ದುಬಾೈ ಬಿಸಿಎಫ್‍ನಿಂದ ವಿದ್ಯಾರ್ಥಿ ವೇತನ ಹಾಗೂ ವೀಲ್‍ಚಯರ್ ವಿತರಣಾ ಸಮಾರಂಭ

ಆರ್ಥಿಕವಾಗಿ ಹಿಂದುಳಿದಿರುವ ಕೌಟುಂಬಿಕ ಹಿನ್ನಲೆಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿದುಬಾೈನ ಬ್ಯಾರೀಸ್‍ಕಲ್ಚರಲ್ ಫೋರಂ (ಬಿಸಿಎಫ್) ಕಳೆದ ಹದಿಮೂರು ವರ್ಷಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಿದ್ದು, ಈ ವರ್ಷ ಪಿಯುಸಿಯಿಂದ ಸ್ನಾತಕೋತ್ತರ ಪದವಿಯತನಕದ ಸುಮಾರು600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಕಾರ್ಯಕ್ರಮವನ್ನು ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನ ಲೊಯೊಲಾ ಸಭಾಂಗಣದಲ್ಲಿ ಅಗಸ್ಟ್ 23 ರಂದು ನಡೆಯಲಿದೆ. ಈ ಸಂದರ್ಭದಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡಜಿಲ್ಲೆಯ ಸುಮಾರು 60 ಅಂಗವಿಕಲ ವ್ಯಕ್ತಿಗಳಿಗೆ ಗಾಲಿ ಕುರ್ಚಿಗಳನ್ನುಉಚಿತವಾಗಿ ವಿತರಿಸಲಾಗುವುದು.

ದಿನಾಂಕ 23-08-2015ರಂದು ಬೆಳಿಗ್ಗೆ 9.00 ಗಂಟೆಗೆ Career Guidence Symposium ನಡೆಯಲಿದ್ದು.  ಈ ಕಾರ್ಯಕ್ರಮವನ್ನು ಯುಎಇ  ಲಂಡನ್‍ ಅಮೇರಿಕನ್ ಸಿಟಿ ಕಾಲೇಜಿನ ನಿರ್ದೇಶಕರಾದ ಡಾ.ಪ್ರೊ. ಕಾಪು ಮೊಹಮ್ಮದ್‍ನಡೆಸಲಿದ್ದಾರೆ ಹಾಗೂ ಅಲ್ಪಸಂಖ್ಯಾತರಿಗೆ ದೊರಕುವ ಸ್ಕಾಲರ್‍ಶಿಪ್ ಬಗ್ಗೆ ಮಂಗಳೂರು ಟ್ಯಾಲೆಂಟ್‍ ರಿಸರ್ಚ್ ಫೌಂಡೇಶನ್‍ನ ಅಧ್ಯಕ್ಷ ರಿಯಾಝ್‍ ಅಹಮ್ಮದ್‍ಮಾಹಿತಿ ನೀಡಲಿದ್ದಾರೆ.

ಮದ್ಯಾಹ್ನ 1.30ಕ್ಕೆ ಬಿಸಿಎಫ್ ಶೈಕ್ಷಣಿಕ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವು ನಡೆಯಲಿದ್ದು ಅಲ್‍ಹಾಜ್‍ಕೆ.ಎಸ್. ಆಟಕೋಯ ತಂಙಳ್‍ರವರು ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಮಾನ್ಯಆರೋಗ್ಯ ಸಚಿವರಾದ ಯು.ಟಿ. ಖಾದರ್ ನಡೆಸಲಿದ್ದಾರೆ. ಮುಖ್ಯ ಪ್ರಭಾಷಣಕಾರರಾಗಿ ಡಾ. ಮೋಹನ್ ಆಳ್ವ, ಚೆಯರ್‍ಮ್ಯಾನ್ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಮೂಡಬಿದ್ರೆ, ಹಸನ್‍ದರ್‍ವೇಶ್, ಚೆಯರ್‍ಮ್ಯಾನ್‍ದರ್‍ವೇಶ್‍ಗ್ರೂಪ್‍ಯುಎಇ, ಫಿಝ್ಝಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಬಿ.ಎಂ. ಫಾರೂಕ್ ಹಾಗೂ ಬ್ಯಾರೀಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಸೈಯ್ಯದ್ ಬ್ಯಾರಿರವರು ಭಾಗವಹಿಸಲಿದ್ದಾರೆ. ಸಮಾರಂಭದಅಧ್ಯಕ್ಷತೆಯನ್ನು ಬಿಸಿಎಫ್ ಅಧ್ಯಕ್ಷಡಾ.ಬಿ.ಕೆ ಯೂಸುಫ್ ವಹಿಸಲಿದ್ದಾರೆ.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬಿ.ರಮಾನಾಥರೈ, ಅರಣ್ಯ ಹಾಗೂ ಪರಿಸರ ಸಚಿವರುಕರ್ನಾಟಕ ಸರಕಾರ. ವಿನಯಕುಮಾರ್ ಸೊರಕೆ ನಗರಾಭಿವೃದ್ಧಿ ಸಚಿವರುಕರ್ನಾಟಕ ಸರಕಾರ, ಮಂಗಳೂರು ಲೋಕಸಭಾ ಸದಸ್ಯರಾದ ನಳಿನ್ ಕುಮಾರ್‍ಕಟೀಲ್, ಮೊೈದೀನ್ ಬಾವ ಶಾಸಕರು ಮಂಗಳೂರು ಉತ್ತರ ವಲಯ, ಜೆ.ಆರ್ ಲೋಬೊ, ಶಾಸಕರು ಮಂಗಳೂರು ದಕ್ಷಿಣ ವಲಯ, ಕ್ಯಾ. ಗಣೇಶ್‍ಕಾರ್ಣಿಕ್ ಎಮ್‍ಎಲ್‍ಸಿ ಕರ್ನಾಟಕ ಸರಕಾರ, ಐವನ್‍ಡಿಸೋಜಾ ಎಮ್‍ಎಲ್‍ಸಿ ಕರ್ನಾಟಕ ಸರಕಾರ, ಎ.ಬಿ. ಇಬ್ರಾಹಿಂಜಿಲ್ಲಾಧಿಕಾರಿದ.ಕ. ಜಿಲ್ಲೆ, ಡಾ. ಎಮ್. ವಿಜಯಕುಮಾರ್ ಉಪಕುಲಪತಿಗಳು ಯೆನೆಪೋಯಯುನಿವರ್ಸಿಟಿ, ಡಾ. ತುಂಬೆ ಮೊೈದಿನ್ ಅಧ್ಯಕ್ಷರುಗಲ್ಫ್ ಮೆಡಿಕಲ್‍ಯುನಿವರ್ಸಿಟಿ, ಝಕರಿಯಾಜೋಕಟ್ಟೆ ಮುಝೈನ್‍ಗ್ರೂಪ್ ಸೌದಿ ಅರೇಬಿಯಾ, ಎಸ್.ಎಮ್. ಶರೀಫ್, ಖುಶಿ ಗ್ರೂಪ್‍ದುಬಾೈ, ಬಿ.ಎ. ಮೊೈದಿನ್ ಮಾಜಿ ಶಿಕ್ಷಣ ಸಚಿವರುಕರ್ನಾಟಕ ಸರಕಾರ, ಇಬ್ರಾಹಿಮ್‍ಕೋಡಿಜಾಲ್ ಮೂಡಾ ಅಧ್ಯಕ್ಷರು, ಎಸ್.ಎಮ್.ರಶೀದ್ ಜಿಲ್ಲಾ ವಕ್ಫ್‍ಅಧ್ಯಕ್ಷರು, ಬಿ.ಮೊಹಮ್ಮದ್ ಹನೀಫ್‍ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು, ಅಬ್ದುಸ್ಸಲಾಮ್ ಪುತ್ತಿಗೆ, ಕೆ ಮೊಹಮ್ಮದ್ ಹಾರಿಸ್, ಅಬ್ದುಲ್‍ರವೂಫ್ ಪುತ್ತಿಗೆ, ಹಮೀದ್‍ಕಂದಕ್, ಮೊಹಮ್ಮದ್ ಬ್ಯಾರಿ, ಅಬೂಬಕ್ಕರ್ ಸಜಿಪ, ಎಮ್.ಬಿ. ನೂರ್ ಮುಹಮ್ಮದ್ ಮುಲ್ಕಿ ಉಪಸ್ಥಿತರಿದ್ದು ಶುಭ ಹಾರೈಸಲಿದ್ದಾರೆ.

ಈ ಸಂದರ್ಭದಲ್ಲಿ ಜ| ಹಸನ್‍ದರ್‍ವೇಶ್ ಮತ್ತುಎಸ್ ಎಂ ಶರೀಫ್‍ಖುಶಿ ಗ್ರೂಪ್‍ರವರಿಗೆಅSಖ ವಿಶೇಷ ಪ್ರಶಸ್ತಿ ಹಾಗೂಕೆ.ಎಸ್. ಸಯೀದ್‍ಕರ್ನಿರೆರವರಿಗೆ“ಸ್ಟಾರ್ಸ್‍ಆಫ್ ಬ್ಯಾರೀಸ್ 2015” ಪ್ರಶಸ್ತಿಯನ್ನು ನೀಡಲಾಗುವುದು.ಪಿಯುಸಿ ಯ ಮೂರು ವಿಭಾಗಗಳಲ್ಲಿ ಜಿಲ್ಲೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಕ್ರೀಡಾಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದ ಇಬ್ಬರು ಕ್ರೀಡಾಪಟುಗಳನ್ನು ಅಭಿನಂದಿಸಲಾಗುವುದು.

ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸುವವರು

ಡಾ. ಬಿ.ಕೆ. ಯೂಸುಫ್ (ಅಧ್ಯಕ್ಷರು ಬ್ಯಾರೀಸ್‍ಕಲ್ಚರಲ್ ಫೋರಂ, ದುಬಾೈ), ಉಸ್ಮಾನ್ ಮೂಳೂರು (ಅಧ್ಯಕ್ಷರು, ಬಿಸಿಎಫ್ ಸ್ಕಾಲರ್‍ಶಿಫ್ ಕಮಿಟಿ, ದುಬಾೈ), ಎಮ್. ಇ. ಮೂಳೂರು (ಉಪಾಧ್ಯಕ್ಷರು ಬ್ಯಾರೀಸ್‍ಕಲ್ಚರಲ್ ಫೋರಂ, ದುಬಾೈ), ಅಫೀಖ್ ಹುಸೈನ್(ಉಪಾಧ್ಯಕ್ಷರು ಬ್ಯಾರೀಸ್‍ಕಲ್ಚರಲ್ ಫೋರಂ, ದುಬಾೈ), ಬಿ.ಎಂ. ಮಮ್ತಾಝ್ ಅಲಿ (ಪೋಷಕರು, ಬ್ಯಾರೀಸ್‍ಕಲ್ಚರಲ್ ಫೋರಂ, ದುಬಾೈ), ಬಿ.ಎ. ನಝೀರ್ (ಕಾರ್ಯಕ್ರಮಸಂಯೋಜಕರು, ಬ್ಯಾರೀಸ್‍ಕಲ್ಚರಲ್ ಫೋರಂ, ದುಬಾೈ)

Leave a Reply

Please enter your comment!
Please enter your name here