ಧರ್ಮಸ್ಥಳಕ್ಕೆ ಜರ್ಮನಿಯ ವ್ಯೂತ್ರ್ಸ್ ಬುರ್ಗ್ ವಿಶ್ವ ವಿದ್ಯಾಲಯದ ಇಂಡಾಲಜಿ ವಿಭಾಗದ ಪ್ರಾಧ್ಯಾಪಕಿ ಪ್ರೊ.ಡಾ.ಕಾರೀನ್ ಸ್ಟೈನರ್ ಭೇಟಿ

ಧರ್ಮಸ್ಥಳಕ್ಕೆ ಜರ್ಮನಿಯ ವ್ಯೂತ್ರ್ಸ್ ಬುರ್ಗ್ ವಿಶ್ವ ವಿದ್ಯಾಲಯದ ಇಂಡಾಲಜಿ ವಿಭಾಗದ ಪ್ರಾಧ್ಯಾಪಕಿ ಪ್ರೊ.ಡಾ.ಕಾರೀನ್ ಸ್ಟೈನರ್ ಭೇಟಿ

ಧರ್ಮಸ್ಥಳ: ಜರ್ಮನಿಯ ವ್ಯೂತ್ರ್ಸ್ ಬುರ್ಗ್ ವಿಶ್ವವಿದ್ಯಾಲಯದ ಇಂಡಾಲಜಿ ವಿಭಾಗದ ಪ್ರಾಧ್ಯಾಪಕಿ ಪ್ರೊ.ಡಾ.ಕಾರೀನ್ ಸ್ಟೈನರ್‍ರವರಿಗೆ ನಂದಿನಾಗರಿ ಲಿಪಿಯ ಸಾಹಿತ್ಯವೊಂದು ದೊರಕಿತು. ಸ್ವತಃ ಸಂಸ್ಕøತ, ಕನ್ನಡಭಾಷೆ ಮತ್ತು ಸಾಹಿತ್ಯದ ಅಧ್ಯಯನಶೀಲರಾದ ಪ್ರೊ.ಡಾ.ಕಾರೀನ್ ಸ್ಟೈನರ್‍ರವರು ಈ ನಂದಿನಾಗರಿ ಲಿಪಿಯಲ್ಲಿರುವ ‘ಕಾಲಜ್ಞಾನ’ ಎಂಬ ಹೆಸರಿನ ಜ್ಯೋತಿಷ ಸಾಹಿತ್ಯವನ್ನು ಕನ್ನಡ ಭಾಷೆಗೆ ಭಾಷಾಂತರ ಮಾಡುವ ತಜ್ಞರನ್ನು ಹುಡುಕುತ್ತಿರುವ ಸಂದರ್ಭದಲ್ಲಿ ದ.ಕ. ಜಿಲ್ಲೆಯ ಖ್ಯಾತ ಕನ್ನಡ,ತುಳುಭಾಷೆಯ ವಿದ್ವಾಂಸರಾದ ಪ್ರೊ. ಡಾ.ಬಿ.ಎ. ವಿವೇಕ್ ರೈಯವರನ್ನು ಸಂಪರ್ಕಿಸಿದರು.

dharmastala

ಈ ಲಿಪಿಯ ಅಧ್ಯಯನಶೀಲರಾದ ತಜ್ಞರನ್ನು ಪರಿಚಯಿಸಿಕೊಡಿ ಎಂದು ಕೇಳಿಕೊಂಡಾಗ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸಂಸ್ಕøತಿ ಸಂಶೋಧನ ಪ್ರತಿಷ್ಠಾನದ ಡಾ.ವಿಘ್ನರಾಜ್‍ರ ಪರಿಚಯ ತಿಳಿಸಿದರು. ತಾಳೆಗರಿ ಗ್ರಂಥದ ಪ್ರತಿಗಳನ್ನು ಡಾ.ಹೆಗ್ಗಡೆಯವರಿಗೆ ಕಳುಹಿಸಿದರು. ಅವರ ಆದೇಶದಂತೆ ಡಾ. ವಿಘ್ನರಾಜ್ ನಂದಿನಾಗರಿ ಲಿಪಿಯಲ್ಲಿರುವ ಕಾಲಜ್ಞಾನ ಗ್ರಂಥವನ್ನು ಯಶಸ್ವಿಯಾಗಿ ಅಧ್ಯಯನ ಮಾಡಿ ಕನ್ನಡ ಲಿಪಿಗೆ ಲಿಪ್ಯಂತರ ಮಾಡಿ ಡಾ.ವಿವೇಕ್ ರೈಯರವರಿಗೆ ಕಳುಹಿಸಿಕೊಟ್ಟರು.

ಇತ್ತೀಚೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿರುವ ಪ್ರಾಚ್ಯ ವಿದ್ಯಾಸಂಸ್ಥೆ ಪ್ರತಿಷ್ಠಾನಕ್ಕೆ ಪ್ರೊ.ಡಾ.ಕಾರೀನ್ ಸ್ಟೈನರ್‍ಯವರು ಡಾ.ಬಿ.ಎ.ವಿವೇಕ್ ರೈ ಹಾಗೂ ಸಂಶೋಧಕಿ ಪರಿತಿಲ, ಮೋಹನಾಶ್ರಮ, ಜರ್ಮನಿ ಅವರೊಂದಿಗೆ ಭೇಟಿ ನೀಡಿ, ತಮ್ಮ ಸಂಸ್ಥೆಯಲ್ಲಿ ನಡೆದಿರುವ ವಿದ್ವತ್ತಿನ ಕಾರ್ಯ ಹಾಗೂ ಹಸ್ತಪ್ರತಿ ಸಂರಕ್ಷಣೆಯ ಕಾರ್ಯದ ಬಗ್ಗೆ ಮೆಚ್ಚುಗೆವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಡಾ. ಹೆಗ್ಗಡೆಯವರ ಸಮಕ್ಷಮದಲ್ಲಿ ತಮ್ಮ ಕೆಲಸದ ಸಹಾಯಕ್ಕಾಗಿ ಡಾ.ವಿಘ್ನರಾಜ್‍ರವನ್ನು ಗೌರವಿಸಿದರು.

Leave a Reply

Please enter your comment!
Please enter your name here