ದಕ ನಿರ್ಗಮನ ಜಿಲ್ಲಾಧಿಕಾರಿ ಇಬ್ರಾಹಿಂ ಕಾರು ಅಫಘಾತ

ದಕ ನಿರ್ಗಮನ ಜಿಲ್ಲಾಧಿಕಾರಿ ಇಬ್ರಾಹಿಂ ಕಾರು ಅಫಘಾತ

ಮಂಗಳೂರು: ದಕ್ಷಿಣ ಕನ್ನಡ ನಿರ್ಗಮನ ಜಿಲ್ಲಾಧಿಕಾರಿ ಎ ಬಿ ಇಬ್ರಾಹಿಂ ಅವರ ಪ್ರಯಾಣಿಸುತ್ತಿದ್ದ ಕಾರು ಗುಂಡ್ಯ ಬಳಿಯ ಉದನೆಯಲ್ಲಿ ಶನಿವಾರ ಅಫಘಾತಕ್ಕೀಡಾಗಿದೆ.

d-c-ibrahim-injured-road-mishap-udane-001 d-c-ibrahim-injured-road-mishap-udane-002 d-c-ibrahim-injured-road-mishap-udane-003

ಪ್ರಾಥಮಿಕ ಮಾಹಿತಿಗಳ ಪ್ರಕಾರ ಜಿಲ್ಲಾಧಿಕಾರಿ ಇಬ್ರಾಹಿಂ ಅವರು ಇತರ ಕೆಲವೊಂದು ವ್ಯಕ್ತಿಗಳೊಂದಿಗೆ ಗುಂಡ್ಯ ಬಳಿ ಸ್ಥಳ ಪರಿಶೀಲನೆಗೆ ತೆರಳಿದ್ದು, ಉದನೆ ತಲುಪಿದ ವೇಳೆ ಎದುರಿನಿಂದ ಬಂದ ಸ್ಕಾರ್ಪಿಯೊ ಕಾರು ಜಿಲ್ಲಾಧಿಕಾರಿಗಳ ಫಾರ್ಚುನರ್ ಕಾರಿಗೆ ಡಿಕ್ಕಿ ಹೊಡೆಯಿತು ಎನ್ನಲಾಗಿದೆ.
ಎರಡು ವಾಹನಗಳ ಪ್ರಯಾಣಿಕರು ಘಟನೆಯಲ್ಲಿ ಗಾಯಗೊಂಡಿದ್ದು, ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಫಘಾತದಿಂದಾಗಿ ಕೆಲವು ಸಮಯ ರಸ್ತೆ ಸಂಚಾರದಲ್ಲಿ ವ್ಯತ್ಯಯವಾಯಿತು. ಮಂಗಳೂರಿನ ಪತ್ರಕರ್ತರ ತಂಡವೊಂದು ತುಮಕೂರಿಗೆ ತೆರಳುತ್ತಿದ್ದು, ಘಟನೆಯ ಕುರಿತು ಕೂಡಲೇ ಸ್ಥಳೀಯ ಪೋಲಿಸರಿಗೆ ಮಾಹಿತಿ ನೀಡಿ ಟ್ರಾಫಿಕ್ ವ್ಯವಸ್ಥೆ ಸರಿ ಮಾಡಲು ಸಹಕರಿಸಿತು.
ಸ್ಥಳಕ್ಕೆ ಉಪ್ಪಿನಂಗಡಿ ಪೋಲಿಸರು ಆಗಮಿಸಿ ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಂಡಿದ್ದಾರೆ.

Leave a Reply