಅನುಷ್ಠಾನಗೊಂಡ “ಭತ್ತದಲ್ಲಿ ಸಮಗ್ರ ನಿರ್ವಹಣೆ” ಕೃಷಿ ಕ್ಷೇತ್ರಕ್ಕೆ ಕೃಷಿ ವಿಜ್ಞಾನಿಗಳು ಆಗಸ್ಟ್ 3 ರಂದು ಬೇಟಿ ನೀಡಿ ಪ್ರಗತಿಯನ್ನು ಪರಿಶೀಲಿಸಿದರು.

krishi

ಕಾರ್ಯಕ್ರಮದ ಅನುಷ್ಥಾನದ ಉಸ್ತುವಾರಿಯನ್ನು ಹೊತ್ತಿರುವ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರ ತಜ್ಞರಾದ ಹರೀಶ್ ಶೆಣೈ ಅವರು ಭತ್ತದ ಬೆಳೆಯಲ್ಲಿ ಮೇಲುಗೊಬ್ಬರ, ಬಾಧಿಸುವ ಕೀಟರೋಗ ಹಾಗೂ ಸಮಗ್ರ ಪೀಡೆ ನಿರ್ವಹಣೆಗೆ ಅನುಸರಿಸುವ ಕ್ರಮಗಳ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ ವಿಲ್ಪಡ್ ನೊರಾನ್ಹ, ರೊಲ್ಪಿ ನೊರಾನ್ಹ, ಇಲಿಯಾಸ ಮೊರಸ, ಉಮೇಶ ಗೌಡ, ರುಕ್ಮಯ್ಯ, ಹೊನ್ನಪ್ಪ ಗೌಡ ಸ್ಥಳದಲ್ಲಿ ಹಾಜರಿದ್ದು ಪೂರಕ ಹಿಮ್ಮಾಯಿತಿ ನೀಡಿದರು. ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ. ಪುನೀತಾ ಈ ಸಂದರ್ಭದಲ್ಲಿ ಉಪಸ್ಮಿತರಿದರು ಎಂದು ಪ್ರಕಟಣೆ ತಿಳಿಸಿದೆ.

Leave a Reply