ದಕ್ಷಿಣ ಬ್ಲಾಕ್ ಕಾಂಗ್ರೆಸ್ ಮಹಿಳಾ ಸಮಾವೇಶ

ದಕ್ಷಿಣ ಬ್ಲಾಕ್ ಕಾಂಗ್ರೆಸ್ ಮಹಿಳಾ ಸಮಾವೇಶ

ಮಂಗಳೂರು: ಮಂಗಳೂರು ದಕ್ಷಿಣ ಬ್ಲಾಕ್ ಮಹಿಳಾ ಕಾಂಗ್ರೆಸ್ ನ ಮಹಿಳಾ ಸಮಾವೇಶ ಸೆಪ್ಟಂಬರ್ 26 ರಂದು ಸಂಜೆ 3.30 ಕ್ಕೆ ಮಂಗಳಾ ದೇವಿಯ ಬಳಿ ಇರುವ ಕಾಂತಿ ಚರ್ಚ್ ಸಭಾಂಗಣದಲ್ಲಿ ಆಯೋಜಿಲಾಗಿದೆ ಎಂದು ದಕ್ಷಿಣ ಬ್ಲಾಕ್ ಮಹಿಳಾ ಅಧ್ಯಕ್ಷೆ ನಮಿತಾ ಡಿ.ರಾವ್ ತಿಳಿಸಿದರು.

ಅವರು ಈ ಸಮಾವೇಶಕ್ಕೆ ಪೂರ್ವಭಾವಿಯಾಗಿ ಆಯೋಜಿಸಲಾಗಿದ್ದ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಈ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸುವಂತೆ ವಿನಂತಿಸಿದರು. ಈ ಸಭೆಯ ಅಧ್ಯಕ್ಷತೆಯನ್ನು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೆ.ಬಾಲಕೃಷ್ಣ ಶೆಟ್ಟಿ ವಹಿಸಿದ್ದರು.

mahila-congress

ಕಾರ್ಪೊರೇಟರ್ ಅಪ್ಪಿ ಅವರು ಮಾತನಾಡಿ ಮಹಿಳೆಯರಿಗೆ ನಮ್ಮ ಸರ್ಕಾರದಿಂದ ಬಿಡುಗಡೆ ಮಾಡಿರುವ ಯೋಜನೆಗಳನ್ನು ತಿಳಿಸಿ ಆ ಯೋಜನೆಗಳ ವಿವರಗಳನ್ನು ಮನವರಿಕೆ ಮಾಡಿಕೊಡುವ ಅಗತ್ಯವಿದೆ ಎಂದರು.

ಬಳಿಕ ಶೋಭಾ ಕೇಶವ ಮಾತನಾಡಿ ಬೂತ್ ಮಟ್ಟದ ಕಾರ್ಯಕರ್ತರಿಗೆ ನಾವು ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡಿ ನಮ್ಮ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಮನವರಿಕೆ ಮಾಡಿಕೊಡುವಂತಾದರೆ ಅವರನ್ನು ಸಂಘಟಿಸಲು ಅನುಕೂಲವಾಗುತ್ತದೆ. ಇದಕ್ಕೆ ಸೂಕ್ತ ತರಬೇತಿಯನ್ನು ಕೊಡುವಂತಾಗಬೇಕು ಎಂದರು.

ಎಐಸಿಸಿ ಸದಸ್ಯ ಮೋಹನ್ ಪಿ.ವಿ. ಮಾತನಾಡಿ ಪಕ್ಷ ಸಂಘಟನೆ ಮಾಡಲು ಕೂಡಿ ಬಾಳುವ ಮನಸ್ಸು ಇರಬೇಕು. ಇದಕ್ಕಾಗಿ ಸೇವಾ ಮನೋಭಾವದಿಂದ ಕೆಲಸ ಮಾಡಬೇಕು ಎಂದರು.

ದಕ್ಷಿಣ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಸದಾಶಿವ ಅಮೀನ್ ಅವರು ಮಾತನಾಡಿ ನಾವು ಪದಾಧಿಕಾರಿಗಳು ಬಳಿ ಹೋಗಿ ಮಾತನಾಡಿ ಅವರ ಸಮಸ್ಯೆಗಳನ್ನು ಆಲಿಸಬೇಕು. ಬಳಿಕ ಅದಕ್ಕಾಗಿ ಕಾರ್ಯಕ್ರಮವನ್ನು ರೂಪುಗೊಳಿಸಬೇಕು ಎಂದು ಸಲಹೆ ಮಾಡಿದರು.

ಹಿರಿಯರಾದ ಪ್ರಭಾಕರ್ ಶ್ರೀಯಾನ್ ಅವರು ಮಾತನಾಡಿ ಕಾಂಗ್ರೆಸ್ ಪಕ್ಷವನ್ನು ಕಟ್ಟಬೇಕಾದರೆ ಮಹಿಳೆಯರು ಸಂಘಟಿತರಾಗಬೇಕು. ಇದಕ್ಕೆ ನಮ್ಮಲ್ಲಿ ಒಗ್ಗಟ್ಟಿರಬೇಕಾಗುತ್ತದೆ ಎಂದರು.

ಅಧಕ್ಷರಾದ ಬಾಲಕೃಷ್ಣ ಶೆಟ್ಟಿ ಮಾತನಾಡಿ ಪಕ್ಷ ಸಂಘಟನೆಯನ್ನು ಬಲಗೊಳಿಸುವಲ್ಲಿ ಮಹಿಳೆಯರ ಪಾತ್ರ ಎಷ್ಟು ಪ್ರಮುಖ ಎಂಬುದನ್ನು ಸವಿವರವಾಗಿ ತಿಳಿ ಸಂಘಟನೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಬೇಕಾಗುತ್ತದೆ ಎಂದರು.

ಸಭೆಯಲ್ಲಿ ಕಾರ್ಪೊರೇಟರ್ ರತಿಕಲಾ, ಕವಿತಾ ವಾಸು, ಶೈಲಜಾ, ಸುಮಯ್ಯ, ಮಾಜಿಮಹಿಳಾ ಅಧ್ಯಕ್ಷೆ ವಿದ್ಯಾಭಟ್, ದಕ್ಷಿಣ ಬ್ಲಾಕ್ ನ ಪ್ರಧಾನ ಕಾರ್ಯದರ್ಶಿ ದುರ್ಗಾ ಪ್ರಸಾದ್, ಉಮೇಶ್ ದೇವಾಡಿಗ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬೂಬ್ಬಕರ್, ವಿಜಯಲಕ್ಷ್ಮೀ, ಎಲಿಜಬೆತ್, ಕವಿತಾ, ಗೀತಾ ಹಾಗೂ ಕಾರ್ಯಕರ್ತರು ಹಾಜರಿದ್ದರು.

ಸಭೆಗೂ ಮುನ್ನ ವೀರಮರಣನ್ನಪ್ಪಿದ ಯೋಧ ಹುತಾತ್ಮರಿಗೆ ಚಿರಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.

Leave a Reply