ದೆಹಲಿ: ಪಿ.ಕೆ.ಯಶವಂತರನ್ನು ಬಿಡುಗಡೆ; ದೆಹಲಿ ಕರ್ನಾಟಕ ಸಂಘದಿಂದ ಪಾಕಿಸ್ತಾನ ರಾಯಭಾರಿ,  ಸಚಿವರಿಗೆ ಮನವಿ

ದೆಹಲಿ: ಕೊಡಗು ಮೂಲದ ಕರ್ನಾಟಕದ ಪಿ.ಕೆ. ಯಶವಂತರವರು ಅಪಹರಣವಾಗಿ, ಪ್ರಸ್ತುತವಾಗಿ ಪಾಕಿಸ್ತಾನದ ಲಾಹೋರ್ ಜೈಲಿನಲ್ಲಿ ಬಂಧಿತರಾಗಿದ್ದಾರೆ. ಸಂಬಂಧವಾಗಿ ಪಾಕಿಸ್ತಾನದ ರಾಯಭಾರಿಯಾಗಿರುವಂತಹ  ಅಬ್ದುಲ್ ಬಾಸಿಟ್‍ರವರನ್ನು ದೆಹಲಿ ಕರ್ನಾಟಕ ಸಂಘದ ಕಾರ್ಯಕಾರಿ ಸಮಿತಿಯವರು ಪೋಷಕರೊಡನೆ (ಶ್ರೀಮತಿ ಮೀನಾಕ್ಷಿ ಹಾಗೂ ಶ್ರೀ ಕುಶಾಲಪ್ಪ) ಭೇಟಿಯಾದರು.

03-03-2016-delhi-pakistan

ಮೂಲತಃ ಕರ್ನಾಟಕದ ನಿವಾಸಿಯಾಗಿರುವ ಪಿ. ಕೆ. ಯಶವಂತರವರ ಪೋಷಕರಿಗೆ ಸಾಂತ್ವನ ಹೇಳಿದ ಪಾಕಿಸ್ತಾನದ ರಾಯಭಾರಿ ಅಬ್ದುಲ್ ಬಾಸಿಟ್ ಅವರು ಸಾಧ್ಯವಾದಷ್ಟು  ಬೇಗ ಯಶವಂತರನ್ನು ಭಾರತಕ್ಕೆ ಕರೆತರುವ ಭರವಸೆ ನೀಡಿದ್ದಾರೆ. ಮಾನವೀಯತೆಯ ದೃಷ್ಟಿಕೋನದಿಂದ ಇದೊಂದು ದುರಂತ ಎಂದ ಅವರು ಪಾಕಿಸ್ತಾನÀ ಸರಕಾರದ ಸಂಬಂಧಪಟ್ಟ ಇಲಾಖೆಗೆ ಈ ಬಗ್ಗೆ ತಿಳಿಸಿ ಶೀಘ್ರ ಬಿಡುಗಡೆಗೆ ಆಗ್ರಹಿಸುವುದಾಗಿ ಭರವಸೆ ನೀಡಿದ್ದಾರೆ. ಭಾರತ ಸರಕಾರ ಬೇಕಾದ ಮಾಹಿತಿ ಮತ್ತು ದಾಖಲೆಗಳನ್ನು ನೀಡಿದಾಗ ಇದು ಸಾಧ್ಯವಾಗುವುದು ಎಂದರು.

ಈ ಸಂದರ್ಭದಲ್ಲಿ ದೆಹಲಿ ಕರ್ನಾಟಕ ಸಂಘದ ಈ ಪ್ರಯತ್ನವನ್ನೂ ಕೂಡಾ ಬಾಸಿಟ್ ಅವರು ಶ್ಲಾಘಿಸಿದ್ದಾರೆ.

ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರಾದÀ  ಸದಾನಂದಗೌಡ ಅವರನ್ನು ಭೇಟಿ ಮಾಡಿಕೂಡಲೇ ಈ ಕುರಿತು ಕರ್ನಾಟಕದ ಯಶವಂತ್‍ನನ್ನು ಬಿಡುಗಡೆ ಮಾಡಿಸಿ ಭಾರತಕ್ಕೆ ತರುವಲ್ಲಿ ತ್ವರಿತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಯಿತು. ನಾಳೆಯೇ ವಿದೇಶಾಂಗ ಖಾತೆ ಸಚಿವರಾದ ಶ್ರೀಮತಿ ಸುಷ್ಮಾ ಸ್ವರಾಜ್ ಅವರನ್ನು ಭೇಟಿಯಾಗಿ ಎಲ್ಲಾ ಮಾಹಿತಿಯನ್ನು ನೀಡಿ ಬಿಡುಗಡೆಗೆ ಬೇಕಾದ ಎಲ್ಲಾ ಕೆಲಸಗಳನ್ನು ಆದಷ್ಟು ಬೇಗ ಮಾಡುವಂತೆ ವಿನಂತಿಸಲಾಗುವುದೆಂದು ಸದಾನಂದಗೌಡ ಅವರು ಭರವಸೆ ನೀಡಿದರು.

ಈ ಭೇಟಿಯ ಸಂದರ್ಭದ ನಿಯೋಗದಲ್ಲಿ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ವಸಂತ ಶೆಟ್ಟಿ ಬೆಳ್ಳಾರೆ, ಪ್ರಧಾನ ಕಾರ್ಯದರ್ಶಿ  ಸಿ.ಎಂ.ನಾಗರಾಜ, ಜಂಟೀ ಕಾರ್ಯದರ್ಶಿ ಟಿ.ಪಿ.ಬೆಳ್ಳಿಯಪ್ಪ, ಖಜಾಂಚಿ ಕೆ.ಎಸ್.ಜಿ.ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀ ಕೋಡಿ ರಾಧಾಕೃಷ್ಣ, ವಿ.ವಿ.ಬಿರಾದಾರ ಮತ್ತು ಸಂಘದ ಸದಸ್ಯರುಗಳಾದ ರಾಘವೇಂದ್ರ ಹೆಚ್.ಡಿ  ರೋಷನ್ ಒಳಗೊಂಡಿದ್ದರು.

ಸಾಂಸ್ಕøತಿಕ ಚಟುವಟಿಕೆಗಳನ್ನು ಹೊರತುಪಡಿಸಿ ಮಾನವೀಯತೆಯ ಮೌಲ್ಯಗಳನ್ನು ಕೂಡಎತ್ತಿ ಹಿಡಿಯುವಲ್ಲಿದೆಹಲಿ ಕರ್ನಾಟಕ ಸಂಘ ಈ ಮೂಲಕ ಯಶಸ್ವಿಯಾಗಿದೆ ಎಂದು ಸಂಘದಅಧ್ಯಕ್ಷರಾದ ಶ್ರೀ ವಸಂತ ಶೆಟ್ಟಿ ಬೆಳ್ಳಾರೆಯವರು ಹೇಳಿದರು.

Leave a Reply

Please enter your comment!
Please enter your name here