ದೋಣಿ ಅವಘಡದಲ್ಲಿ ಗಾಯಗೊಂಡ ಮೀನುಗಾರರಿಗೆ ಸಚಿವರಿಂದ ಸಾಂತ್ವನ

ದೋಣಿ ಅವಘಡದಲ್ಲಿ ಗಾಯಗೊಂಡ ಮೀನುಗಾರರಿಗೆ ಸಚಿವರಿಂದ ಸಾಂತ್ವನ
ಉಡುಪಿ : ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್‍ರವರು ಇಂದು ಬೆಳಗ್ಗೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮೀನುಗಾರಿಕೆ ದೋಣಿ ಅವಘಡದಲ್ಲಿ ಗಾಯಗೊಂಡ ಮೀನುಗಾರರಿಗೆ ಧೈರ್ಯ ತುಂಬಿದರು.

fishermen-rescue-csp-20160906-02 fishermen-rescue-csp-20160906-03 fishermen-rescue-csp-20160906-04 fishermen-rescue-csp-20160906-05 fishermen-rescue-csp-20160906-06 fishermen-rescue-csp-20160906-07 fishermen-rescue-csp-20160906-08 fishermen-rescue-csp-20160906-09 fishermen-rescue-csp-20160906-10 fishermen-rescue-csp-20160906-11 fishermen-rescue-csp-20160906-13 fishermen-rescue-csp-20160906-14 fishermen-rescue-csp-20160906-15

ಭಟ್ಕಳ, ಕೋಟ, ಪಡುಕೆರೆ ಮೀನುಗಾರರು ಗಾಯಗೊಂಡಿದ್ದು, ಅವಘಡದ ಸಂದೇಶ ತಲುಪಿದ ತಕ್ಷಣ, ಕೋಸ್ಟಲ್ ಸೆಕ್ಯೂರಿಟಿ ಪೊಲೀಸ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿತ್ತು ಎಂದು ಸಚಿವರು ತಿಳಿಸಿದರು.

ಸಂಬಂಧಪಟ್ಟ ಅಧಿಕಾರಿಗಳು ಉತ್ತಮವಾಗಿ ಸ್ಪಂದಿಸಿದ್ದು, ವಿಶೇಷವಾಗಿ ಮಲ್ಪೆ ಎಸ್‍ಐ ಅವರನ್ನು ಸಚಿವರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ ವೆಂಕಟೇಶ್, ಇದ್ದರು.

Leave a Reply