ದೇವಸ್ಥಾನ ಕಳ್ಳತನ ; ಐದು ಅಂತರಾಜ್ಯ ಕಳ್ಳರ ಬಂಧನ

ದೇವಸ್ಥಾನ ಕಳ್ಳತನ ; ಐದು ಅಂತರಾಜ್ಯ ಕಳ್ಳರ ಬಂಧನ

ಮಂಗಳೂರು: ಕಳೆದ 6 ತಿಂಗಳಿನಲ್ಲಿ ಜಿಲ್ಲೆಯ 10 ದೇವಸ್ಥಾನಗಳಲ್ಲಿ ನಡೆದ ದರೋಡೆ ಪ್ರಕರಣವನ್ನು ಡಿಸಿಐಬಿ ನೇತ್ರತ್ವದ ಪೋಲಿಸ್ ತಂಡ ಬೇಧಿಸಿದ್ದು ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿ ಅಂತರ್ ರಾಜ್ಯ ಚೋರರನ್ನು ಮುಂಬೈನ ಥಾನಾ ಎಂಬಲ್ಲಿ ಬಂಧಿಸಿದ್ದಾರೆ.

ಬಂಧಿತರನ್ನು ಹೊನ್ನಾವರ ತಾಲೂಕಿನ ಚಂದ್ರಕಾಂತ ಪೂಜಾರಿ (36), ಬೆಂಗಳೂರಿನ ನರಸಿಂಹ ರಾಜು (38), ಮಹಾರಾಷ್ಟ್ರದ ನವೀನ್ ಚಂದ್ರ (21), ವಿಜಯ್ ಸುರೇಶ್ ಬೋನ್ಲೆ (35), ವಿಶಾಲ್ ಪೋನ್ಕೆ (21) ಎಂದು ಗುರುತಿಸಲಾಗಿದೆ.

police image001temple-theft-case-20160926-001 image002temple-theft-case-20160926-002 image003temple-theft-case-20160926-003 image004temple-theft-case-20160926-004 image005temple-theft-case-20160926-005 image006temple-theft-case-20160926-006 image007temple-theft-case-20160926-007 image008temple-theft-case-20160926-008 image009temple-theft-case-20160926-009

ಈ ಕುರಿತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಭೂಷಣ್ ಜಿ ಭೋರಸೆ ಮಾತನಾಡಿದ ಅವರು ಆರೋಪಿಗಳಿಂದ 22 ಕೆಜಿ ಬೆಳ್ಳಿ ಹಾಗೂ 75 ಗ್ರಾಂ ಚಿನ್ನವನ್ನು ಸೇರಿದಂತೆ 12.5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಕಾಡೂ ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಅನೇಕ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಜೈಲು ಶಿಕ್ಷೆ ಅನುಭವಿಸದವರಾಗಿದ್ದಾರೆ. ಆರೋಪಿಗಳ ಪೈಕಿ ಚಂದ್ರಕಾಂತ ಪೂಜಾರಿ ವಿರುದ್ದ ಮುಂಬೈ, ಉಡುಪಿ, ಕುಂದಾಪುರ, ಚಿತ್ರದುರ್ಗ ಮೊದಲಾದ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದೆ. ನರಸಿಂಹ ರಾಜು ಯಾನೆ ಬಸವರಾಜು ಪದವೀಧರನಾಗಿದ್ದು, ಬೆಂಗಳೂರಿನ ರಾಜಾನುಕುಂಟೆ, ಚಿಕ್ಕಪೇಟೆ, ಉಡುಪಿಯ ಪೆರ್ಡೂರು, ಕಾರ್ಕಳ ಮೊದಲಾದ ಕಡೆಗಳಲ್ಲಿ ಕಳ್ಳತನ ಮಾಡಿ ಜೈಲು ಅನುಭವಿಸಿದ್ದಾನೆ.

ಉಳ್ಳಾಲ್ತಿ ಆಮ್ಮನವರ ದೇವಸ್ಥಾನ, ನೂಜಿ, ರೆಂಜಿಲಾಡಿ, ಪುತ್ತೂರು ತಾಲೂಕು ಕಳ್ಳತನ ಮಾಡಿ ವಾಪಾಸ್ಸು ಹೋಗುತ್ತಿದ್ದಾಗ ಬೆಂಗಳೂರಿನಲ್ಲಿ ಕಾರು ಅಫಘಾತಕ್ಕೆ ಒಳಗಾಗಿ ಇನ್ನೊಬ್ಬ ಪ್ರಮುಖ ಆರೋಪಿ ಪ್ರಕಾಶ್ ಎಂಬಾತನು ಮೃತಪಟ್ಟಿರುವುದಾಗಿದೆ.

ಸದರಿ ಪತ್ತೆ ಕಾರ್ಯದಲ್ಲಿ ಡಾ ಸಿ ಬಿ ವೇದಮೂರ್ತಿ, ಹೆಚ್ಚುವರಿ ಪೋಲಿಸ್ ಅಧಿಕ್ಷಕರು, ರಿಷ್ಯಂತ್ ಎಎಸ್ ಪಿ ಪುತ್ತೂರು, ಗೌರೀಶ್ ಡಿವೈಎಸ್ ಪಿ ಬೆರಳಚ್ಚು ವಿಭಾಗ, ಅಮಾನುಲ್ಲಾ ಪಿಐಡಿಸಿಐಬಿ, ಅನಿಲ್ ಕುಲಕರ್ಣಿ, ಸಿಪಿಐ ಪುತ್ತೂರು ಗ್ರಾಮಾಂತರ, ಉದಯ ರೈ, ಇಕ್ಬಾಲ್ ಎಇ, ತಾರಾನಾಥ ಎಸ್, ಲಕ್ಷ್ಮಣ್, ಪ್ರವೀಣ್ ಎಂ, ಬೆಳ್ತಂಗಡಿ, ಗಣಕಯಂತ್ರದ ಸಂಪತ್ ಕುಮಾರ್, ದಿವಾಕರ್, ಚಾಲಕರಾದ ವಾಸುನಾಯ್ಕ, ವಿಜಯಗೌಡ ಮತ್ತು ಹರೀಶ್ ಗೌಡ, ಶಿವರಾಮ, ಕರುಣಾಕರ ಅಲ್ಲದೆ ಬೆರಳಚ್ಚು ವಿಭಾಗದ ಸಿಬಂದಿಗಳು ಭಾಗವಹಿಸುತ್ತಾರೆ.

ಪ್ರಕರಣವನ್ನು ಭೇದಿಸುವಲ್ಲಿ ಶ್ರಮಿಸಿದ ಅಧಿಕಾರಿಗಳು ಸಿಬಂಧಿಗಳನ್ನು ಹಿರಿಯ ಪೋಲಿಸ್ ಅಧೀಕಾರಿಗಳು ಪ್ರಶಂಸೆ ನಗದು ಬಹುಮಾನವನ್ನು ಘೋಷಿಸಿದ್ದಾರೆ.

Leave a Reply

Please enter your comment!
Please enter your name here