ದ.ಕ.ಪತ್ರಕರ್ತರ ಸಂಘ-ಮಂಗಳೂರು ಪ್ರೆಸ್‍ಕ್ಲಬ್, ಪತ್ರಕರ್ತ ಚೇತನ್‍ರಾಂ ಇರಂತಕಜೆಗೆ ಶ್ರದ್ಧಾಂಜಲಿ

ದ.ಕ.ಪತ್ರಕರ್ತರ ಸಂಘ-ಮಂಗಳೂರು ಪ್ರೆಸ್‍ಕ್ಲಬ್, ಪತ್ರಕರ್ತ ಚೇತನ್‍ರಾಂ ಇರಂತಕಜೆಗೆ ಶ್ರದ್ಧಾಂಜಲಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮಂಗಳೂರು ಪ್ರೆಸ್‍ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಆಗಲಿದ ಪತ್ರಕರ್ತ, ಪ್ರಜಾವಾಣಿ ಪತ್ರಿಕೆಯ ವರದಿಗಾರ ಚೇತನ್‍ರಾಂ ಇರಂತಕಜೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮಂಗಳೂರು ಪ್ರೆಸ್‍ಕ್ಲಬ್‍ನಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಹಲವು ಮಂದಿ ಹಿರಿಯ ಪತ್ರಕರ್ತರು ಚೇತನ್‍ರಾಂ ಇರಂತಕಜೆ ಅವರ ಒಡನಾಟ, ಅವರ ಸಾಮಾಜಿಕ ಚಟುವಟಿಕೆಗಳನ್ನು ಸ್ಮರಿಸಿಕೊಂಡರು.

ಪತ್ರಕರ್ತರಾದ ರೊನಾಲ್ಡ್ ಅನಿಲ್ ಫೆರ್ನಾಂಡಿಸ್, ಪಿ.ಬಿ.ಹರೀಶ್ ರೈ, ಹರೀಶ್ ಬಂಟ್ವಾಳ್ ಮೊದಲಾದವರು ನುಡಿನಮನ ಸಲ್ಲಿಸಿದರು. ಬಳಿಕ ಚೇತನ್‍ರಾಂ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಲಾಯಿತು.

ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಹಾಗೂ ಮಾಜಿ ಕೆ.ಸಿ.ಡಿ.ಸಿ. ಅಧ್ಯಕ್ಷ ಕಳ್ಳಿಗೆ ತಾರನಾಥ ಶೆಟ್ಟಿ ಚೇತನ್‍ರಾಂ ಇರಂತಕಜೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ದ. ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಪತ್ರಕರ್ತರಾದ ಪುಪ್ಪರಾಜ್ ಬಿ. ಎನ್, ಇಬ್ರಾಹಿಂ ಅಡ್ಕಸ್ಥಳ, ಸುಕೇಶ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯಕ್ ಇಂದಾಜೆ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Please enter your comment!
Please enter your name here