ದ.ಕ ಜಿಲ್ಲಾ ನೂತನ ಎಸ್ಪಿಯಾಗಿ ಭೂಷಣ್ ಗುಲಾಬ್ ರಾವ್ ಬೊರಸೆ ಅಧಿಕಾರ ಸ್ವೀಕಾರ

ಮಂಗಳೂರು: ದ.ಕ ಜಿಲ್ಲಾ ನೂತನ ಎಸ್ಪಿಯಾಗಿ ಭೂಷಣ್ ಗುಲಾಬ್ ರಾವ್ ಬೊರಸೆ ಸೋಮವಾರ ನಿರ್ಗಮನೆ ಎಸ್ಪಿ ಡಾ ಎಸ್ ಡಿ ಶರಣಪ್ಪ ಅವರಿಂದ ಅಧಿಕಾರ ಸ್ವೀಕರಿಸಿದರು.

image005Ibhushan-borase-20160523-005 image004Ibhushan-borase-20160523-004 image002Ibhushan-borase-20160523-002 image003Ibhushan-borase-20160523-003 image007Ibhushan-borase-20160523-007 image008Ibhushan-borase-20160523-008 image006Ibhushan-borase-20160523-006

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್ಪಿ ಗುಲಾಬ್ ರಾವ್ ಬೊರಸೆ ಅವರು ಮಂಡ್ಯದಲ್ಲಿ ಎಸ್ಪಿಯಾಗಿದ್ದ ಸಂದರ್ಭದಲ್ಲಿ ವಾರಸುದಾರರಿಲ್ಲದೆ ಇರುವ ವಾಹನಗಳನ್ನು ಪತ್ತೆ ಹಚ್ಚಲು ಮಾಡಿದ್ದ ಸಾಫ್ಟ್ ವೇರನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ರಾಜ್ಯದಲ್ಲಿ ಅಳವಡಿಸಲು ಪೋಲಿಸ್ ಇಲಾಖೆ ಚಿಂತನೆ ನಡೆಸಿದೆ ಎಂದರು. ನಿರ್ಗಮನ ಎಸ್ಪಿ ಶರಣಪ್ಪ ಜಿಲ್ಲೆಯಲ್ಲಿ ಉತ್ತಮ ಕಾರ್ಯ ಮಾಡಿದ್ದು ಅದನ್ನು ಮುಂದುವರೆಸಲಾಗುವುದು ಎಂದರು.

ಜಿಲ್ಲೆಯ ಜನರು ನೇರವಾಗಿ ತಮ್ಮ ಕುಂದುಕೊರತೆಗಳನ್ನು ತನ್ನ ಗಮನಕ್ಕೆ ತರುವ ಸಲುವಾಗಿ ವಾಟ್ಸ್ ಆ್ಯಪ್ ಸಂಖ್ಯೆಯನ್ನು ನೀಡಲಾಗುವುದು ಅದರ ಮೂಲಕ ದೂರುಗಳನ್ನು ಸಲ್ಲಿಸದರೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಮೂಲತಃ ಮಹಾರಾಷ್ಟ್ರದವರಾದ ಬೋರಸೆ ಅವರು 2009 ರ ಐಪಿಎಸ್ ಬ್ಯಾಚ್ ನವರಾಗಿದ್ದು, ನಿರ್ಗಮನ ಎಸ್ಪಿ ಶರಣಪ್ಪ ಅವರ ಬ್ಯಾಚ್ ಮೇಟ್ ಆಗಿದ್ದಾರೆ. ಗುಲ್ಬರ್ಗಾದಲ್ಲಿ ಎಎಸ್ಪಿಯಾಗಿ, ಮಂಡ್ಯದಲ್ಲಿ ಮೂರ ವರ್ಷ ಎಸ್ಪಿಯಾಗಿ, ಬೆಂಗಳೂರು ಸಿಐಡಿ ಎಸ್ಪಿಯಾಗಿ ಕಾರ್ಯನಿರ್ವಹಿಸಿದ ಅನುಭವ ಇವರಿಗಿದೆ.

Leave a Reply

Please enter your comment!
Please enter your name here