ದೇರಳಕಟ್ಟೆ: ಈದ್ ಉಲ್ ಅಝ್‍ಹಾ ಪ್ರಯುಕ್ತ ಸಿಹಿ ತಿಂಡಿ ಹಾಗೂ ಪುಸ್ತಕ ವಿತರಣೆ

ದೇರಳಕಟ್ಟೆ: ಜಮಾಅತೆ ಇಸ್ಲಾಮೀ ಹಿಂದ್, ಉಳ್ಳಾಲ ಶಾಖೆಯ ವತಿಯಿಂದ ದಿನಾಂಕ 26-09-2015 ರಂದು ಶನಿವಾರ ಈದ್ ಉಲ್ ಅಝ್‍ಹಾ ಪ್ರಯುಕ್ತ  ಸುಮಾರು 30 ಶಾಲಾ ಶಿಕ್ಷಕ ಶಿಕ್ಷಕಿಯರಿಗೆ  110 ಸಿಹಿ ತಿಂಡಿ ಬಾಕ್ಸ್ ಹಾಗೂ ಶಾಂತಿ ಪ್ರಕಾಶನದ ಕೃತಿಗಳಲ್ಲೊಂದಾದ  ಭಾರತೀಯ ಸಂಸ್ಕೃತಿಯ ಅಂತರ್ಧಾರೆಗಳು ಎಂಬ ಪುಸ್ತಕವನ್ನು ಉಡುಗೊರೆಯಾಗಿ ನೀಡಲಾಯಿತು. ಈ ಸಂಧರ್ಭದಲ್ಲಿ ಉಳ್ಳಾಲ ಜಮಾಅತೆ ಇಸ್ಲಾಮಿಯ ಉಪಾಧ್ಯಕ್ಷರಾದ ಅಬ್ದುರ್ರಹೀಮ್ ರವರು ದೇರಳಕಟ್ಟೆ ನೇತಾಜಿ ಶಾಲೆಯ ಸಂಪನ್ಮೂಲ ಶಿಕ್ಷಕಿಯಾದ ಶ್ರೀಮತಿ ದಾಕ್ಷಾಯಿಣಿಯವರಿಗೆ ನೀಡುವ ಮೂಲಕ ಉದ್ಘಾಟಿಸಿದರು.

1-eid 2-eid-001 3-eid-002 4-eid-003 5-eid-004 6-eid-005

ಇದೇ ವೇಳೆ ಹಿರಾ ಶೈಕ್ಷಣಿಕ ವಿಧ್ಯಾ ಸಂಸ್ಥೆಯ ಕಾರ್ಯದರ್ಶಿಯಾದ ಕೆ.ಮುಹಮ್ಮದ್ ರವರು ಈದ್‍ನ ಸಂದೇಶ ನೀಡುತ್ತಾ ಈಗಿನ ಹಬ್ಬಗಳ ವಾತಾವರಣವು ಕಲ್ಮಶಗೊಂಡಿದ್ದು ಪ್ರತೀಯೊಂದು ಹಬ್ಬ ಬರುವಾಗಲೂ ಭಯದ ವಾತಾವರಣವು ನಿರ್ಮಾಣವಾಗುತ್ತದೆ ಎಂದರು ಹಾಗೂ ಈ ನಿಟ್ಟಿನಲ್ಲಿ ನಮ್ಮ ಸಂಬಂಧವು ದೃಢಗೊಳ್ಳಬೇಕಿದೆ.

ಮಕ್ಕಳನ್ನು ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಬಹಳ ಉದಾತ್ತವಾದುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾತಾಡಿದ ಶಿಕ್ಷಕ ಸಂಘದ ಪದಾಧಿಕಾರಿಗಳಾದ ಶ್ರೀ ರಾಘವೇಂದ್ರ ರಾವ್ ರವರು ವಿದ್ಯಾರ್ಥಿಗಳನ್ನು ಸುಸಂಸ್ಕೃತರನ್ನಾಗಿ ಬೆಳೆಸುವಲ್ಲಿ ಪೋಷಕರ ಸಹಕಾರ ಹಾಗೂ ಪಾತ್ರ ಬಹಳ ಮುಖ್ಯವಾದುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಕಾರ್ಯದರ್ಶಿ ಅಬ್ದುಲ್ ಕರೀಮ್, ಕಾರ್ಯಕರ್ತರಾದ ಅಬ್ದುಲ್ ಸಲಾಮ್ ದೇರಳಕಟ್ಟೆ, ಹಿದಾಯತುಲ್ಲ ಉಪಸ್ಥಿತರಿದ್ದರು ಹಾಗೂ ಕೊಣಾಜೆ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಸುಗುಣ ಟೀಚರ್, ಮುನ್ನೂರು ಶಾಲೆಯ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಗೀತಾ ಟೀಚರ್ ಭಾಗವಹಿಸಿದರು ಎಂದು ಪ್ರಕಟನೆ ತಿಳಿಸಿದೆ.

Leave a Reply

Please enter your comment!
Please enter your name here