ದುಬಾಯಿಯಲ್ಲಿ ಮನಸೆಳೆದ ವಿಜೃಂಬಣೆಯ ದಶಮಾನೋತ್ಸವ ವರಮಾಹಾಲಕ್ಷ್ಮೀ ಪೂಜಾ ವೈಭವ

ಕೊಲ್ಲಿ ನಾಡಿನ ಭಕ್ತ ಜನಸಾಗರದ ನಡುವೆ ದುಬಾಯಿಯಲ್ಲಿ ಮನಸೆಳೆದ ವಿಜೃಂಬಣೆಯ ದಶಮಾನೋತ್ಸವ ವರಮಾಹಾಲಕ್ಷ್ಮೀ ಪೂಜಾ ವೈಭವ

ದುಬೈ: ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಕರ್ನಾಟಕದ ಸುಮಂಗಲೆಯರು ಸಂಘಟಿತರಾಗಿರುವ ಶ್ರೀ ವರ ಮಹಾ ಲಕ್ಷ್ಮೀ ಸಮಿತಿಯ ಆಶ್ರಯದಲ್ಲಿ ದುಬಾಯಿ ಅಲ್ ಸಫಾದಲ್ಲಿರುವ ಜೆ.ಎಸ್.ಎಸ್. ಸ್ಕೂಲ್ ಸಭಾಂಗಣದಲ್ಲಿ 2016 ಅಗಸ್ಟ್ 12ನೇ ತಾರೀಕು ಶುಕ್ರವಾರದ ಬೆಳಗಿನಿಂದ ಸಂಜೆಯವರೆಗೆ ದಿನಪೂರ್ತಿ ಸುಮಂಗಲೆಯರ ನೇತ್ರತ್ವದಲ್ಲಿ  ಶ್ರೀ ವರಮಹಾಲಕ್ಷ್ಮೀ ದಶನಮಾನೋತ್ಸವ ಪೂಜಾ ಕಾರ್ಯವನ್ನು ನೆರವೇರಿಸಲಾಯಿತು ಕೈಂಕರ್ಯದಲ್ಲಿ ಭಾಗವಹಿಸಿದ ಎಲ್ಲಾ ಭಕ್ತಾಧಿಗಳು ಪೂಜಾ ವಿಧಿವಿಧಾನಗಳಲ್ಲಿ ಭಕ್ತಿ ಶೃದ್ಧೆಯಿಂದ ಪಾಲ್ಗೊಂಡು ಮಹಾಪ್ರಸಾದವನ್ನು ಸ್ವೀಕರಿಸಿ ಪುನೀತರಾದರು.

ದಶಮಾನೋತ್ಸವ ಪೂಜಾ ವಿದಿವಿಧಾನಗಳನ್ನು  ಶ್ರೀ ರಘುಭಟ್ ವಹಿಸಿಕೊಂಡಿದ್ದು,  ಪೂಜೆಯಲ್ಲಿ ಸರ್ವರ ಪರವಾಗಿ ಶ್ರೀಮತಿ ದೀಪ ಜಗನ್ನಾಥ್ ದಂಪತಿಗಳು ಭಾಗಿಗಳಗಿದ್ದರು.

image001varamahalakshmi-pooja-dubai-20160813-001

image018varamahalakshmi-pooja-dubai-20160813-018 image002varamahalakshmi-pooja-dubai-20160813-002 image003varamahalakshmi-pooja-dubai-20160813-003

ಸುಮಂಗಲೆಯರ ಭಕ್ತಿ ಶ್ರದ್ಧೆ, ಶಿಸ್ತಿನ ಪೂಜೆಗೆ ಸಾಕ್ಷಿಯಾದ ಸಭಾಂಗಣ

ಸುಮಂಗಲೆಯರು ರಚಿಸಿದ ಅಕರ್ಷಕ ಪುಷ್ಪಾಲಂಕೃತ ರಂಗವಲ್ಲಿ ವಿನ್ಯಾಸದ ತುಳಸಿ ವೃಂದಾವನಕ್ಕೆ ಹಣತೆಯನ್ನು ಹಚ್ಚಿ ನಮಸ್ಕರಿಸಿದ ನಂತರ ಪೂಜಾ ಸಂಕಲ್ಪದಲ್ಲಿ ಸಮಿತಿಯ ಸದಸ್ಯ ಸುಮಂಗಲೆಯರು ಭಾಗಿಗಳಾಗಿ ಪೂಜಾ ಕಲಶದಲ್ಲಿ ಪ್ರತಿಷ್ಠಾಪಿಸಲಾದ ದೇವರಿಗೆ ಜ್ಯೋತಿಯನ್ನು ಬೆಳಗಿಸಿ ಮಹಾಲಕ್ಷ್ಮೀಯನ್ನು ಸ್ತುತಿಸುತ್ತಾ, ಮಹಾಲಕ್ಷ್ಮೀ ಅಷ್ಟಕಂ, ವರಮಹಾ ಲಕ್ಷ್ಮೀ ಅಷ್ಟೋತ್ತರ ಪಠಿಸಿದರು.

ಶ್ರೀ ವರಮಹಾಲಕ್ಷ್ಮೀ ಸಮಿತಿಯ ದಶಮನೋತ್ಸವ ಪೂಜಾ ಸಮಾರಂಭ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಅಯೋಜಿಸಲಾಗಿದ್ದು ವಿವಿಧ ವಿಭಾಗದಲ್ಲಿ ಮಕ್ಕಳಿಂದ ಹಿರಿಯರವರೆಗೆ ಸ್ಪರ್ಧಿಗಳು ಭಾಗವಹಿಸಿದ್ದು ಪ್ರಥಮ, ದ್ವಿತೀಯ, ತೃತಿಯ ಸ್ಥಾನವನ್ನು ಪಡೆದುಕೊಂಡರು.

image004varamahalakshmi-pooja-dubai-20160813-004 image005varamahalakshmi-pooja-dubai-20160813-005 image006varamahalakshmi-pooja-dubai-20160813-006 image007varamahalakshmi-pooja-dubai-20160813-007 image008varamahalakshmi-pooja-dubai-20160813-008 image009varamahalakshmi-pooja-dubai-20160813-009

ಭಗವದ್ಗೀತೆ ವಾಚನ

ವಯೋಮಿತಿ 4 ರಿಂದ 7

ಪ್ರಥಮ : ಸುಮುಖ ಉಪೇಂದ್ರ,ದ್ವಿತೀಯ : ಕುನಾಲ್ ಜೆ. ಕೋಟ್ಯಾನ್, ತೃತಿಯ : ಲಕ್ಷ ಹರೀಶ್ ಸುವರ್ಣ.

ವಯೋಮಿತಿ 8 ರಿಂದ 13

ಪ್ರಥಮ : ದಕ್ಷಾ ಕೋಟ್ಯಾನ್, ದ್ವಿತೀಯ : ಅರ್ನವ್ ಅಶೋಕ್, ತೃತಿಯ : ಆರ್ಯ ಆಶೋಕ್.

ವಯೋಮಿತಿ 14 ರಿಂದ 17

ಪ್ರಥಮ : ಇಶಿತಾ ಶೇಖ ಪೂಜಾರಿ, ದ್ವಿತೀಯ : ಪ್ರತೀಕ್ ಜಯನಂದ್ ಪಕ್ಕಳ

ಭಕ್ತಿಗೀತೆ ಸ್ಪರ್ಧೆ :

ವಯೋಮಿತಿ 4 ರಿಂದ 7

ಪ್ರಥಮ : ಶೆಲಿನಾ ಲಕ್ಷ್ಮಿದಾಸ್, ದ್ವಿತೀಯ : ಸುಮುಖ್ ಉಪೆಂದ್ರ, ತೃತೀಯ : ತನೀಶ್ ಪಕ್ಕಳ

ವಯೋಮಿತಿ 8 ರಿಂದ 13 ವರ್ಷದವರು

ಪ್ರಥಮ : ಪ್ರಾಪ್ತಿ ಜಯಾನಂದ್ ಪಕ್ಕಳ : ದ್ವಿತೀಯ : ಹರೀಶ್ ಶೆಟ್ಟಿಗಾರ್, ತೃತೀಯ: ಅರೂಷ್ ಕೊರಾ.

ವಯೋಮಿತಿ 14 ರಿಂದ 17 ವರ್ಷದವರು

ಪ್ರಥಮ : ಪ್ರತೀಕ್ ಜಯಾನಂದ್ ಪಕ್ಕಳ ದ್ವ್ತಿಈಯ: ಐಶ್ವರ್ಯ,

image010varamahalakshmi-pooja-dubai-20160813-010 image011varamahalakshmi-pooja-dubai-20160813-011 image012varamahalakshmi-pooja-dubai-20160813-012 image013varamahalakshmi-pooja-dubai-20160813-013 image014varamahalakshmi-pooja-dubai-20160813-014 image015varamahalakshmi-pooja-dubai-20160813-015 image016varamahalakshmi-pooja-dubai-20160813-016 image017varamahalakshmi-pooja-dubai-20160813-017

ಏಕಪಾತ್ರಭಿನಯ:

ಫ್ರಥಮ : ಛಾಯಶ್ರೀ ಲಕ್ಷ್ಮೀ, ದ್ವಿತೀಯ : ಜಸ್ಮಿತಾ ವಿವೆಕ್, ತೃತೀಯ : ನಿಶಾ ಸುಧೀರ್

ಛದ್ಮವೇಷ ಸ್ಪರ್ಧೆ: ಎಳೆಯ ಮಕ್ಕಳು ವೈವಿಧ್ಯಮಯ ವೇಷಭೂಷಣದೊಂದಿಗೆ ತಮ್ಮ ತೊದಲು ನುಡಿಗಳಿಂದ ಅಭಿನಯದೊಂದಿಗೆ ಸರ್ವರ ಮನಸೆಳೆದರು.

ಪ್ರಥಮ: ತನಿಸ್ಕಾ ಮುದಲಿಯಾರ್ ದ್ವಿತೀಯ : ವಿವನ್ ಬಾಲಕೃಷ್ಣ, ತೃತಿಯ : ಲಕ್ಷ್ ಹರೀಶ್ ಸುವರ್ಣ.

ರಂಗವಲ್ಲಿ ಸ್ಪರ್ಧೆ

ಪ್ರಥಮ : ಮಿತ್ರಾಕ್ಷಿ ವಿನೂತ್, ದ್ವಿತೀಯ : ಸ್ಮಿತಾ ಅಶೋಕ್, ತೃತಿಯ : ಅರುಂದತಿ ಮನೋಹರ್.

ಸಭಾಂಗಣದ ಹೊರ ಅವರಣದಲ್ಲಿ ರಂಗವಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ಹತ್ತಾರು ಮಹಿಳಾಮಣಿಗಳು ತಮ್ಮ ಹಸ್ತ ಕೌಶಲ್ಯವನ್ನು ಬಣ್ಣದ ಚಿತ್ತಾರವನ್ನು ಮೂಡಿಸಿ ಶಾಸ್ತ್ರೀಯ ನಕ್ಷಾ ವರ್ಣಸಂಯೋಜನೆಯೊಂದಿಗೆ ನೋಡುಗರ ಕಣ್ಮನ ಸೆಳೆದರು.

ನೃತ್ಯ ಪ್ರದರ್ಶನ: ಶ್ರೀಮತಿ ಜಸ್ಮಿತಾ ವಿವೇಕ್ ಮತ್ತು ಶ್ರೀಮತಿ ಅಂಜಲಿ ಯವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.

“ಭ್ರಮಾರಾಂಬಿಕೆ” ನೃತ್ಯ ರೂಪಕ

ಶ್ರೀ ವರಮಹಾಲಕ್ಷ್ಮೀ ಸಮಿತಿಯ ಸದಸ್ಯರಿಂದ “ಭ್ರಮಾರಾಂಬಿಕೆ” ನೃತ್ಯ ರೂಪಕ ಪ್ರದರ್ಶನವಾಯಿತು. ಶ್ರೀಮತಿ ರಂಜನಿ ಕೃಷ್ಣ ಪ್ರಸಾದ್ ರವರ ನಿರ್ದೇಶನದಲ್ಲಿ ಮೂಡಿ ಬಂದಿದ್ದು ವೀಕ್ಷಕರ ಗಮನ ಸೆಳೆಯಿತು

ಮನಸೆಳೆದ ಯಕ್ಷಗಾನ “”ಪಾಂಚಜನ್ಯ”” ಪ್ರಸಂಗ

ಶ್ರೀ ವರಮಹಾಲಕ್ಷ್ಮೀ ಸಮಿತಿಯ ದಶಮಾನೋತ್ಸವ ಪೂಜಾ ಸಮಾರಂಭ ವಿಶೇಷವಾಗಿ ಯಕ್ಷಗಾನ ಸೇವೆಯನ್ನು ಸಮರ್ಪಿಸಲಾಯಿತು. ಯಕ್ಷಮಿತ್ರರು ದುಬಾಯಿ ಪ್ರಸ್ತುತ ಪಡಿಸಿದ ಪ್ರಸಂಗ “ಪಾಂಚಜನ್ಯ” ದುಬಾಯಿಯ ಹವ್ಯಾಸಿ ಯಕ್ಷಗಾನ ಕಲಾವಿದರು ಜೊತೆಯಲ್ಲಿ ಬಾಲ ಕಲಾವಿದರು ತಮ್ಮ ಅದ್ಭುತ ಅಭಿನಯದೊಂದಿಗೆ ಸರ್ವರ ಮೆಚ್ಚುಗೆಗೆ ಪಾತ್ರರಾದರು.

ಪುರಾಣ ಭಾಗವತದಲ್ಲಿ ಶ್ರೀಕೃಷ್ಣನ ಬಾಲ್ಯದ ಪ್ರಸಂಗ ಸಾಂದಿಪನಿ ಮಹರ್ಷಿಯ ಆಶ್ರಮದ ವಿದ್ಯಾಭ್ಯಾಸದ ಕಥಾ ಮಾಲಿಕೆಯನ್ನು ತುಳುನಾಡಿನಿಂದ ಆಗಮಿಸಿದ್ದ ಪ್ರಖ್ಯಾತ ಮಹಿಳಾ ಭಾಗವತರು ಕು. ಕಾವ್ಯಶ್ರೀ ಅಜೇರು ರವರ ಸುಮಧುರ ಕಂಠಸಿರಿಯಲ್ಲಿ ಪ್ರಥಮ ಬಾರಿಗೆ ಗಲ್ಫ್ ನಾಡಿನಲ್ಲಿ ಮಹಿಳಾಭಾಗವತರಾಗಿ ಐತಿಹಾಸಿಕ ದಾಖಲೆಗೆ ಸಾಕ್ಷಿಯಾದರು. ಮತ್ತೊರ್ವ ಚೆಂಡೆ ಮದ್ದಲೆ ಮಹಿಳಾ ಕಲಾವಿದೆ ಕು. ದಿವ್ಯಶ್ರೀ ಸುಳ್ಯ ತಮ್ಮ ಹಸ್ತಕೌಶಲ್ಯದಿಂದ ಮರಳುನಾಡಿನಲ್ಲಿ ಚೆಂಡೆ ವಾದನದ ನಾದವನ್ನು ಪ್ರತಿಧ್ವನಿಸಿ ಐತಿಹಾಸಿಕ ದಾಖಲೆಗೆ ತಮ್ಮ ಹೆಸರನ್ನು ಸೇರ್ಪಡೆಗೊಳಿಸಿದರು. ಅತಿಥಿ ಕಲಾವಿದ ಶ್ರೀ ಮಯೂರ್ ಸಹ ಚೆಂಡೆ ತಬಲಾ ಸಾಥ್ ನೀಡಿದರು. ಊರಿನೊಂದ ಬಂದಿರುವ ಕಲಾವಿದರಾದ ಶ್ರೀ ಗಂಗಾಧರ್ ಶೆಟ್ಟಿಗಾರ್ ಪ್ರಸಾದನ ಮತ್ತು ವೇಷಭೂಷಣದ ಜವಬ್ಧಾರಿಯನ್ನು ವಹಿಸಿದ್ದರು.

ವೈವಿಧ್ಯಮಯ ಪಾತ್ರದಲ್ಲಿ ಸ್ಥಳಿಯ ಕಲಾಪ್ರತಿಭೆಗಳು: ಅಪೂರ್ವ ದುರ್ಗೇಶ್ ಶೆಟ್ಟಿಗಾರ್, ಯಶಸ್ವಿನಿ ಶೇಖರ್ ಪೂಜಾರಿ, ದಕ್ಷಾ ಕೋಟ್ಯಾನ್, ಪ್ರತೀಕ್ ಜಯಾನಂದ್ ಪಕ್ಕಳ, ಸ್ವಾತಿ ಕಟೀಲು, ಸ್ವಾತಿ ಶರತ್ ಸರಳಾಯ, ತನೀಶ್ ಪ್ರಕಾಶ್ ಪಕ್ಕಳ, ಆದಿತ್ಯ ದಿನೇಶ್ ಶೆಟ್ಟಿ, ಪ್ರಾಪ್ತಿ ಜಯಾನಂದ್ ಪಕ್ಕಳ, ಶರತ್ ಪೂಜಾರಿ, ಅದಿತಿ ದಿನೇಶ್ ಶೆಟ್ಟಿ, ಸತೀಶ್ ಶೆಟ್ಟಿಗಾರ್ ವಿಟ್ಲ ಸಮಂತ ಹೆಗ್ಡೆ, ಯಶ್ ಲಕ್ಷ್ಮಣ್ ಶೆಟ್ಟಿಗಾರ್, ಭವೀಕ್ ಕೋಟ್ಯಾನ್, ಇಶಿಕಾ ಶೇಖರ್ ಪೂಜಾರಿ, ಅನ್ವಿ ಜಗ್ಗನಾಥ್ ಬೆಳ್ಳಾರೆ, ಚಕ್ರತಾಳದಲ್ಲಿ ರಂಜನಿ ಕೃಷ್ಣ ಪ್ರಸಾದ್, ಚಂದ್ರಮೋಹನ್ ಶೆಟ್ಟಿಗಾರ್ ಮುಲ್ಕಿ, ರಂಗ ಸಜ್ಜಿಕೆ- ಇಂದಿರಾ ಶೆಟ್ಟಿಗಾರ್, ಶೈಲಜಾ ಶೇಖರ್ ಪೂಜಾರಿ ಯಶಸ್ವಿ ಪ್ರದರ್ಶನದ ಹಿಂದಿನ ರುವಾರಿಗಳು.

ಸಂಪೂರ್ಣ ಕಥಾ ಸಂಬಾಷಣೆ, ರಂಗ ಪಠ್ಯ ಹಾಗೂ ನಿರ್ದೇಶನ  ಶ್ರೀ ಶೇಖರ್ ಡಿ. ಶೆಟ್ಟಿಗಾರ್.

ಗಮನಸೆಳೆದ ಕಸೂತಿ ಕಲಾಕೃತಿ ಪ್ರದರ್ಶನ

ಶ್ರೀ ವರಮಹಾಲಕ್ಷ್ಮೀ ಸಮಿತಿಯ ಮಹಿಳಾ ಸದಸ್ಯರು ತಮ್ಮ ಹಸ್ತಕೌಶಲ್ಯದಲ್ಲಿ ಮೂಡಿಸಿದ ಕಸೂತಿ ಕಲಾಕೃತಿಯನ್ನು ಸಭಾಂಗಣದ ಹೊರ ಅವರಣದಲ್ಲಿ ಪ್ರದರ್ಶಿಸಿ ಸರ್ವರ ಮೆಚ್ಚುಗೆಗೆ ಪಾತ್ರರಾದರು. ಕಲಾಕೃತಿ ರಚಿದವರು ಶ್ರೀಮತಿಯರಾದ ಲತಾ ಸುರೇಶ್ ಹೆಗ್ಡೆ, ಸುವರ್ಣ ಸತೀಶ್ ಪೂಜಾರಿ, ಅರುಣಾ ಜಗದೀಶ್ ಶೆಟ್ಟಿ, ವನಜ ವಿಜಯ ಪೂಜಾರಿ, ದಿವ್ಯ ಪ್ರಕಾಶ್, ಛಾಯ ಲಕ್ಷ್ಮಣ್, ಮಮ್ತಾ ರವಿ, ದೀಪ ಜಗ್ಗನ್ನಾಥ್, ಅರ್ಚನ ಬಿ. ರೈ ಮತ್ತು ಶ್ರೀ ಜಯಾನಂದ್ ಪಕ್ಕಳ.

ವಿಶೇಷ ಆಮಂತ್ರಿತ ಯಕ್ಷಗಾನ ಮಹಿಳಾ ಭಾಗವತರು ಮತ್ತು ಚೆಂಡೆ ಮದ್ದಲೆ ವಾದಕರಿಗೆ ಸನ್ಮಾನ ಗೌರವ

ತುಳುನಾಡಿನಿಂದ ವಿಶೇಷ ಆಮಂತ್ರಿತರಾಗಿ ಆಗಮಿಸಿದ್ದ ಮಹಿಳಾ ಭಾಗವತರಾದ ಕು| ಕಾವ್ಯಾಶ್ರೀ ಅಜೇರು, ಮಹಿಳಾ ಚೆಂಡೆ ಮದ್ದಲೆ ವಾದಕರಾದ ಕು| ದಿವ್ಯಶ್ರೀ ಸುಳ್ಯ ಮತ್ತು ಚೆಂಡೆ ಮದ್ದಲೆ ಯುವಕಲಾವಿದ ಕು| ಮಯೂರ ನಾಯ್ಗ ಇವರುಗಳನ್ನು ಶಾಲು ಹೊದಿಸಿ ಪುಷ್ಪಗುಛ್ಛ, ಫಲ, ಸ್ಮರಣಿಕೆ, ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು. ಸನ್ಮಾನ ಪ್ರಕ್ರಿಯೆಯಲ್ಲಿ ಗಣ್ಯ ಉದ್ಯಮಿಗಳು ಶ್ರೀಯುತರುಗಳಾದ ಪ್ರವೀಣ್ ಕುಮಾರ್ ಶೆಟ್ಟಿ, ಚೆತನ್ ಶೆಟ್ಟಿ, ಹರೀಶ್ ಬಂಗೇರಾ, ನಿರಂಜನ್, ಪಾಲ್ಗೊಂಡಿದ್ದರು. ಸನ್ಮಾನ ಪತ್ರವನ್ನು ಶ್ರೀ ಗಣೇಶ್ ರೈ ವಾಚಿಸಿದರು.

ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿಜೇತರಿಗೆ ಪ್ರಶಸ್ತಿ ವಿತರಣೆ

ವಿವಿಧ ವಿಭಾಗದಲ್ಲಿ ಸ್ಪರ್ಧಿಸಿ ಜಯ ಗಳಿಸಿದ ವಿಜೇತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು ಶ್ರೀಯುತರುಗಳಾದ ಸರ್ವೋತ್ತಮ ಶೆಟ್ಟಿ, ದಿನೇಶ್ ಶೆಟ್ಟಿ, ಗಣೇಶ್ ರೈ, ಬಾಲಕೃಷ್ಣ ಸಾಲಿಯಾನ್, ಸತೀಶ್ ಉಳ್ಳಾಲ್ ಪಾಲ್ಗೊಂಡಿದ್ದರು.

ಭಕ್ತಿ ಸಂಗೀತ ನಡೆಸಿಕೊಟ್ಟ ಶ್ರೀಮತಿ ಮಧುರಾ ಹಾಗೂ ಸಂಗೀತ ಮತ್ತು ತಂಡದ ಕಲಾವಿದರನ್ನು ಮತ್ತು ಕಸೂತಿ ಕಲಾ ಪ್ರದರ್ಶನದ ಜವಬ್ಧಾರಿಯನ್ನು ವಹಿಸಿದ ಶ್ರೀಮತಿ ಮಮ್ತಾ ರವರನ್ನು ಶ್ರೀಮತಿ ಸುವರ್ಣ ಸತೀಶ್ ಸನ್ಮಾನಿಸಿ ಗೌರವಿಸಿದರು.

ಶ್ರೀಮತಿ ಸತೀಶ್ ಸುವರ್ಣ ರವರಿಗೆ ಸನ್ಮಾನ ಗೌರವ

ಶ್ರೀ ವರಮಹಾಲಕ್ಷ್ಮೀ ಸಮಿತಿಯ ಪ್ರಾರಂಭದ ವರ್ಷಗಳಿಂದ ಇಲ್ಲಿಯವರೆಗೆ ಮುಖ್ಯ ಸಂಘಟಕರಾಗಿ ಪೂಜಾ ಜವಬ್ಧಾರಿಯನ್ನು ವಹಿಸಿಕೊಂಡು 80 ಕಿಂತಲೂ ಹೆಚ್ಚು ಸುಮಂಗಲೆಯರ ಜೊತೆಗೂಡಿಸಿ ಪ್ರತಿವರ್ಷವೂ ಯಶಸ್ವಿಯಾಗಿ ಜವಬ್ಧಾರಿಯನ್ನು ನಿರ್ವಹಯಿಸಿದ ಶ್ರೀಮತಿ ಸುವರ್ಣ ಸತೀಶ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಪ್ರಕ್ರಿಯೆಯಲ್ಲಿ ಶ್ರೀಮತಿ ಉಷಾ ಸರ್ವೊತ್ತಮ್ ಶೆಟ್ಟಿಯವರು ಪಾಲ್ಗೊಂಡಿದ್ದು ಗಣೇಶ ರೈಯವರು ವರಮಹಾಲಕ್ಷ್ಮೀ ಹೆಜ್ಜೆಗುರುತನ್ನು ಸಭೆಗೆ ಪರಿಚಯಿಸಿ, ಸನ್ಮಾನ ಪತ್ರವನ್ನು ವಾಚಿಸಿ ಹಸ್ತಾಂತರಿಸಿದರು.

ಶ್ರೀ ರಾಜೇಶ್ ಕುತ್ತಾರ್ ದಿನಪೂರ್ತಿ ನಡೆದ ಕಾರ್ಯಕ್ರಮವನ್ನು ಅತ್ಯಂತ ಸೊಗಸಾಗಿ ನಿರೂಪಿಸಿದರು.

ವಿಜೃಂಬಣೆಯ ಪೂಜಾ ಯಶಸ್ಸಿನ ಹಿಂದಿನ ಗುಟ್ಟು

ಪೂಜಾ ಪ್ರಾರಂಭದ ಹಂತದಿಂದ ಮುಕ್ತಾಯದ ಹಂತದವರೆಗೆ ಸುಮಂಗಲೆಯರು ತಮಗೆ ವಹಿಸಿಕೊಟ್ಟಿದ್ದ ಜವಬ್ಧಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದ್ದು, ಎಲ್ಲ ಸುಂಗಲೆಯರು ಒಂದೇ    ವರ್ಣದ ಜರಿ ಸೀರೆಯನ್ನುಟ್ಟು ಅಭರಣಗಳೊಂದಿಗೆ ಪತಿವೃತಾ ಧರ್ಮದ ಲಕ್ಷಣಗಳನ್ನು ಸಮರ್ಪಕವಾಗಿ ಉಳಿಸಿಕೊಂಡ್ಡಿದ್ದರು.  ಮಾಂಗಲ್ಯಧಾರಿಣಿಗಳಾದ ಸುಮಂಗಲೆಯರಲ್ಲಿ ಮೂಡಿಬಂದಿದ್ದ ಭಕ್ತಿ, ಶಿಸ್ತು, ಸಂಯಮ, ಕಾರ್ಯ ಚಟುವಟಿಕೆಗಳಲ್ಲಿ ಇದ್ದ ಶೃದ್ಧೆ, ನಗುಮೊಗದ ಅತಿಥಿ ಸತ್ಕಾರ, ಇವೆಲ್ಲವೂ ಮಹಿಳೆಯರೇ ಅತ್ಯುತ್ತಮವಾಗಿ ಆಚರಿಸಿದ ಕಾರ್ಯಕ್ರಮದ ಯಶಸ್ಸಿನ ಹಿಂದಿನ ಗುಟ್ಟು. ಕಾರ್ಯಕಾರಿ ಸಮಿತಿಯ ಮಹಿಳಾ ಸದಸ್ಯರೊಂದಿಗೆ ಅವರ ಪತಿಯವರು ಸಹ ವಿವಿಧ ವಿಭಾಗಳಲ್ಲಿ ಜವಬ್ಧಾರಿಯನ್ನು ವಹಿಸಿಕೊಂಡು ಪೂಜಾ ಕಾರ್ಯದ ಯಶಸ್ಸಿನಲ್ಲಿ ಬೆಂಬಲ ನೀಡಿದರು.

ಯು.ಎ.ಇ. ವಿವಿಧ ಭಾಗಗಳಿಂದ ಆಗಮಿಸಿದ ಹಲವಾರು ಗಣ್ಯರು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯಲ್ಲಿ ಅಹ್ವಾನಿತ ಭಕ್ತಬಂಧುಗಳು ಅನಂದಪರವಶರಾದರು. ಕೊನೆಯಲ್ಲಿ ತೀರ್ಥಪ್ರಸಾದ, ಸುಮಂಗಲೆಯರು, ಬಾಗಿನ, ಸರ್ವರು ಮಹಾಪ್ರಸಾದವನ್ನು ಸೀಕರಿಸಿದರು.

“ಸರ್ವೇ ಜನಾ: ಸುಖಿನೋ ಭವಂತು”
ಬಿ. ಕೆ. ಗಣೇಶ್ ರೈ – ಯು.ಎ.ಇ.

Click here for Photo Album

Leave a Reply

Please enter your comment!
Please enter your name here