ದ.ಕ. ಜಿಲ್ಲಾ ಪ್ರತಿಭಾ ಕಾರಂಜಿ: ಮನುಜ ನೇಹಿಗನಿಗೆ ಮೂರು ಪ್ರಶಸ್ತಿ

ದ.ಕ. ಜಿಲ್ಲಾ ಪ್ರತಿಭಾ ಕಾರಂಜಿ: ಮನುಜ ನೇಹಿಗನಿಗೆ ಮೂರು ಪ್ರಶಸ್ತಿ

ಮಂಗಳೂರು : ದ.ಕ.ಜಿಲ್ಲಾ ಪಂಚಾಯತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ ಆಶ್ರಯದಲ್ಲಿ ಸರಕಾರಿ ಪದವಿ ಪೂರ್ವಕಾಲೇಜು ಕಾವಳಪಡೂರು, ವಗ್ಗ, ಬಂಟ್ವಾಳ ತಾಲ್ಲೂಕುಇಲ್ಲಿ ನಡೆದ ದಕ್ಷಿಣಕನ್ನಡ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ 2016ರಲ್ಲಿ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯ ಮೂರನೇ ತರಗತಿಯ ವಿದ್ಯಾರ್ಥಿ ಮನುಜ ನೇಹಿಗ ಮೂರು ಪ್ರಶಸ್ತಿಗಳನ್ನು ಪಡೆದಿರುತ್ತಾನೆ.

alvas-manuja-nheiga

ಈತ ಸ್ಪರ್ಧಿಸಿದ ಕಿರಿಯ ಪ್ರಾಥಮಿಕ ಹಂತದ ವೈಯಕ್ತಿಕ ವಿಭಾಗದಕಥೆ ಹೇಳುವುದು ಪ್ರಥಮ, ಯಕ್ಷಗಾನ ಪ್ರಥಮ ಮತ್ತು ಅಭಿನಯ ಗೀತೆಯಲ್ಲಿ ದ್ವಿತೀಯ ಪ್ರಶಸ್ತಿಯನ್ನು ಪಡೆದಿರುತ್ತಾನೆ. ಇದಕ್ಕಿಂತ ಮೊದಲು ಮೂಡುಬಿದಿರೆ ಕ್ಲಸ್ಟರ್ ಹಾಗೂ ಮಂಗಳೂರು ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಮೂರೂ ವಿಭಾಗಗಳಲ್ಲಿ ಪ್ರಥಮ ಪ್ರಶಸ್ತಿ ಪಡೆದು ಜಿಲ್ಲಾಮಟ್ಟಕ್ಕೆಆಯ್ಕೆಯಾಗಿದ್ದ.

Leave a Reply