ತ್ರಾಸಿ ಅಫಘಾತ ; ಕಂಬನಿ ಮಿಡಿದ ಎಸ್ಪಿ ಅಣ್ಣಾಮಲೈ ಮಾನವೀಯ ಅಂತಃಕರಣ

ತ್ರಾಸಿ ಅಫಘಾತ ; ಕಂಬನಿ ಮಿಡಿದ ಎಸ್ಪಿ ಅಣ್ಣಾಮಲೈ ಮಾನವೀಯ ಅಂತಃಕರಣ

ಕುಂದಾಪುರ: ತ್ರಾಸಿ ಮೊವಾಡಿ ಕ್ರಾಸ್ ನಲ್ಲಿ ಜೂನ್ 21 ರಂದು ನಡೆದ ಭೀಕರ ದುರಂತದಲ್ಲಿ ಮಡಿದ 8 ಮಕ್ಕಳ ಅಂತಿಮ ವಿಧಿ ಪ್ರಕ್ರಿಯೆಯಲ್ಲಿ ಉಡುಪಿ ಜಿಲ್ಲಾ ಎಸ್ಪಿ ಅಣ್ಣಾಮಲೈ ಸಕ್ರಿಯವಾಗಿ ಭಾಗವಹಿಸಿದ ಅವರ ಮಾನವೀಯ ಅಂತಃಕರಣ ಎಲ್ಲರನ್ನು ಕಲಕುವಂತೆ ಮಾಡಿತು.

image040funral-trasi-victims-20160623 image041funral-trasi-victims-20160623 image051funral-trasi-victims-20160623 image075funral-trasi-victims-20160623 image122funral-trasi-victims-20160623 image123funral-trasi-victims-20160623 image124funral-trasi-victims-20160623 image127funral-trasi-victims-20160623 image128funral-trasi-victims-20160623

ತ್ರಾಸಿ ಮೊವಾಡಿ ಸಮೀಪ ರಸ್ತೆ ಅಫಘಾತದಲ್ಲಿ ಮೃತರಾದ ಡಾನ್ ಬೊಸ್ಕೊ ಆಂಗ್ಲ ಮಾಧ್ಯಮ ಶಾಲೆಯ 8 ಪುಟ್ಟ ಕಂದಮ್ಮಗಳ ಅಂತ್ಯ ಸಂಸ್ಕಾರ ಗಂಗೊಳ್ಳ ಹಾಗೂ ತಲ್ಲೂರು ಚರ್ಚುಗಳಲ್ಲಿ ಗುರುವಾರ ಜರುಗಿತು.
ದುರಂತದಲ್ಲಿ ಸಾವನಪ್ಪಿದ ಕೆಲಿಸ್ತಾ- ಕ್ಲಾರಿಸಾ, ಅನ್ಸಿಟಾ – ಆಲ್ವಿಟಾ ಸಹೋದರಿಯರು ಮತ್ತು ಡೆಲ್ವಿನ್ ಅವರ ಅಂತ್ಯಸಂಸ್ಕಾರ ಗಂಗೊಳ್ಳಿಯಲ್ಲಿ ಬೆಳಿಗ್ಗೆ ಜರುಗಿದರೆ ನಿಖಿತ ಅನನ್ಯ ಮತ್ತು ರೊಯ್ ಸ್ಟನ್ ಅವರ ಅವರ ಅಂತ್ಯವಿಧಿ ಸಂಜೆ ತಲ್ಲೂರು ಚರ್ಚಿನಲ್ಲಿ ಜರುಗಿತು.
ಬೆಳಿಗ್ಗೆ ಗಂಗೊಳ್ಳಿಯಲ್ಲಿ ನಡೆದ ಅಂತ್ಯಸಂಸ್ಕಾರಕ್ಕೆ ಆಗಮಿಸಿದ ಅಣ್ಣಾಮಲೈ ಸಂಪೂರ್ಣ ಧಾರ್ಮಿಕ ವಿಧಿ ವಿಧಾನಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕೊನೆಯಲ್ಲಿ ಪೋಲಿಸ್ ಇಲಾಖೆಯ ಪರವಾಗಿ ಅಗಲಿದ ಐದು ಮಕ್ಕಳಿಗೂ ಹೂಗುಚ್ಚ ಇಟ್ಟು ಶ್ರದ್ಧಾಂಜಲಿ ಸಮರ್ಪಿಸಿದರು ಈ ವೇಳೆ ಅವರು ಭಾವುಕಾರದರು. ಬಳಿಕ ಸಂಜೆ ತಲ್ಲೂರು ಚರ್ಚಿಗೆ ಆಗಮಿಸಿ ಅಲ್ಲಿಯೂ ಕೂಡ ಮೂರೂ ಮಕ್ಕಳಿಗೂ ಪುಷ್ಪಗುಚ್ಚವಿಟ್ಟು ಶ್ರದ್ಧಾಂಜಲಿ ಸಲ್ಲಿಸಿದರಲ್ಲದೆ ಅಂತ್ಯ ಸಂಸ್ಕಾರದ ಕೊನೆಯ ತನಕವೂ ನಿತ್ತು ಪೋಲಿಸರಿಗೆ ಸೂಕ್ತ ಮಾರ್ಗದರ್ಶನ ನೀಡಿದರು.
ಒರ್ವ ಪೋಲಿಸ್ ವರಿಷ್ಠಾಧೀಕಾರಿಯಾಗಿ ಘಟನೆ ನಡೆದ ದಿನದಿಂದ ಅಂತ್ಯ ಸಂಸ್ಕಾರದ ತನಕ ತನ್ನ ಪೋಲಿಸ್ ಅಧಿಕಾರಿಗಳಿಂದ ಸಂಪೂರ್ಣ ಸಹಕಾರ ನೀಡಿದ ಅಣ್ಣಾಮಲೈ ಸ್ವತಃ ವ್ಯವಸ್ಥೆಯ ಉಸ್ತುವಾರಿಯನ್ನು ವಹಿಸಿದ್ದು ನೆರೆದ ಸಹಸ್ರಾರು ಜನರು ಅವರ ಮಾನವೀಯ ಅಂತಃಕರಣಕ್ಕೆ ಅಭಿನಂದನೆ ಸಲ್ಲಿಸಿದರು.
ಹೆಮ್ಮಾಡಿಯಿಂದ ಮೊವತ್ತುಮುಡಿಯಿಂದ ಮೃತ ಮಕ್ಕಳ ಮೃತ ದೇಹದ ಅಂತಿಮ ಯಾತ್ರೆಗೆ ಸಂಪೂರ್ಣ ಪೋಲಿಸ್ ಬಂದೊಬಸ್ತನ್ನು ವ್ಯವಸ್ಥೆಗೊಳಿಸಿದ ಎಸ್ಪಿ ಹಾಗೂ ಕುಂದಾಪುರ ಡಿವೈಎಸ್ಪಿ ಮಂಜುನಾಥ್ ಶೆಟ್ಟಿ, ಚರ್ಚಿನಲ್ಲಿ ಕೂಡ ಅಂತಿಮ ವಿಧಿ ವಿಧಾನಗಳು ಶಿಸ್ತುಬದ್ಧವಾಗಿ ನೆರವಾಗಲು ಕುಂದಾಫುರ ಹಾಗೂ ಸ್ಥಳೀಯ ಠಾಣೆಗಳ ಪೋಲಿಸರು ಸಹಕರಿಸಿದರು.

17 Comments

  1. May the Lord Jesus give the eternal rest to the children and the strength to the loved ones to go through the difficult moment of life. May Lord Jesus bless and protect Sir Ammamalay and other officials who stood at the most troubled time of the loved once of the little children who lost their life. God bless you.

  2. Really. We need more and more people like Annamalai sir. Actually this news is as exactly as my view yesterday. I was the one esterday noticed this…and thought nobody others. But I was wrong. My eyes filled with tears for Annamalai sir and other police officers.great officer.jai hind.

  3. May the souls rest in peace..condolences to the departed families…god give them the strength to bear the pain…

  4. Anna malai is a great person…we heard him before also from long…. time……some other childrens from other states saying….tum tho udupika ho…anna malai ka gav valeho….eligible for …bharat ratna

  5. Sincere condolences to the families of the little angels.

    Respects and salutes to Anna – a real elder brother (anna) to all. A rare tender heart behind the rough Khaki.

Leave a Reply

Please enter your comment!

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

Please enter your name here